Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿಯಲ್ಲಿ ಯಾರ್ಯಾರು, ಎಷ್ಟೆಷ್ಟು ಶತಕ ಬಾರಿಸಿದ್ದಾರೆ ಗೊತ್ತಾ?!

List of century contributers for Royal Challengers Bangalore in IPL

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಪ್‌ ಗೆಲ್ಲದ ತಂಡ ಎಂದು ಕರೆಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕಪ್‌ ಗೆದ್ದೇ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಈವರೆಗೆ ಆರ್‌ಸಿಬಿ ಆಡಿರುವ 4 ಪಂದ್ಯಗಳಲ್ಲಿ ನಾಲ್ಕರಲ್ಲೂ ಜಯ ದಾಖಲಿಸಿ ಹೊಸ ದಾಖಲೆ ನಿರ್ಮಿಸಿದೆ.

ತಂಡವೊಂದು ಐಪಿಎಲ್ ಆರಂಭಿಕ ನಾಲ್ಕೂ ಪಂದ್ಯಗಳನ್ನೂ ಗೆದ್ದ ದಾಖಲೆ ಇಲ್ಲ. ಈ ದಾಖಲೆ ನಿರ್ಮಿಸಿದ ಮೊದಲ ತಂಡವಾಗಿ ವಿರಾಟ್ ಕೊಹ್ಲಿ ನಾಯಕತ್ವದ ಕನ್ನಡಿಗರ ನೆಚ್ಚಿನ ತಂಡ ಆರ್‌ಸಿಬಿ ಗುರುತಿಸಿಕೊಂಡಿದೆ. ಗುರುವಾರದ ಐಪಿಎಲ್‌ ಪಂದ್ಯದಲ್ಲಿ ಗೆಲುವು ದಾಖಲಿಸುವುದರೊಂದಿಗೆ ಬೆಂಗಳೂರು ಈ ದಾಖಲೆಗೆ ಕಾರಣವಾಗಿದೆ.

ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ 10 ವಿಕೆಟ್‌ಗಳ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಓಪನರ್ ದೇವದತ್ ಪಡಿಕ್ಕಲ್ ಶತಕ ಬಾರಿಸಿದ್ದರು. ಕೇವಲ 52 ಎಸೆತಗಳಲ್ಲಿ ಪಡಿಕ್ಕಲ್ ಅಜೇಯ 101 ರನ್ ಕೊಡುಗೆ ನೀಡಿದ್ದರು.

ಪಡಿಕ್ಕಲ್ ಅಲ್ಲದೆ ಆರ್‌ಸಿಬಿ ಪರ ಇನ್ನೊಂದಿಷ್ಟು ಬ್ಯಾಟ್ಸ್‌ಮಮ್‌ಗಳು ಶತಕ ಬಾರಿಸಿದವರಿದ್ದಾರೆ. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್ ಈ ಸಾಲಿನಲ್ಲಿದ್ದಾರೆ. ಆರ್‌ಸಿಬಿ ಪರ ಅತೀ ಹೆಚ್ಚು ಬಾರಿ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲದೆ.

ಆರ್‌ಸಿಬಿಯಿಂದ ಅತೀ ಹೆಚ್ಚು ಬಾರಿ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳು
* ವಿರಾಟ್ ಕೊಹ್ಲಿ, 5 ಬಾರಿ
* ಕ್ರಿಸ್ ಗೇಲ್, 5 ಬಾರಿ
* ಎಬಿ ಡಿ ವಿಲಿಯರ್ಸ್, 2 ಬಾರಿ
* ದೇವದತ್ ಪಡಿಕ್ಕಲ್ 1 ಬಾರಿ

Story first published: Friday, April 23, 2021, 17:15 [IST]
Other articles published on Apr 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+