ಲೆಜೆಂಡ್ಸ್ ಲೀಗ್ ಕ್ರಿಕೆಟ್: ಭಿಲ್ವಾರಾ ಕಿಂಗ್ಸ್ ವಿರುದ್ಧ ಇಂಡಿಯಾ ಕ್ಯಾಪಿಟಲ್ಸ್‌ಗೆ ಭರ್ಜರಿ ಜಯ
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋದಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ 4ನೇ ಪಂದ್ಯದಲ್ಲಿ ಭಿಲ್ವಾರ ಕಿಂಗ್ಸ್ ವಿರುದ್ಧ 78 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಭಿಲ್ವಾರ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಡಿಯಾ ಕ್ಯಾಪಿಟಲ್ಸ್ ಪರವಾಗಿ ಆರಂಭಿಕರಾಗಿ ಗೌತಮ್ ಗಂಭಿರ್, ಸೋಲೋಮನ್ ಮೈರ್ ಕಣಕ್ಕಿಳಿದರು. ಗೌತಮ್ ಗಂಭೀರ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹ್ಯಾಮಿಲ್ಟನ್ ಮಸಕದ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು.
ಸೋಲೋಮನ್ ಮೈರ್ 38 ಎಸೆತಗಳಲ್ಲಿ 7 ಬೌಂಡರಿ 6 ಸಿಕ್ಸರ್ ನೆರವಿನಿಂದ 82 ರನ್ ಗಳಿಸಿದರು. ಹ್ಯಾಮಿಲ್ಟನ್ ಮಸಕದ ಕೂಡ 30 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ 2 ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. ನಂತರ ಬಂದ ದಿನೇಶ್ ರಾಮ್ದಿನ್ 21 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು. ಅಂತಿಮವಾಗಿ ಇಂಡಿಯಾ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.

ಭಿಲ್ವಾರ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ
199 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಿಲ್ವಾರ ಕಿಂಗ್ಸ್ ತಂಡದ ಪರವಾಗಿ ಯಾವೊಬ್ಬ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಇಂಡಿಯಾ ಕ್ಯಾಪಿಟಲ್ಸ್ ಬೌಲರ್ ಗಳ ಸಂಘಟಿತ ದಾಳಿಗೆ ನಲುಗಿದ ಭಿಲ್ವಾರ ಕಿಂಗ್ಸ್ ತಂಡ ಅಂತಿಮವಾಗಿ 19.2 ಓವರ್ ಗಳಲ್ಲಿ 120 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಭಿಲ್ವಾರ ಕಿಂಗ್ಸ್ ಪರವಾಗಿ ನಮನ್ ಓಜಾ 20 ರನ್ ಗಳಿಸಿದರೆ, ತನ್ಮಯ್ ಶ್ರೀವಾಸ್ತವ 24 ರನ್ ಗಳಿಸಿದರು. ಉಳಿದಂತೆ ನಿಕ್ ಕಾಂಪ್ಟನ್ (1), ಮ್ಯಾಟ್ ಪ್ರಿಯರ್ (8), ರಾಜೇಶ್ ಬಿಷ್ಣೋಯಿ (15), ಯೂಸುಫ್ ಪಠಾಣ್ (14), ಇರ್ಫಾನ್ ಪಠಾಣ್ (17), ಟಿಮ್ ಬ್ರೆಸ್ನನ್ (4), ಮಯಾಂಕ್ ತೆಹ್ಲನ್ (2), ಟಿನೋ ಬೆಸ್ಟ್ (0), ಗೆ ಔಟಾದರು.
ಇಂಡಿಯಾ ಕ್ಯಾಪಿಟಲ್ಸ್ ಪರವಾಗಿ ಪ್ರವೀಣ್ ತಾಂಬೆ 4 ಓವರ್ ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರೆ, ಪಂಕಜ್ ಸಿಂಗ್ 3 ಓವರ್ ಬೌಲಿಂಗ್ ಮಾಡಿ 17 ರನ್ ನೀಡಿ 2 ವಿಕೆಟ್ ಪಡೆದರು. ರಜತ್ ಭಾಟಿಯಾ 1.2 ಓವರ್ ಗಳಲ್ಲಿ 6 ರನ್ ನೀಡಿ 2 ವಿಕೆಟ್ ಪಡೆದರು.
ಇಂಡಿಯಾ ಕ್ಯಾಪಿಟಲ್ಸ್ ತಂಡ
ಗೌತಮ್ ಗಂಭೀರ್ (ನಾಯಕ), ಹ್ಯಾಮಿಲ್ಟನ್ ಮಸಕಡ್ಜಾ, ಸೊಲೊಮನ್ ಮಿರೆ, ದಿನೇಶ್ ರಾಮ್ದಿನ್, ಫರ್ವೀಜ್ ಮಹರೂಫ್, ಆಶ್ಲೇ ನರ್ಸ್, ಲಿಯಾಮ್ ಪ್ಲಂಕೆಟ್, ಮಿಚೆಲ್ ಜಾನ್ಸನ್, ಪಂಕಜ್ ಸಿಂಗ್, ಪ್ರವೀಣ್ ತಾಂಬೆ, ಪವನ್ ಸುಯಲ್
ಭಿಲ್ವಾರ ಕಿಂಗ್ಸ್ ತಂಡ
ನಮನ್ ಓಜಾ, ನಿಕ್ ಕಾಂಪ್ಟನ್, ಮ್ಯಾಟ್ ಪ್ರಯರ್, ತನ್ಮಯ್ ಶ್ರೀವಾಸ್ತವ, ಯೂಸುಫ್ ಪಠಾಣ್, ರಾಜೇಶ್ ಬಿಷ್ಣೋಯ್, ಇರ್ಫಾನ್ ಪಠಾಣ್ (ನಾಯಕ), ದಿನೇಶ್ ಸಾಲುಂಖೆ, ಟಿನೋ ಬೆಸ್ಟ್, ಫಿಡೆಲ್ ಎಡ್ವರ್ಡ್ಸ್, ಮಾಂಟಿ ಪನೇಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications