ಅಂಡರ್ 19 ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಿದೆ. ಈ ಟೂರ್ನಿಯಲ್ಲಿ ಭವಿಷ್ಯದ ತಾರೆಗಳ ಉಗಮವಾಗುತ್ತದೆ. ಟೀಮ್ ಇಂಡಿಯಾದ ಅಟಗಾರರು ಸಹ ಈ ಟೂರ್ನಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಆದರೆ ಭಾರತದ ಹೆಸರನ್ನೇ ಹೋಲುವ ಹೆಸರು ಬೇರೆ ತಂಡಗಳಲ್ಲಿ ಕಾಣಿಸಿಕೊಂಡಾಗ ಅದರ ಬಗ್ಗೆ ಆಸಕ್ತಿ ಹೆಚ್ಚುತ್ತದೆ.
ನ್ಯೂಜಿಲೆಂಡ್ ತಂಡದಲ್ಲಿ ಇತ್ತೀಚಿಗೆ ಹೆಸರು ಮಾಡಿದ ಸ್ಟಾರ್ ಯುವ ಆಟಗಾರ ರಚಿನ್ ರವೀಂದ್ರ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಾಗ ಭಾರತೀಯರು ಆತನ ಮೂಲವನ್ನು ಹುಡುಕುವ ಪ್ರಯತ್ನ ನಡೆಸಿದರು. ರಚಿನ್ ರವೀಂದ್ರಗೆ ಭಾರತದ ಕಲೆಕ್ಷನ್ ಇರೋದನ್ನು ತಿಳಿದು ಅಚ್ಚರಿ ಪಟ್ಟರು. ಅಷ್ಟೇ ಏಕೆ ಇವರಿಗೆ ಬೆಂಗಳೂರಿನ ನಂಟು ಇರುವುದನ್ನು ಕಂಡು ನಿಬ್ಬೆರಗಾಗಿದ್ದರು.

ರಚಿನ್ ರವೀಂದ್ರ ಎಂಬ ಆಟಗಾರ ಕಳೆದ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಪರ ಸಾಕಷ್ಟು ಸುದ್ದಿ ಮಾಡಿದ್ದರು. ರಚಿನ್ ಭಾರತೀಯ ಮೂಲದವರು. ಆದರೆ ಅವರು ನ್ಯೂಜಿಲೆಂಡ್ ಪರ ಕ್ರಿಕೆಟ್ ಆಡುತ್ತಿದ್ದಾರೆ. ಇಡೀ ಟೂರ್ನಿಯಲ್ಲಿ ಕಿವೀಸ್ ಪರ ರಚಿನ್ 565 ರನ್ ಸಿಡಿಸಿ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದ್ದರು. ಈ ಅವಧಿಯಲ್ಲಿ ಅವರು 3 ಶತಕ ಮತ್ತು ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ರಚಿನ್ ರವೀಂದ್ರ ರೀತಿ ಭಾರತದ ಮೂಲದ ಇನ್ನೋರ್ವ ಪ್ಲೇಯರ್ ಅಂಡರ್ 19 ವಿಶ್ವಕಪ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.
ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಸ್ನೇಹಿತ್ ರೆಡ್ಡಿ ಅವರು ಐಸಿಸಿ ಅಂಡರ್-19 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಶತಕಗಳನ್ನು ಗಳಿಸಿದ್ದಾರೆ.
ಸ್ನೇಹಿತ್ 125 ಎಸೆತಗಳಲ್ಲಿ 147 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್‌ನಲ್ಲಿ ಸ್ನೇಹಿತ್ 11 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು.
ಸ್ನೇಹಿತ್ ರೆಡ್ಡಿ ಅವರು 2007 ರಲ್ಲಿ ಭಾರತದ ವಿಜಯವಾಡದಲ್ಲಿ ಜನಿಸಿದರು. ಅವರು 6 ತಿಂಗಳ ಮಗುವಾಗಿದ್ದಾಗ, ಅವರ ಕುಟುಂಬವು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಸ್ಥಳಾಂತರಗೊಂಡಿತು. ನ್ಯೂಜಿಲೆಂಡ್ ಪರ 19 ವರ್ಷದೊಳಗಿನವರ ಕ್ರಿಕೆಟ್ ಆಡುವ ಮೊದಲು, ಅವರು ಈಗಾಗಲೇ ಅಂಡರ್ 17 ರಲ್ಲಿ ತಮ್ಮ ಆಟದ ಮೂಲಕ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಬ್ಯಾಟಿಂಗ್ ಜೊತೆಗೆ ಆಫ್ ಸ್ಪಿನ್ ಬೌಲಿಂಗ್ ಕೂಡ ಇವರು ಮಾಡಬಲ್ಲರು.
7 ವರ್ಷಗಳ ಕಾಲ ಆಕ್ಲೆಂಡ್‌ನಲ್ಲಿ ವಾಸಿಸಿದ ನಂತರ, ಸ್ನೇಹಿತ್ ಅವರ ಕುಟುಂಬ 2014 ರಲ್ಲಿ ಹ್ಯಾಮಿಲ್ಟನ್‌ಗೆ ಸ್ಥಳಾಂತರಗೊಂಡಿತು. ಸ್ನೇಹಿತ್ ಅವರ ಕುಟುಂಬವು ಹ್ಯಾಮಿಲ್ಟನ್‌ನ ವಿಕ್ಟೋರಿಯಾದಲ್ಲಿ ಕೆಫೆಯನ್ನು ನಡೆಸಲು ಪ್ರಾರಂಭಿಸಿತು. ಸ್ನೇಹಿತ್ ಬಾಲ್ಯದಿಂದಲೂ ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಿದ್ದರು, ಏಕೆಂದರೆ ಅವರ ತಂದೆ ಹ್ಯಾಮಿಲ್ಟನ್‌ನಲ್ಲಿ ಕ್ಲಬ್ ಮಟ್ಟದಲ್ಲಿ ಆಡುತ್ತಿದ್ದರು. ಅವರನ್ನು ನೋಡಿ ಸ್ನೇಹಿತ್ ಕೂಡ ಆಡತೊಡಗಿದ. ಸ್ನೇಹಿತ್ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಆಡಲು ಪ್ರಾರಂಭಿಸಲು ಇದೇ ಕಾರಣ.

ಸ್ನೇಹಿತ್ ಕೇವಲ 15 ನೇ ವಯಸ್ಸಿನಲ್ಲಿ ಉತ್ತರ ಜಿಲ್ಲೆ ಎ ಪರ ಆಡುವ ಅವಕಾಶ ಪಡೆದರು. ಅಂದಿನಿಂದ, ಅವರು ಹಿಂತಿರುಗಿ ನೋಡಲಿಲ್ಲ ಮತ್ತು ನಿರಂತರವಾಗಿ ತಮ್ಮ ಆಟದಿಂದ ಎಲ್ಲರನ್ನೂ ಆಕರ್ಷಿಸಿದರು ಮತ್ತು ನ್ಯೂಜಿಲೆಂಡ್‌ಗಾಗಿ ಅಂಡರ್ -17 ತಂಡದಲ್ಲಿ ಸ್ಥಾನ ಪಡೆದರು.
ಸ್ನೇಹಿತ್ ರೆಡ್ಡಿ ಅಂಡರ್-17 ಕ್ರಿಕೆಟ್‌ನಲ್ಲಿ ಮಾಜಿ ನ್ಯೂಜಿಲೆಂಡ್ ಕ್ರಿಕೆಟಿಗ ಬಿಜೆ ವಾಟ್ಲಿಂಗ್ ಅವರಿಂದ ಪ್ರಭಾವಿತರಾದರು ಮತ್ತು ಅವರು ಸ್ನೇಹಿತ್‌ಗೆ ತರಬೇತಿ ನೀಡಲು ಪ್ರಾರಂಭಿಸಿದರು. ಸ್ನೇಹಿತ್ ರೆಡ್ಡಿ ಅವರು ನ್ಯೂಜಿಲೆಂಡ್ ದಂತಕಥೆ ಕೇನ್ ವಿಲಿಯಮ್ಸನ್ ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸಿದ್ದಾರೆ.