Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡಿಯಾ ಮಹಾರಾಜಾಸ್ ತಂಡಕ್ಕೆ 171 ರನ್‌ಗಳ ಗುರಿ ನೀಡಿದ ವರ್ಲ್ಡ್ ಜೈಂಟ್ಸ್

Legends League Cricket: India Maharajas need 171 runs to win against World Giants

ಸ್ವಾತಂತ್ರ್ಯೋತ್ಸವದ 75ನೇ ಸಂಭ್ರಮದ ಹಿನ್ನೆಲೆಯಲ್ಲಿ ಆಯೋಜನೆಯಾಗಿರುವ ಇಂಡಿಯಾ ಮಹಾರಾಜಾಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳ ನಡುವಿನ ಹಣಾಹಣಿ ನಡೆಯುತ್ತಿದೆ. ಈ ವಿಶೇಷ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿರುವ ವರ್ಲ್ಟ್ ಜೈಂಟ್ಸ್ ತಂಡ 170 ರನ್‌ಗಳನ್ನು ಗಳಿಸದೆ. ಈ ಮೂಲಕ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಸವಾಲಿನ ಗುರಿ ನಿಗದಿಪಡಿಸಿದೆ.

ವರ್ಲ್ಡ್ ಜೈಂಟ್ಸ್ ತಂಡದ ಪರವಾಗಿ ಕೆವಿನ್ ಓಬ್ರಿಯಾನ್ ಭರ್ಜರಿ ಅರ್ಧ ಶತಕ ಸಿಡಿಸಿ ಮಿಂಚಿದ್ದು ದಿನೇಶ್ ರಾಮ್‌ದಿನ್ ಸ್ಪೋಟಕ 42 ರನ್‌ಗಳನ್ನು ಗಳಿಸಿದ್ದಾರೆ. ಉಳಿದಂತೆ ತಿಸರ ಪೆರೆರ ಅವರಿಂದ 23 ರನ್‌ಗಳ ಕೊಡುಗೆ ಬಂದಿದೆ. ಹೀಗಾಗಿ ವರ್ಲ್ಡ್ ಜೈಂಟ್ಸ್ ತಂಡ ಭರ್ಜರಿ 170 ರನ್‌ಗಳನ್ನು ಗಳಿಸಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ದೊಡ್ಡ ಮೊತ್ತದ ಗುರಿ ನೀಡಿದೆ.

ಇನ್ನು ಬೌಲಿಂಗ್‌ನಲ್ಲಿ ಭಾರತದ ಪರವಾಗಿ ಪಂಕಜ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ನಾಲ್ಕು ಓವರ್‌ಗಳ ಬೌಲಿಂಗ್ ಕೋಟಾದಲ್ಲಿ ಕೇವಲ 26 ರನ್‌ಗಳನ್ನು ನೀಡಿ 5 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ನಾಯಕ ಹರ್ಭಜನ್ ಸಿಂಗ್, ಜೋಗಿಂದರ್ ಶರ್ಮಾ ಹಾಗೂ ಮೊಹಮ್ಮದ್ ಕೈಫ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಇಂಡಿಯಾ ಮಹಾರಾಜಾಸ್: ವೀರೇಂದ್ರ ಸೆಹ್ವಾಗ್, ತನ್ಮಯ್ ಶ್ರೀವಾಸ್ತವ, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಮೊಹಮ್ಮದ್ ಕೈಫ್, ಮನ್ವಿಂದರ್ ಬಿಸ್ಲಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್ (ನಾಯಕ), ಜೋಗಿಂದರ್ ಶರ್ಮಾ, ಪಂಕಜ್ ಸಿಂಗ್, ಎಸ್ ಶ್ರೀಶಾಂತ್, ಅಶೋಕ್ ದಿಂಡಾ
ಬೆಂಚ್: ಸೌರವ್ ಗಂಗೂಲಿ, ಆರ್ಪಿ ಸಿಂಗ್, ಎಸ್ ಬದ್ರಿನಾಥ್, ಸ್ಟುವರ್ಟ್ ಬಿನ್ನಿ, ಅಜಯ್ ಜಡೇಜಾ, ರೀತೀಂದರ್ ಸೋಧಿ, ನಮನ್ ಓಜಾ, ಪರ್ವಿಂದರ್ ಅವಾನಾ

ವರ್ಲ್ಡ್ ಜೈಂಟ್ಸ್: ಕೆವಿನ್ ಒ ಬ್ರಿಯಾನ್, ಹ್ಯಾಮಿಲ್ಟನ್ ಮಸಕಡ್ಜಾ, ಜಾಕ್ವೆಸ್ ಕಾಲಿಸ್ (ನಾಯಕ), ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ತಿಸಾರಾ ಪೆರೆರಾ, ಟಟೆಂಡ ಟೈಬು, ರೋಮೇಶ್ ಕಲುವಿತಾರಣ, ಡೇನಿಯಲ್ ವೆಟ್ಟೋರಿ, ಟಿಮ್ ಬ್ರೆಸ್ನಾನ್, ಮಾಂಟಿ ಪನೇಸರ್, ಫಿಡೆಲ್ ಎಡ್ವರ್ಡ್ಸ್, ಮುತ್ತಯ್ಯ ಮುರಳೀಧರನ್
ಬೆಂಚ್: ಹರ್ಷಲ್ ಗಿಬ್ಸ್, ಲೆಂಡ್ಲ್ ಸಿಮನ್ಸ್, ಸನತ್ ಜಯಸೂರ್ಯ, ಇಯಾನ್ ಮಾರ್ಗನ್, ಜಾಂಟಿ ರೋಡ್ಸ್, ಬ್ರೆಟ್ ಲೀ, ಮಿಚೆಲ್ ಜಾನ್ಸನ್, ಡೇಲ್ ಸ್ಟೇನ್, ಅಸ್ಗರ್ ಅಫ್ಘಾನ್, ಮುಶ್ರಫೆ ಮೊರ್ತಾಜಾ, ನಾಥನ್ ಮೆಕಲಮ್, ಮ್ಯಾಟ್ ಪ್ರಯರ್

Story first published: Friday, September 16, 2022, 21:52 [IST]
Other articles published on Sep 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+