ಸಿಂಹದ ಜತೆ ಸೆಲ್ಪಿ: ಜಡೇಜಗೆ 20 ಸಾವಿರ ರು ದಂಡ!
ಅಹಮದಾಬಾದ್, ಆಗಸ್ಟ್ 09: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಆಲ್ ರೌಂಡರ್ ರವೀಂದ್ರ ಜಡೇಜ ಅವರು 'ಸೆಲ್ಫಿ ವಿತ್ ಸಿಂಹ' ಕೇಸಿನಿಂದ ಬಚಾವಾಗಿದ್ದಾರೆ. ಗುಜರಾತಿನ ಗಿರ್ ಅಭಯಾರಣ್ಯದಲ್ಲಿ ಸಿಂಹದೊಂದಿಗೆ ಸೆಲ್ಫಿ ತೆಗೆದುಕೊಂಡು ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿದ್ದ ಜಡೇಜ ಅವರಿಗೆ ಕೇವಲ 20 ಸಾವಿರ ರು ದಂಡ ವಿಧಿಸಲಾಗಿದೆ.
ಕ್ರಿಕೆಟರ್ ರವೀಂದ್ರ ಜಡೇಜ ಅವರ ಪರ ಅವರ ಮಾವ ಹರ್ದೇವ್ಸಿಂಗ್ ಸೋಲಂಕಿ ಅವರು ಗುಜರಾತ್ ಅರಣ್ಯ ಇಲಾಖೆಗೆ 20 ಸಾವಿರ ರು ದಂಡ ಪಾವತಿಸಿದ್ದಾರೆ.[ಸಿಂಹಗಳ ಜತೆ ಸೆಲ್ಫಿ, ಕ್ರಿಕೆಟರ್ ಜಡೇಜ ವಿರುದ್ಧ ತನಿಖೆ!]

ಆದರೆ, ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಶೀಘ್ರ ಅರಣ್ಯ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುವುದು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು. ಪ್ರವಾಸಿಗರನ್ನು ಸಿಂಹಗಳ ಹತ್ತಿರ ಬಿಟ್ಟ ಅರಣ್ಯ ಸಿಬ್ಬಂದಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಸನ್, ಜುನಾಗಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಸಿಂಗ್ ಹೇಳಿದ್ದಾರೆ.
ಜೂನ್ 17 ರಂದು ಗಿರ್ ಅಭಯಾರಣ್ಯಕ್ಕೆ ಬಂದಿದ್ದ ರವೀಂದ್ರ ಜಡೇಜ ದಂಪತಿಗೆ ಜೀಪ್ನಿಂದ ಕೆಳಗಿಳಿದು ಸೆಲ್ಫಿ ತೆಗೆದುಕೊಳ್ಳಲು ಕೆಲ ಅರಣ್ಯ ಸಿಬ್ಬಂದಿ ನೆರವಾಗಿದ್ದರು. ಈ ರೀತಿ ತೆಗೆದ ಸೆಲ್ಫಿ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ತಿಳಿದ ಅರಣ್ಯ ಇಲಾಖೆ, ಪ್ರಕರಣ ದಾಖಲಿಸಿಕೊಂಡಿತ್ತು.(ಪಿಟಿಐ)
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications