ಐಪಿಎಲ್‌ನಲ್ಲಿ ಅತೀ ಹೆಚ್ಚು ಸೂಪರ್ ಓವರ್ ಎಸೆದ ಬೌಲರ್‌ಗಳಿವರು

ನವದೆಹಲಿ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 5) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 20ನೇ ಪಂದ್ಯ ಅತ್ಯಂತ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಯಾಕೆಂದರೆ ಈ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೂಪರ್ ಓವರ್ ಪಂದ್ಯದಲ್ಲಿ ಸೆಣಸಾಡಿದ್ದವು.
ಸೂಪರ್ ಓವರ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನಿಂದ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ಮಾಡಿದ್ದರೆ, ಡೆಲ್ಲಿಯಿಂದ ಅಕ್ಷರ್ ಪಟೇಲ್ ಬೌಲಿಂಗ್ ಮಾಡಿದ್ದರು. ಆದರೆ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿತ್ತು. ಆದರೆ ಸೂಪರ್ ಓವರ್‌ನಲ್ಲಿ ಬೌಲಿಂಗ್ ಮಾಡಿದ್ದ ಇತ್ತಂಡಗಳ ಬೌಲರ್‌ಗಳೂ ಕೂಡ ವಿಶೇಷ ಸಾಧನೆಗಾಗಿ ಗುರುತಿಸಿಕೊಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗೆ 4 ವಿಕೆಟ್ ಕಳೆದು 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗೆ 7 ವಿಕೆಟ್ ಕಳೆದು 159 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತ್ತು. ಕೇನ್ ವಿಲಿಯಮ್ಸನ್ ಅಜೇಯ 66, ಜಗದೀಶ್ ಸುಚಿತ್ 14 ರನ್ ಗಳಿಸಿ ಪಂದ್ಯವನ್ನು ಸೂಪರ್ ಓವರ್ ಕಡೆಗೆ ಕೊಂಡೊಯ್ದಿದ್ದರು.
ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಸೂಪರ್ ಓವರ್‌ನಲ್ಲಿ ಬೌಲಿಂಗ್ ಮಾಡಿದ ಬೌಲರ್‌ಗಳು
* 4 ಜಸ್‌ಪ್ರೀತ್ ಬೂಮ್ರಾ
* 3 ರಶೀದ್ ಖಾನ್
* 2 ಮೊಹಮ್ಮದ್ ಶಮಿ
* 2 ಜೇಮ್ಸ್ ಫಾಲ್ಕ್‌ನರ್
* 2 ಕಾಗಿಸೊ ರಬಾಡ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications