
ಕ್ರಿಕೆಟ್ ಅಭಿಮಾನಿಗಳಿಗೆ 2022ರ ಜನವರಿ ತಿಂಗಳಿನಲ್ಲಿ ಮತ್ತೊಂದು ವಿಭಿನ್ನ ಟಿ20 ಕ್ರಿಕೆಟ್ ಲೀಗ್ ಮನರಂಜಿಸಲು ಸಜ್ಜಾಗಿದೆ. ವಿಶ್ವ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿರುವ ದಿಗ್ಗಜ ಆಟಗಾರರ ಟೂರ್ನಿ ಎನಿಸಿಕೊಂಡಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಈ ತಿಂಗಳು ಆರಂಭವಾಗಲಿದೆ. ಈ ಟೂರ್ನಿಯ ಆರಂಭಿಕ ಆವೃತ್ತಿ ಇದಾಗಿದ್ದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ಈ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಮೂರು ತಂಡಗಳು ಭಾಗವಹಿಸುತ್ತಿವೆ. ಇಂಡಿಯಾ ಮಹಾರಾಜಾಸ್, ಏಷ್ಯಾ ಲಯನ್ಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳು ಕಣಕ್ಕಿಳಿಯುತ್ತಿದೆ. ಮಹಾರಾಜಾಸ್ ತಂಡ ಭಾರತೀಯ ಆಟಗಾರರನ್ನು ಒಳಗೊಂಡಿರುವ ತಂಡವಾಗಿದ್ದರೆ ಏಷ್ಯಾ ಲಯನ್ಸ್ ತಂಡ ಭಾರತವನ್ನು ಹೊರತುಪಡಿಸಿ ಉಪಖಂಡದ ಉಳಿದ ದೇಶಗಳ ಆಟಗಾರರನ್ನು ಒಳಗೊಂಡಿದೆ. ಇನ್ನು ವರ್ಲ್ಡ್ ಜೈಂಟ್ಸ್ ತಂಡದಲ್ಲಿ ವಿಶ್ವದ ಇತರ ದೇಶಗಳ ಪ್ರಮುಖ ಸ್ಟಾರ್ ಕ್ರಿಕೆಟಿಗರನ್ನು ಒಳಗೊಂಡಿದೆ. ಹೀಗಾಗಿ ಈ ಟೂರ್ನಿಯ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಈ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ.
ಜನವರಿ 20 ರಿಂದ ಆರಂಭವಾಗಲಿರುವ ಈ ಟೂರ್ನಿ ಜನವರಿ 29ಕ್ಕೆ ಫೈನಲ್ ಪಂದ್ಯ ನಡೆಯುವ ಮೂಲಕ ತೆರೆಕಾಣಲಿದೆ. ಗ್ರೂಪ್ ಹಂತದಲ್ಲಿ ಮೂರು ತಮಡಗಳು ಕೂಡ ಎರಡು ಸುತ್ತಿನಲ್ಲಿ ಮುಖಾಮುಖಿಯಾಗಲಿದೆ. ಅದಾದ ಬಳಿಕ ಅಗ್ರ ಎರಡು ತಂಡಗಳು ಫೈನಲ್ ಹಂತಕ್ಕೆ ಪ್ರವೇಶಿಸಲಿದೆ.
ಭಾಗವಹಿಸುತ್ತಿರುವ ತಂಡಗಳ ಆಟಗಾರರ ಪಟ್ಟಿ ಹೀಗಿದೆ:
ಇಂಡಿಯಾ ಮಹಾರಾಜಾಸ್ ಸ್ಕ್ವಾಡ್: ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಬದರಿನಾಥ್, ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಂಗ್ ಬದಾನಿ, ವೇಣುಗೋಪಾಲ್ ರಾವ್, ಮುನಾಫ್ ಪಟೇಲ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ ಮತ್ತು ಅಮಿತ್ ಭಂಡಾರಿ
ಏಷ್ಯಾ ಲಯನ್ಸ್ ಸ್ಕ್ವಾಡ್: ಶೋಯೆಬ್ ಅಖ್ತರ್, ಶಾಹಿದ್ ಅಫ್ರಿದಿ, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಕಮ್ರಾನ್ ಅಕ್ಮಲ್, ಚಾಮಿಂಡಾ ವಾಸ್, ರೋಮೇಶ್ ಕಲುವಿತಾರಣ, ತಿಲಕರತ್ನೆ ದಿಲ್ಶನ್, ಅಜರ್ ಮಹಮೂದ್, ಉಪುಲ್ ತರಂಗ, ಮಿಸ್ಬಾ-ಉಲ್-ಹಕ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಮೊಹಮ್ಮದ್ ಯೂಸುಫ್, ಮತ್ತು ಉಮರ್ ಗುಲ್, ಅಸ್ಗರ್ ಅಫ್ಘಾನ್
ವರ್ಲ್ಡ್ ಜೈಂಡ್ಸ್ ಸ್ಕ್ವಾಡ್: ಡೇರೆನ್ ಸ್ಯಾಮಿ, ಡೇನಿಯಲ್ ವೆಟ್ಟೋರಿ, ಬ್ರೆಟ್ ಲೀ, ಜಾಂಟಿ ರೋಡ್ಸ್, ಕೆವಿನ್ ಪೀಟರ್ಸನ್, ಇಮ್ರಾನ್ ತಾಹಿರ್, ಓವೈಸ್ ಶಾ, ಹರ್ಷಲ್ ಗಿಬ್ಸ್, ಅಲ್ಬಿ ಮೊರ್ಕೆಲ್, ಮೋರ್ನೆ ಮೊರ್ಕೆಲ್, ಕೋರಿ ಆಂಡರ್ಸನ್, ಮಾಂಟಿ ಪನೇಸರ್, ಬ್ರಾಡ್ ಹ್ಯಾಡಿನ್, ಕೆವಿನ್ ಒ'ಬ್ರಿನ್ ಟೇನ್, ಮತ್ತು ಬ್ರೆಂಡನ್ ಟೇಲರ್
ಜನವರಿ 20, 2022: ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್, ರಾತ್ರಿ 8 ಗಂಟೆಗೆ
ಜನವರಿ 21, 2022: ವಲ್ಡ್ ಜೈಂಟ್ಸ್ vs ಏಷ್ಯಾ ಲಯನ್ಸ್, ರಾತ್ರಿ 8 ಗಂಟೆಗೆ
ಜನವರಿ 22, 2022: ವರ್ಲ್ಡ್ ಜೈಂಟ್ಸ್ vs ಭಾರತ ಮಹಾರಾಜರು, ರಾತ್ರಿ 8 ಗಂಟೆಗೆ
ಜನವರಿ 24, 2022: ಏಷ್ಯಾ ಲಯನ್ಸ್ vs ಭಾರತ ಮಹಾರಾಜರು, ರಾತ್ರಿ 8 ಗಂಟೆಗೆ
ಜನವರಿ 26, 2022: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್, ರಾತ್ರಿ 8 ಗಂಟೆಗೆ
ಜನವರಿ 27, 2022: ಏಷ್ಯಾ ಲಯನ್ಸ್ vs ವರ್ಲ್ಡ್ ಜೈಂಟ್ಸ್, ರಾತ್ರಿ 8 ಗಂಟೆಗೆ
ಜನವರಿ 29, 2022: ಫೈನಲ್ ಪಂದ್ಯ, ರಾತ್ರಿ 8 ಗಂಟೆಗೆ