ಪಾಕಿಸ್ತಾನದ ಬೀದಿಗಳಲ್ಲಿ ಮೆಸ್ಸಿ ನೋಡಿದ ಆಸೀಸ್ ಪ್ಲೆಯರ್ ಶಾಕ್
ಪಾಕಿಸ್ತಾನದಲ್ಲಿ ಸದ್ಯ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನಡೆಯುತ್ತಿದೆ. 11ನೇ ಆವೃತ್ತಿಯ ಪಿಎಸ್‌ಎಲ್‌ನಲ್ಲಿ ಹಲವು ವಿದೇಶಿ ಆಟಗಾರರು ಭಾಗವಹಿಸುತ್ತಿದ್ದಾರೆ. ಇದರಲ್ಲಿ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗದ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಲೀಗ್‌ನಲ್ಲಿ ಆಸ್ಟ್ರೇಲಿಯಾದ ಸೂಪರ್ ಸ್ಟಾರ್ ಆಟಗಾರ ಉಸ್ಮಾನ್ ಖವಾಜ ಸಹ ಬ್ಯಾಟ್ ಮಾಡುತ್ತಿದ್ದಾರೆ. ಆಸೀಸ್ ಬ್ಯಾಟ್ಸ್‌ಮನ್ ರಾವಲ್ಪಿಂಡಿ ಪಿಂಡೀಸ್ ತಂಡದ ಭಾಗವಾಗಿದ್ದಾರೆ.
ಈ ಲೀಗ್‌ನಲ್ಲಿ ಭಾಗವಿಸುವ ವೇಳೆ ಖವಾಜ ಅವರು ಪಾಕಿಸ್ತಾನದಲ್ಲಿ ವಿಶೇಷ ವ್ಯಕ್ತಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ. ಮೆಸ್ಸಿಯಂತಹ ಕಾಣುವ ವ್ಯಕ್ತಿಯನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖವಾಜ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ.

ಇತ್ತೀಚಿಗೆ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಭೇಟಿ ನೀಡಿದ್ದರು. ಮೆಸ್ಸಿ ಎಂದಿಗೂ ಪಾಕ್‌ಗೆ ಭೇಟಿ ನೀಡಿಲ್ಲ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಪಾಕಿಸ್ತಾನದಲ್ಲಿ ಅವರಂತೆಯೇ ಕಾಣುವ ವ್ಯಕ್ತಿಯನ್ನು ನೋಡಿದ್ದಾರೆ. ಅವರನ್ನು ನೋಡಿದ ತಕ್ಷಣ, ಅವರಿಗೆ ಪೋಸ್ ನೀಡಲು ಕೇಳಿಕೊಂಡರು, ವೀಡಿಯೊ ಮಾಡಿ, ಇದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕೆಳಗಡೆ ನಾನು ಪಾಕಿಸ್ತಾನದಲ್ಲಿ ಮೆಸ್ಸಿಯನ್ನು ನೋಡಿದ್ದೇನೆ ಎಂದು ನಂಬಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಖವಾಜ ಎರಡು ನಗುವಿನ ಎಮೋಜಿ ಹಾಕಿಕೊಂಡಿದ್ದಾರೆ.
ಖವಾಜ ಸಾಧನೆ
ಖವಾಜಾ ಅವರ ಪೋಸ್ಟ್‌ಗೆ ಅಭಿಮಾನಿಗಳಿಂದ ಭಿನ್ನ ಹಾಗೂ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಅನೇಕ ಜನರು ಆ ವ್ಯಕ್ತಿಯನ್ನು ಮೆಸ್ಸಿ ಅಲ್ಲ, ಬದಲಾಗಿ ಶಾಹೀನ್ ಶಾ ಅಫ್ರಿದಿ ಎಂದು ಕರೆದರು.
39 ವರ್ಷದ ಉಸ್ಮಾನ್ ಖವಾಜಾ 2016 ರಲ್ಲಿ ಐಪಿಎಲ್ ಪಂದ್ಯವನ್ನು ಆಡಿದ್ದರು. ಆದರೆ ನಂತರ ಲೀಗ್‌ನಲ್ಲಿ ಯಾವುದೇ ತಂಡ ಅವರನ್ನು ಖರೀದಿಸಲು ಮುಂದಾಗಲಿಲ್ಲ. ಇವರು ಪಿಎಸ್‌ಎಲ್‌ನ ರಾವಲ್ಪಿಂಡಿ ತಂಡದಲ್ಲಿ ಸ್ಥಾನ ಪಡೆದರೂ ಸಹ ಇನ್ನು ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.
ಖವಾಜ ಆಸೀಸ್ ಪರ 88 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 42ರ ಸರಾಸರಿಯಲ್ಲಿ 6229 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 16 ಶತಕ ಹಾಗೂ 28 ಅರ್ಧಶತಕಗಳು ಸೇರಿವೆ. ಏಕದಿನ ಕ್ರಿಕೆಟ್‌ನಲ್ಲಿ 40 ಪಂದ್ಯಗಳನ್ನು ಆಡಿದ್ದು, 1554 ರನ್ ಕಲೆ ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications