ಹಾಲಿ ಚಾಂಪಿಯನ್ ಭಾರತ ಚಾಂಪಿಯನ್ಸ್ ಸೇರಿದಂತೆ ವಿಶ್ವದ 6 ದೇಶಗಳ ತಂಡಗಳು ಇಂಗ್ಲೇಂಡ್‌ನಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಭಾಗವಹಿಸುತ್ತವೆ. ಈ ಪಂದ್ಯವಾಳಿಯಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಪಾಕಿಸ್ತಾನ ತಂಡ ಸಹ ಭಾಗವಹಿಸುತ್ತಿದೆ. ಎಲ್ಲರ ಗಮನ ಸೆಳೆದಿದ್ದ ಭಾರತ ಹಾಗೂ ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯ ಜುಲೈ 20 ರಂದು ನಡೆಯಲಿದೆ. ಇಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಕಾದಾಟ ನಡೆಸಲಿವೆ
ಈ ಪ್ರತಿಷ್ಠಿತ ಲೀಗ್‌ನಲ್ಲಿ ವಿಶ್ವದ ಮಾಜಿ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ಪರ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತಿ ಪಡೆದಿರುವ ಎಬಿಡಿ ವಿಲಿಯರ್ಸ್ ಆಡಲಿದ್ದಾರೆ. ಆಸ್ಟ್ರೇಲಿಯಾ ತಂಡದ ಪರ ಬ್ರೆಟ್ ಲೀ, ಕ್ರಿಸ್ ಲಿನ್ ಮತ್ತು ಪೀಟರ್ ಸಿಡ್ಲ್ ಆಡುವುದನ್ನು ಅಭಿಮಾನಿಗಳು ಕಣ್ಣು ತುಂಬಿ ಕೊಳ್ಳಬಹುದು. ಭಾರತದ ಪರವೂ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದು ಭರವಸೆ ಮೂಡಿಸಿದೆ.

ಎಲ್ಲ ತಂಡಗಳು ಪ್ರತಿ ತಂಡಗಳ ವಿರುದ್ಧವೂ ತಲಾ ಒಂದೊಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯಲಿವೆ. ಅಂಕ ಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆದಿರುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಆಗಸ್ಟ್ 2 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪಂದ್ಯಾವಳಿಯ ಅಂತಿಮ ಪಂದ್ಯ ನಡೆಯಲಿದೆ.
ಭಾರತದಲ್ಲಿ ಈ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ.
ದಿನಕ್ಕೆ ಎರಡು ಪಂದ್ಯಗಳನ್ನು ಆಡಿಸಲಾಗುತ್ತದೆ. ಮೊದಲ ಪಂದ್ಯ ಸಂಜೆ 5ಕ್ಕೆ ಆರಂಭವಾದ್ರೆ, ಇನ್ನೊಂದು ಪಂದ್ಯ ರಾತ್ರಿ 9ಕ್ಕೆ ಆರಂಭವಾಗಲಿದೆ.
ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿಈ ಪಂದ್ಯವನ್ನು ಅಭಿಮಾನಿಗಳು ವೀಕ್ಷಿಸಬಹುದಾಗಿದೆ.
ಭಾರತ ತಂಡ: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಹರ್ಭಜನ್ ಸಿಂಗ್, ಸುರೈಶ್ ರೈನಾ, ಇರ್ಫಾನ್ ಪಠಾಣ್, ಯುಸೂಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಪಿಯುಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ವಿನಯ್ ಕುಮಾರ್, ವರುಣ್ ಏರೋನ್, ಅಭಿಮನ್ಯು ಮಿಥುನ್, ಸಿದ್ಧಾರ್ಥ್ ಕೌಲ್, ಗುರುಕೀರ್ತ್ ಮನ್,
ಜು.20: ಪಾಕಿಸ್ತಾನ್ ಚಾಂಪಿಯನ್ಸ್, ಎಡ್ಜ್‌ಬಸ್ಟಮ್, ರಾತ್ರಿ 9ಕ್ಕೆ
ಜು.22, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್, ನಾರ್ತಂಪ್ಟನ್, ಸಂಜೆ 5ಕ್ಕೆ
ಜು.26, ಆಸ್ಟ್ರೇಲಿಯಾ ಚಾಂಪಿಯನ್ಸ್, ಹೆಡಿಂಗ್ಲಿ, ಸಂಜೆ 5ಕ್ಕೆ
ಜು.27 ಇಂಗ್ಲೆಂಡ್ ಚಾಂಪಿಯನ್ಸ್, ಹೆಡಿಂಗ್ಲಿ, ಸಂಜೆ 5ಕ್ಕೆ
ಜು.29, ವೆಸ್ಟ್ ಇಂಡೀಸ್ ಚಾಂಪಿಯನ್ಸ್, ಲೀಸೆಸ್ಟರ್, ರಾತ್ರಿ 9ಕ್ಕೆ
ಸೆಮಿಫೈನಲ್ ಜುಲೈ 31
ಫೈನಲ್ ಆಗಸ್ಟ್ 2