ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!

ಲಂಡನ್, ಜೂನ್ 02: ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಬಿಟ್ಟರೆ ಏಷ್ಯಾದ ಬಲಿಷ್ಠ ತಂಡವಾಗಿ ಕಣಕ್ಕಿಳಿದಿರುವ ಬಾಂಗ್ಲಾದೇಶ ತಂಡ ತನ್ನ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡುವುದರ ಕಡೆಗೆ ಎದುರು ನೋಡುತ್ತದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು
ಅಂತೆಯೇ ಭಾನುವಾರ ಇಲ್ಲಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮಶ್ರಫೆ ಮೊರ್ತಾಝ ನಾಯಕತ್ವದ ಬಾಂಗ್ಲಾ ತಂಡ 50 ಓವರ್‌ಗಳಲ್ಲಿ 330/6 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
ಕಗಿಸೊ ರಬಾಡ ಮತ್ತು ಇಮ್ರಾನ್ ತಾಹಿರ್ ಅವರಂತಹ ವಿಶ್ವ ಶ್ರೇಷ್ಠ ಬೌಲರ್‌ಗ ಎದುರು ಭರ್ಜರಿ ಬ್ಯಾಟಿಂಗ್ ನಡೆಸಿದ ಬಾಂಗ್ಲಾ ತಂಡ ಒಡಿಐ ವಿಶ್ವಕಪ್ ಇತಿಹಾಸದಲ್ಲಿ ಮತ್ತು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಸಾರ್ವಕಾಲಿಕ ಗರಿಷ್ಠ ಮೊತ್ತ ದಾಖಲಿಸಿತು. ಒಂದು ವೇಳೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾದರೆ, ಅದು ವಿಶ್ವಕಪ್ ಇತಿಹಾಸದಲ್ಲಿ ದಾಖಲೆಯ ರನ್ ಚೇಸ್ ಎನಿಸಿಕೊಳ್ಳಲಿದೆ.
ಪಂದ್ಯದಲ್ಲಿ ಬಾಂಗ್ಲಾ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಶಾಕಿಬ್ ಅಲ್ ಹಸನ್ (75) ಮತ್ತು ವಿಕೆಟ್‌ಕೀಪರ್ ಬ್ಯಾಟ್ಸ್ಮನ್ ಮುಷ್ಫಿಕರ್ ರಹೀಮ್ (78) ಅರ್ಧಶತಕ ದಾಖಲಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಅನುಭವಿಗಳಾದ ಮಹ್ಮೂದುಲ್ಲಾ ಅಜೇಯ 46 ರನ್‌ಗಳ ಅತ್ಯಮೂಲ್ಯ ಕಾಣಿಕೆ ನೀಡಿದರು. ಇದಕ್ಕೂ ಮೊದಲು ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್ 42 ರನ್‌ಗಳನ್ನು ಚಚ್ಚಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು.
ಅಂದಹಾಗೆ ಬಾಂಗ್ಲಾದೇಶ ತಂಡ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿರುವ ಗರಿಷ್ಠ ಮೊತ್ತಗಳ ದಾಖಲೆ ಇಲ್ಲಿದೆ
330/6
ಎದುರಾಳಿ: ದಕ್ಷಿಣ ಆಫ್ರಿಕಾ, ವರ್ಷ: 2019, ಸ್ಥಳ: ಕೆನ್ನಿಂಗ್ಟನ್ ಓವಲ್, ಲಂಡನ್
329/6
ಎದುರಾಳಿ: ಪಾಕಿಸ್ತಾನ, ವರ್ಷ: 2015, ಸ್ಥಳ: ಢಾಕಾ
326/3
ಎದುರಾಳಿ: ಪಾಕಿಸ್ತಾನ, ವರ್ಷ: 2014, ಸ್ಥಳ: ಢಾಕಾ
324/5
ಎದುರಾಳಿ: ಶ್ರೀಲಂಕಾ, ವರ್ಷ: 2017, ಸ್ಥಳ: ದಂಬುಲಾ
322/4
ಎದುರಾಳಿ: ಸ್ಕಾಟ್ಲೆಂಡ್, ವರ್ಷ: 2015, ಸ್ಥಳ: ನೆಲ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications