ಭಾರತ vs ಇಂಗ್ಲೆಂಡ್: ಅಪರೂಪದ ದಾಖಲೆ ಪಟ್ಟಿ ಸೇರಿದ ಆರ್ ಅಶ್ವಿನ್

ಚೆನ್ನೈ: ಭಾರತದ ಬೌಲಿಂಗ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್ ಅಶ್ವಿನ್ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಆರ್ ಅಶ್ವಿನ್, 148 ಎಸೆತಗಳಲ್ಲಿ 106 ರನ್ ಬಾರಿಸಿ, 85.5ನೇ ಓವರ್‌ನಲ್ಲಿ ಆಲಿ ಸ್ಟೋನ್ ಎಸೆತಕ್ಕೆ ಬೌಲ್ಡ್ ಆಗಿ ನಿರ್ಗಮಿಸಿದರು. ಅಶ್ವಿನ್ ನಿರ್ಗಮಿಸುವಾಗಲೇ ದಾಖಲೆ ನಿರ್ಮಾಣವಾಗಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಪಂದ್ಯದಲ್ಲಿ 5+ ವಿಕೆಟ್ ಮತ್ತು ಶತಕ ಬಾರಿಸಿದ ಬಲು ಅಪರೂಪದ ದಾಖಲೆ ಅಶ್ವಿನ್ ಹೆಸರಿನಲ್ಲಿ ನಿರ್ಮಾಣವಾಗಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದ ಅಶ್ವಿನ್, ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಕೂಡ ಬಾರಿಸಿದ್ದರು. ಅಂದ್ಹಾಗೆ ಅಶ್ವಿನ್ ಈ ಸಾಧನೆ ಮಾಡುತ್ತಿರುವುದು ಮೂರನೇ ಸಾರಿ.
ಒಂದೇ ಟೆಸ್ಟ್‌ನಲ್ಲಿ 5 ವಿಕೆಟ್, ಶತಕದ ಸಾಧನೆ ಮಾಡಿರುವ ಆಟಗಾರರು
* ಇಯಾನ್ ಬೋಥಮ್, ಇಂಗ್ಲೆಂಡ್, 5 ಸಾರಿ
* ಆರ್ ಅಶ್ವಿನ್, ಭಾರತ, 3 ಸಾರಿ
* ಜಾಕ್ ಕ್ಯಾಲೀಸ್ (ದಕ್ಷಿಣ ಆಫ್ರಿಕಾ), ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಗಾರ್ಫೀಲ್ಡ್ ಸೋಬರ್ಸ್ (ವೆಸ್ಟ್ ಇಂಡೀಸ್), ಮುಷ್ತಾಕ್ ಮೊಹಮ್ಮದ್ (ಪಾಕಿಸ್ತಾನ) 2 ಸಾರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications