For Quick Alerts
ALLOW NOTIFICATIONS  
For Daily Alerts
 

ಷೂಮೇಕರ್, ಪೆರೆಜ್ ಹಿಂದಿಕ್ಕಿದ ಹ್ಯಾಮಿಲ್ಟನ್: 2020 ಎಫ್‌-1 ವಿಶೇಷತೆಗಳು

Lewis Hamilton surpasses Schumacher, Perezs long wait

ಅಬುಧಾಬಿ: ಫಾರ್ಮುಲಾ 1 2020ರ ಸೀಸನ್‌ನಲ್ಲಿ ಬ್ರಿಟಿಷ್ ರೇಸಿಂಗ್ ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್ ಅದ್ಭುತ ಸಾಧನೆ ತೋರಿದ್ದಾರೆ. 2020ರ ಫಾರ್ಮುಲಾ-1 ಸೀಸನ್ ಆರಂಭವಾಗಬೇಕು ಅನ್ನುವಾಗಲೇ ಕೊರೊನಾವೈರಸ್ ಒಕ್ಕರಿಸಿಕೊಂಡಿತ್ತು. ಹೀಗಾಗಿ ನಾಲ್ಕು ತಿಂಗಳು ತಡವಾಗಿ ಆರಂಭವಾದ ಫಾರ್ಮುಲಾ-1 ಅಂತೂ 2020ರ ಮುಕ್ತಾಯ ಹಂತಕ್ಕೆ ಬಂದಿದೆ.

2020ರ ವೇಳಾಪಟ್ಟಿಯಂತೆ ಒಟ್ಟು ಫಾರ್ಮುಲಾ-1 17 ರೇಸ್‌ಗಳು ನಡೆದಿವೆ. ಇದರಲ್ಲಿ ಹೆಚ್ಚಿನ ರೇಸ್‌ಗಳನ್ನು ಗೆದ್ದಿರುವ ಲೂಯಿಸ್ ಹ್ಯಾಮಿಲ್ಟನ್ ಏಳನೇ ಬಾರಿಗೆ ರೇಸರ್‌ಗಳಲ್ಲಿ ಟಾಪರ್ ಆಗಿ ಕಂಡು ಬಂದಿದ್ದಾರೆ. ಈ ವರ್ಷ ಹ್ಯಾಮಿಲ್ಟನ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ 11 ರೇಸ್‌ಗಳನ್ನು ಗೆದ್ದಿದ್ದಾರೆ.

2020ರ ಫಾರ್ಮುಲಾ-1 ಸೀಸನ್‌ನ ಕೆಲವು ವಿಶೇಷತೆಗಳ ಅಂಕಿ-ಅಂಶಗಳು ಇಲ್ಲಿವೆ
* 7 - ಮರ್ಸಿಡಿಸ್ ಚಾಲಕ ಹ್ಯಾಮಿಲ್ಟನ್ ಈಗ ಹೆಚ್ಚು ಎಫ್ 1 ಪ್ರಶಸ್ತಿಗಳನ್ನು ಹೊಂದಿರುವ ಚಾಲಕನಾಗಿ ಮೈಕೆಲ್ ಷೂಮೇಕರ್ ಅವರಿಗೆ ಸಮನಾಗಿ ನಿಂತಿದ್ದಾರೆ. ಹ್ಯಾಮಿಲ್ಟನ್ ಒಟ್ಟು 7 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 7 ಸಿಲ್ವರ್ ಆ್ಯರೋಗಳು.
* 95 - 2020ರ ಸೀಸನ್‌ನಲ್ಲಿ ಹ್ಯಾಮಿಲ್ಟನ್ ಅವರು ಮೈಕಲ್ ಷೂಮೇಕರ್ ಹೆಸರಿನಲ್ಲಿದ್ದ 91 ರೇಸ್‌ ಜಯಗಳ ದಾಖಲೆ ಮೀರಿಸಿದ್ದಾರೆ. ಹ್ಯಾಮಿಲ್ಟನ್ ಒಟ್ಟುಗೆ 95 ರೇಸ್ ಗೆದ್ದ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲಿ 11 2020ರಲ್ಲಿ ಸಿಕ್ಕ ಗೆಲುವುಗಳು.
* 53.377 - ಮರ್ಸಿಡಿಸ್‌ನ ವಾಲ್ಟೆರಿ ಬಾಟಾಸ್ ಎಫ್ 1 ಇತಿಹಾಸದಲ್ಲಿ ಅತಿ ವೇಗದ ಪೋಲ್ ಸ್ಥಾನವನ್ನು ದಾಖಲಿಸಿದೆ (ಸಖೀರ್ ಜಿಪಿಯಲ್ಲಿ 53.377 ಸೆಕೆಂಡುಗಳು).
* 14 - ಹ್ಯಾಮಿಲ್ಟನ್ 14 ನೇರ ಋತುವಿನಲ್ಲಿ (2007 ರಿಂದ 2020 ರವರೆಗೆ) ಪೋಲ್ ಸ್ಥಾನವನ್ನು ಹೊಂದಿದ್ದಾರೆ. ಷೂಮೇಕರ್ ಈ ಹಿಂದೆ ಅಂತಹ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದರು (1994 ರಿಂದ 2006 ರವರೆಗೆ 13).

Story first published: Wednesday, December 16, 2020, 21:07 [IST]
Other articles published on Dec 16, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+