For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕಾಮೆಂಟೇಟರ್‌ಗಳ ಪಟ್ಟಿ ಬಿಡುಗಡೆ, ಮಂಜ್ರೇಕರ್‌ಗಿಲ್ಲ ಅವಕಾಶ

List Of 7 Indian Commentators For The World Feed For The Upcoming Ipl Season

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕಳೆದ ಹಲವು ವರ್ಷಗಳಿಂದ ಕಾಮೆಂಟೇಟರ್ ಆಗಿ ಖ್ಯಾತರಾಗಿದ್ದಾರೆ. ಐಪಿಎಲ್‌ನಲ್ಲೂ ಬಹುತೇಕ ಎಲ್ಲಾ ಆವೃತ್ತಿಗಳಲ್ಲಿ ಮಂಜ್ರೇಕರ್ ವೀಕ್ಷಕ ವಿವರಣೆಯನ್ನು ನೀಡಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ಕಾಮೆಂಟೆರ್‌ಗಳ ಪಟ್ಟಿಯಿಂದ ನಿರೀಕ್ಷೆಯಂತೆಯೇ ಮಂಜ್ರೇಕರ್ ಹೊರಬಿದ್ದಿದ್ದಾರೆ.

ಮುಂಬೈ ಮಿರರ್ ವರದಿಯ ಪ್ರಕಾರ ಬಿಸಿಸಿಐ 7 ಕಾಮೆಂಟೆಟರ್‌ಗಳನ್ನು 13ನೇ ಆವೃತ್ತಿಯ ಐಪಿಎಲ್‌ಗೆ ಅಂತಿಮಗೊಳಿಸಿದೆ. ಸುನಿಲ್ ಗವಾಸ್ಕರ್, ಎಲ್ ಶಿವರಾಮ ಕೃಷ್ಣನ್, ಮುರಳಿ ಕಾರ್ತಿಕ್, ದೀಪ್‌ದಾಸ್‌ ಗುಪ್ತಾ, ರೋಹನ್ ಗವಾಸ್ಕರ್ ಹರ್ಷ ಭೋಗ್ಲೆ ಹಾಗೂ ಅಂಜುಮ್ ಚೋಪ್ರಾ ಈ ಬಾರಿಯ ಐಪಿಎಲ್‌ಗೆ ಕಾಮೆಂಟೇಟರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸಂಜಯ್ ಮಂಜ್ರೇಕರ್ ಕಳೆದ ವಿಶ್ವಕಪ್‌ನಲ್ಲಿ ಕಾಮೆಂಟೇರ್‌ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದರು. ಆದರೆ ಕೆಲ ವಿವಾದಾತ್ಮಕ ಹೇಳಿಕೆಗಳು ಮಂಜ್ರೇಕರ್‌ಗೆ ಮುಳುವಾಗಿದೆ. ಹೀಗಾಗಿ ಬಿಸಿಸಿಐ ತನ್ನ ಅಧಿಕೃತ ಕಾಮೆಂಟೇಟರ್‌ಗಳ ಪಟ್ಟಿಯಿಂದ ಮಂಜ್ರೇಕರ್ ಅವರನ್ನು ಕೈ ಬಿಟ್ಟಿತ್ತು.

3 ಕ್ರೀಡಾಂಗಣಗಳಲ್ಲಿ ಐಪಿಎಲ್ ನಡೆಯಲಿದ್ದು ದುಬೈ ಹಾಗೂ ಅಬುದಾಬಿಯಲ್ಲಿ ತಲಾ 21 ಪಂದ್ಯಗಳು ನಡೆದರೆ ಶಾರ್ಜಾದಲ್ಲಿ 14 ಪಂದ್ಯ ಆಯೋಜನೆಯಾಗಲಿದೆ. ಹೀಗಾಗಿ ಕಾಮೆಂಟೇರ್‌ಗಳು ಕೂಡ 2 ಜೈವಿಕ ವಲಯಗಳೊಂದಿಗೆ 3 ಕೇಂದ್ರ ಗಳಿಂದ ಕರ್ತವ್ಯ ನಿರ್ವಹಿಸಿಲಿದ್ದಾರೆ.

ಸೆಪ್ಟೆಂಬರ್ 19 ರಿಂದ ಐಪಿಎಲ್ ಆರಂಭವಾಗಲಿದೆ. ಆದರೆ ಕೆಲ ಕಾರಣಗಳಿಂದಾಗಿ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ತಡವಾಗಿದೆ. ಮತ್ತೊಂದೆಡೆ ಎಲ್ಲಾ ತಂಡಗಳು ತಮ್ಮ ಅಭ್ಯಾಸವನ್ನು ಈಗಾಗಲೇ ಆರಂಭಿಸಿದ್ದು ಟೂರ್ನಿಗೆ ಭರ್ಜರಿಯಾಗಿ ಸಿದ್ದವಾಗುತ್ತಿದೆ.

Story first published: Saturday, September 5, 2020, 16:39 [IST]
Other articles published on Sep 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+