RCB ತಂಡ ಸೇರುತ್ತಿದ್ದಂತೆ ಸ್ಫೋಟಿಸಿದ ಇಂಗ್ಲೆಂಡ್ ಬ್ಯಾಟರ್
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಇಂಗ್ಲೆಂಡ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ (Liam Livingstone), ತಂಡ ಸೇರುತ್ತಿದ್ದಂತೆ ಅಂಗಳದಲ್ಲಿ ಅಬ್ಬರಿಸಿದ್ದಾರೆ. ಇಂಗ್ಲೆಂಡ್ ಆಲ್‌ರೌಂಡರ್‌ಗೆ ಆರ್‌ಸಿಬಿ 8.75 ಕೋಟಿ ಖರ್ಚು ಮಾಡಿ ತಂಡಕ್ಕೆ ಸೇರಿಸಿಕೊಂಡಿದೆ. ಈ ಹರಾಜು ಆದ ಬಳಿಕ ಲಿಯಾಮ್ ಸ್ಫೊಟಕ ಬ್ಯಾಟಿಂಗ್ ಪ್ರದರ್ಶಿಸಿ, ಗಮನ ಸೆಳೆದಿದ್ದಾರೆ. ಇವರು ಅಬುದಾಬಿ ಟಿ10 ಕ್ರಿಕೆಟ್ ಲೀಗ್‌ನಲ್ಲಿ ಆರ್ಭಟ ನಡೆಸಿದ್ದು, ಬೆಂಗಳೂರು ತಂಡದ ಅಭಿಮಾನಿಗಳು ಫುಲ್ ಖುಷ್ ಆಗುವಂತೆ ಮಾಡಿದೆ.
ಅಬುದಾಬಿ ಟಿ10 ಕ್ರಿಕೆಟ್ ಲೀಗ್‌ನಲ್ಲಿ ಡೆಲ್ಲಿ ಬುಲ್ಸ್ ಹಾಗೂ ಬಂಗಾಳ ಟೈಗರ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 10 ಓವರ್‌ಗಳಲ್ಲಿ 6 ವಿಕೆಟ್‌ಗೆ 123 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಂಗಾಲ ಟೈಗರ್ಸ್ 9.4 ಓವರ್‌ಗಳಲ್ಲಿ 3 ವಿಕೆಟ್‌ಗೆ 124 ರನ್ ಸೇರಿಸಿತು. ಈ ಗೆಲುವಿನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಅಬ್ಬರ ನಡೆಸಿದ್ದರಿಂದ ಗೆಲುವು ಸಾಧಿಸಿತು.

ಟಿ10 ಕ್ರಿಕೆಟ್‌ನಲ್ಲಿ ಅಬ್ಬರ
ಸದ್ಯ ಅಬುದಾಬಿ ಟಿ10 ಲೀಗ್ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಲಿವಿಂಗ್‌ಸ್ಟೋನ್ ಅಬ್ಬರದ ಆಟವನ್ನು ಆಡಿದರು. ಈ ಟೂರ್ನಿಯಲ್ಲಿ ಬಂಗಾಲ ಟೈಗರ್ಸ್ ಪರ ಅಮೋಘ ಬ್ಯಾಟ್ ಮಾಡಿದ ಲಿವಿಂಗ್‌ಸ್ಟೋನ್ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಈ ಟೂರ್ನಿಯ 18 ನೇ ಪಂದ್ಯದಲ್ಲಿ, ಲಿವಿಂಗ್ಸ್ಟೋನ್ ಡೆಲ್ಲಿ ಬುಲ್ಸ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದರು. ಇಂಗ್ಲೆಂಡ್ ಆಟಗಾರ 15 ಎಸೆತಗಳಲ್ಲಿ ಅಜೇಯ ಅರ್ಧಶತಕವನ್ನು ಸಿಡಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 3 ಬೌಂಡರಿ ಹಾಗೂ 5 ಸಿಕ್ಸರ್‌ಗಳು ಸೇರಿವೆ.
ಆರ್‌ಸಿಬಿ ಪರ ಆಡಲಿರುವ ಲಿಯಾಮ್
ಆರ್‌ಸಿಬಿ ಸಹ ಇವರಲ್ಲಿನ ಆಲ್‌ರೌಂಡರ್ ಆಟವನ್ನು ಗುರುತಿಸಿ ಇವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇವರಿಗಾಗಿ ಆರ್‌ಸಿಬಿ ಬಹಳ ಹಣವನ್ನು ನೀಡಿತು. ಇವರು ತಂಡದ ಪರ ಮಿಡ್ಲ್ ಆರ್ಡರ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಇವರ ಹೆಗಲಿಗೆ ಫಿನಿಷರ್ ರೋಲ್ ಹೊರಿಸುವ ಸಾಧ್ಯತೆ ಇದೆ. ಇವರು ಸ್ಪಿನ್ ಬೌಲಿಂಗ್ ಸಹ ನಡೆಸುವ ಅನುಭವ ಹೊಂದಿದ್ದಾರೆ. ಇವರನ್ನು ಪಂಜಾಬ್ ಕಿಂಗ್ಸ್ ಕೈ ಬಿಟ್ಟಿತ್ತು. ಇವರನ್ನು ಕೊಳ್ಳುವಲ್ಲಿ ಆರ್‌ಸಿಬಿ ಸಫಲವಾಗಿದೆ.

ಲಿವಿಂಗ್‌ಸ್ಟೋನ್ ಸಾಧನೆ
ಲಿಯಾಮ್ ಲಿವಿಂಗ್‌ಸ್ಟೋನ್ ಐಪಿಎಲ್‌ನಲ್ಲಿ 39 ಪಂದ್ಯಗಳನ್ನು ಆಡಿದ್ದು162.45 ಸ್ಟ್ರೈಕ್ ರೇಟ್‌ನಲ್ಲಿ 939 ರನ್ ಬಾರಿಸಿದ್ದಾರೆ. ಈ ವೇಳೆ ಅವರು 6 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ 22 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿ 11 ವಿಕೆಟ್ ಪಡೆದಿದ್ದಾರೆ. ಲಿವಿಂಗ್ ಸ್ಟೋನ್ ಅವರು 2019ರಂದು ಐಪಿಎಲ್ ಪದಾರ್ಪಣೆ ಮಾಡಿದರು. ಮತ್ತು ಈ ವರೆಗೆ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications