ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ಆಟಗಾರ್ತಿಯರ ಪಟ್ಟಿ
ಕ್ರಿಕೆಟ್ ಅಂಗಳದಲ್ಲಿ ದಿನವೂ ದಾಖಲೆಗಳು ಬದಲಾಗುತ್ತಲೇ ಇರುತ್ತವೆ. ಹಳೆಯ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಬರೆಯುವುದೇ ಯುವ ಆಟಗಾರರ ಕೆಲಸ. ಇದೇ ನಿಟ್ಟಿನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಸಾಧನೆ ಮಾಡಿದ್ದಾರೆ. ಬುಧವಾರ ರಾಜ್‌ಕೋಟ್‌ದಲ್ಲಿ ಐರ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧನಾ ಆರ್ಭಟ ಜೋರಾಗಿದೆ. ಇವರು ತಮ್ಮ ಧಮಾಕೆದಾರ ಸ್ಟೈಲ್‌ನಲ್ಲಿ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ವೇಗವಾಗಿ ಶತಕ ಬಾರಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
ಐರ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಅಮೋಘ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇವರು ಮೂರನೇ ಏಕದಿನ ಪಂದ್ಯದಲ್ಲಿ 80 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸೇರಿದಂತೆ 135 ರನ್ ಸಿಡಿಸಿದರು. ಇದು ಸ್ಮೃತಿ ಅವರ ಕ್ರಿಕೆಟ್ ಕರಿಯರ್‌ನ 10ನೇ ಏಕದಿನ ಶತಕವಾಗಿದೆ. ಸ್ಮೃತಿ ಹರ್ಮನ್ ಪ್ರೀತ್ ಕೌರ್ ದಾಖಲೆ ಅಳಿಸಿದರು. ಇವರು ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 87 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದರು.

ವೇಗವಾಗಿ ಶತಕ ಬಾರಿಸಿದ ಆಟಗಾರ್ತಿ ಯಾರು?
ಮಹಿಳಾ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರಿಗೆ ಸಲ್ಲುತ್ತದೆ. ಇವರು 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಇವರ ಆರ್ಭಟವನ್ನು ಕಂಡು ವಿಶ್ವವೇ ಬೆರಾಗಿತ್ತು. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೂ ಆಸೀಸ್ ಆಟಗಾರ್ತಿ ಸ್ಥಾನ ಪಡೆದಿದ್ದಾರೆ. ಇವರೇ ಕರೆನ್ ರೋಲ್ಟನ್ ಇವರು 57 ಎಸೆತಗಳಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದರು. ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ್ತಿ ಸೋಪಿಯಾ ಡಿವೈನ್‌ಗೂ ಈ ಪಟ್ಟಿಯಲ್ಲಿ ಸ್ಥಾನ ಇದ್ದು, ಇವರು 59 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ವೇಗದ ಶತಕ ಬಾರಿಸಿದ ಆಟಗಾರ್ತಿಯರು
ಮೆಗ್ ಲ್ಯಾನಿಂಗ್, ನ್ಯೂಜಿಲೆಂಡ್ ವಿರುದ್ಧ, 45 ಎಸೆತ
ಕರೆನ್ ರೋಲ್ಟನ್, ದಕ್ಷಿಣ ಆಫ್ರಿಕಾ ವಿರುದ್ಧ, 57 ಎಸೆತ
ಸೋಫಿ ಡಿವೈನ್, ಐರ್ಲೆಂಡ್ ವಿರುದ್ಧ, 59 ಎಸೆತ
ಹರ್ಷಿತಾ ಜಯಾಂಗನಿ, ನ್ಯೂಜಿಲೆಂಡ್ ವಿರುದ್ಧ, 60 ಎಸೆತ
ಮ್ಯಾಡಿ ಗ್ರೀನ್, ಐರ್ಲೆಂಡ್ ವಿರುದ್ಧ, 62 ಎಸೆತ
ನ್ಯಾಟ್ ಸ್ಕಿವರ್, ಶ್ರೀಲಂಕಾ ವಿರುದ್ಧ, 66 ಎಸೆತ
ಷಾರ್ಲೆಟ್ ಎಡ್ವರ್ಡ್ಸ್, ನ್ಯೂಜಿಲೆಂಡ್ ವಿರುದ್ಧ, 70 ಎಸೆತ
ಸ್ಮೃತಿ ಮಂಧನಾ, ಐರ್ಲೆಂಡ್ ವಿರುದ್ಧ, 70 ಎಸೆತ

ಭಾರತದ ಪರ ವೇಗದ ಶತಕ ಬಾರಿಸಿದ ಐದು ಆಟಗಾರ್ತಿಯರು
ಹರ್ಲೀನ್ ಡಿಯೋಲ್: ವೆಸ್ಟ್ ಇಂಡೀಸ್ ವಿರುದ್ಧ 98 ಎಸೆತ
ಜೆಮಿಮಾ ರೊಡ್ರಿಗಸ್: ಐರ್ಲೆಂಡ್ ವಿರುದ್ಧ 90 ಎಸೆತ
ಹರ್ಮನ್‌ಪ್ರೀತ್ ಕೌರ್: ಆಸ್ಟ್ರೇಲಿಯಾ ವಿರುದ್ಧ 90 ಎಸೆತ
ಹರ್ಮನ್‌ಪ್ರೀತ್ ಕೌರ್: ದಕ್ಷಿಣ ಆಫ್ರಿಕಾ ವಿರುದ್ಧ 87 ಎಸೆತ
ಸ್ಮೃತಿ ಮಂಧಾನ: ಐರ್ಲೆಂಡ್ ವಿರುದ್ಧ 70 ಎಸೆತ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications