Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಟ್ಸ್‌ಮನ್‌ ಆಗಿ ಗಂಭೀರ್ ಬ್ಯಾಟಿಂಗನ್ನು ಇಷ್ಟಪಡುತ್ತೇನೆ ಆದರೆ..: ಶಾಹಿದ್ ಅಫ್ರಿದಿ

Like Gambhir’s Batting But As A Person, He Has Some Problems: Shahid Afridi

ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹಾಗೂ ಶಾಹಿದ್ ಅಫ್ರಿದಿ ಮಧ್ಯೆ ಕ್ರಿಕೆಟ್ ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಅನೇಕ ಬಾರಿ ಮಾತಿನ ಚಕಮಕಿಗಳು ನಡೆದಿದೆ. ಇಬ್ಬರೂ ಕ್ರಿಕೆಟಿಗರು ನಿವೃತ್ತಿಯನ್ನು ಪಡೆದುಕೊಂಡಿದ್ದರೂ ವೈಯಕ್ತಕವಾಗಿ ಈ ಇಬ್ಬರು ಕ್ರಿಕೆಟಿಗರ ನಡುವಿನ ವೈಮನಸ್ಸು ಮುಂದುವರಿದಿದೆ.

ಇತ್ತೀಚೆಗೆ ಶಾಹಿದ್ ಅಫ್ರಿದಿ ಭಾರತ ಪ್ರಧಾನಿ ಬಗ್ಗೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಆಡಿದ ಮಾತುಗಳಿಗೂ ಅತ್ಯಂತ ಖಾರವಾಗಿ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದರು. ಈಗ ಗೌತಮ್ ಗಂಭೀರ್ ಬಗ್ಗೆ ಶಾಹಿದ್ ಅಫ್ರಿದಿ ಮಾತನ್ನಾಡಿದ್ದು ಬ್ಯಾಟ್ಸ್‌ಮನ್ ಆಗಿ ಗೌತಮ್ ಗಂಭೀರ್ ಇಷ್ಟ ಎಂದಿದ್ದಾರೆ.

ಕ್ರಿಕೆಟರ್ ಆಗಿ ಗಂಭೀರ್ ಬ್ಯಾಟಿಂಗ್ ಇಷ್ಟ

ಕ್ರಿಕೆಟರ್ ಆಗಿ ಗಂಭೀರ್ ಬ್ಯಾಟಿಂಗ್ ಇಷ್ಟ

ನಾನೊಬ್ಬ ಕ್ರಿಕೆಟರ್ ಆಗಿ, ಬ್ಯಾಟ್ಸ್‌ಮನ್ ಆಗಿ ಗಂಭೀರ್ ಅವರ ಬ್ಯಾಟಿಂಗ್‌ಅನ್ನು ಯಾವಾಗಲೂ ಇಷ್ಟಪಡುತ್ತೇನೆ. ಆದರೆ ಮನುಷ್ಯನಾಗಿ ಆತ ಒಮ್ಮೊಮ್ಮೆ ಒಂದಿಂದು ವಿಚಾರಗಳನ್ನು ಹೇಳುತ್ತಾನೆ. ಆತನಲ್ಲಿ ಈ ಸಮಸ್ಯೆಯಿದೆ. ಈ ಬಗ್ಗೆ ಆತನ ಫಿಸಿಯೋ ಹೇಳಿಕೊಂಡಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಪ್ಯಾಡಿ ಆಪ್ಟನ್ ಹೇಳಿಕೆ ಉಲ್ಲೇಖಿಸಿದ ಅಫ್ರಿದಿ

ಪ್ಯಾಡಿ ಆಪ್ಟನ್ ಹೇಳಿಕೆ ಉಲ್ಲೇಖಿಸಿದ ಅಫ್ರಿದಿ

ಗೌತಮ್ ಗಂಭಿರ್ ವಿಚಾರವಾಗಿ ಟೀಮ್ ಇಂಡಿಯಾದ ಮೆಂಟಲ್ ಕಂಡೀಶನರ್ ಆಗಿ 2009-2011ರವರೆಗೆ ಕರ್ತವ್ಯದಲ್ಲಿದ್ದ ಪ್ಯಾಡಿ ಆಪ್ಟನ್ ಹೇಳಿಕೆಯನ್ನು ಅಫ್ರಿದಿ ಉಲ್ಲೇಖಿಸಿದ್ದಾರೆ. ಆಪ್ಟನ್ ತಮ್ಮ ಪುಸ್ತಕದಲ್ಲಿ ಗಂಭಿರ್ ಬಗ್ಗೆ "ಶತಕಗಳಿಸಿದ ನಂತರವೂ ಗೌತಮ್ ಗಂಭೀರ್ ಸಂಕಟದಲ್ಲಿರುತ್ತಿದ್ದರು ಮತ್ತು ಮಾಡಿದ ತಪ್ಪಿಗೆ ಒತ್ತಡವನ್ನು ಅನುಭವಿಸುತ್ತಿದ್ದರು" ಎಂದು ಬರೆದುಕೊಂಡಿದ್ದರು.

ದುರ್ಬಲ ಮನಸ್ಸಿನ ವ್ಯಕ್ತಿ ಗಂಭೀರ್

ದುರ್ಬಲ ಮನಸ್ಸಿನ ವ್ಯಕ್ತಿ ಗಂಭೀರ್

ಮಾನಸಿಕ ಕಠಿಣತೆಯ ಬಗ್ಗೆ ಜನಪ್ರಿಯ ವಿಧಾನದ ಮೂಲಕ "ನಾನು ಕೆಲಸ ಮಾಡಿದ ಅತ್ಯಂತ ದುರ್ಬಲ ಮತ್ತು ಮಾನಸಿಕವಾಗಿ ಹೆಚ್ಚು ಅಸುರಕ್ಷಿತ ವ್ಯಕ್ತಿಗಳಲ್ಲಿ ಗೌತಮ್ ಗಂಭೀರ್ ಒಬ್ಬರಾಗಿದ್ದರು ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು.

ಪರ್ಫೆಕ್ಟ್ ಉತ್ತರ ನೀಡಿದ್ದ ಗಂಭೀರ್

ಪರ್ಫೆಕ್ಟ್ ಉತ್ತರ ನೀಡಿದ್ದ ಗಂಭೀರ್

ಪ್ಯಾಡಿ ಆಪ್ಟನ್ ತಮ್ಮ ಪುಸ್ತಕದಲ್ಲಿ ಬರೆದ ವಿಚಾರವಾಗಿ ಗೌತ್ ಗಂಭೀರ್ ತೀಕ್ಷ್ಣವಾಗಿ ಉತ್ತರವನ್ನು ನಿಡಿದ್ದರು. "ನಾನು ನನ್ನ ತಂಡ ಭಾರತವನ್ನು ಯಾವಾಗಲೂ ಅತ್ಯುತ್ತಮವಾಗಿರಲು ಬಯಸುತ್ತಿದ್ದೆ. ಆದ ಕಾರನದಿಂದಾಗಿಯೇ ನಾನು ಶತಕಗಳಿಸಿದ ನಂತರವೂ ತೃಪ್ತನಾಗುತ್ತಿರಲಿಲ್ಲ. ಅದರಿಮದ ಅದರಲ್ಲಿ ತಪ್ಪಿದೆ ಎಂದು ನನಗನಿಸಿಲ್ಲ. ನನಗಾಗಿ ನನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸಿದ್ದೆ' ಎಂದು ಗಂಭೀರ್ ಉತ್ತರವನ್ನು ನೀಡಿದ್ದರು.

Story first published: Sunday, July 19, 2020, 14:21 [IST]
Other articles published on Jul 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+