T20 World Cup 2024: ಅತಿ ಹೆಚ್ಚು ಟಿ20 ವಿಶ್ವಕಪ್ ಆಡಿರುವ ಟೀಮ್ ಇಂಡಿಯಾ ಆಟಗಾರರು ಯಾರು ಗೊತ್ತೇ?
ಈಗಾಗಲೇ ಜಗತ್ತೇ ಕಾತುರದಿಂದ ಕಾಯುತ್ತಿರುವ 2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ 15 ಜನ ಸದಸ್ಯರ ಹೆಸರನ್ನು ಬಿಸಿಸೊಐ ಆಯ್ಕೆ ಸಮಿತಿ ಪ್ರಕಟಿಸಿದೆ.
ಈ ತಂಡದಲ್ಲಿ ಸ್ಥಾನ ಪಡೆದಿರುವ ಅನುಭವಿ ಆಟಗಾರರು ಇಲ್ಲಿವರೆಗೆ ಹಲವು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಆದರೆ ಈ ಸಾಲಿನಲ್ಲಿ ಮೊದಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅತ್ಯಧಿಕ ಟಿ20 ವಿಶ್ವಕಪ್ ಆವೃತ್ತಿಗಳನ್ನು ಆಡಿದ್ದಾರೆ. ಬಳಿಕ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ರವೀಂದ್ರ ಜಡೇಜಾ ಇದ್ದಾರೆ.

ಇದುವರೆಗಿನ ಟಿ20 ವಿಶ್ವಕಪ್‌ನ ಎಲ್ಲಾ 9 ಆವೃತ್ತಿಗಳಲ್ಲಿ ರೋಹಿತ್ ಶರ್ಮಾ ಭಾರತದ ಪರ ಕಣಕ್ಕೀಳಿದ್ದಾರೆ. ರೋಹಿತ್ 2007, 2009, 2010, 2012, 2014, 2016ರಲ್ಲಿ ಭಾರತ ತಂಡದ ಭಾಗವಾಗಿದ್ದರು. 2021ರಲ್ಲಿ ಉಪನಾಯಕ ಮತ್ತು 2022ರಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದರು. ಮುಂಬರುವ ಟಿ20 ವಿಶ್ವಕಪ್‌ಗೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಮುನ್ನೆಡೆಯುತ್ತಿರುವುದು ಹೆಮ್ಮೆ ವಿಷಯವಾಗಿದೆ.
ಎಲ್ಲಾ 9 ಟಿ20 ವಿಶ್ವಕಪ್‌ನ ಆವೃತ್ತಿಗಳನ್ನು ಆಡಿರುವ ರೋಹಿತ್ ಶರ್ಮಾ ಭಾರತ ಮೊದಲ ಆಟಗಾರ ಹಾಗು ವಿಶ್ವದ ಕೇವಲ ಇಬ್ಬರು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ತಂಡದ ಪರ ಎಲ್ಲಾ ಟಿ20 ವಿಶ್ವಕಪ್‌ನ ಆವೃತ್ತಿಗಳನ್ನು ಆಡಿದ್ದಾರೆ. ಈ ಮೂಲಕ ರೋಹಿತ್ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ರೋಹಿತ್ 2007ರ ಮೊದಲ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಚಾಂಪಿಯನ್ ಆದ ಭಾರತ ತಂಡದಲ್ಲಿದ್ದರು.
ರೋಹಿತ್ ನಂತರ ಎಂಎಸ್ ಧೋನಿ ಒಟ್ಟು 6 ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಟೀಮ್ ಇಂಡಿಯಾವನ್ನು ನಾಯಕರಾಗಿ ಮುನ್ನೆಡೆಸಿದ್ದಾರೆ. 2007ರ ಮೊದಲ ಆವೃತ್ತಿಯಲ್ಲೇ ಭಾರತವನ್ನು ಎಂಎಸ್ ಧೋನಿ ಚಾಂಪಿಯನ್ ಮಾಡಿದ್ದರು. ಇದಾದ ಬಳಿಕ 2009, 2010, 2012, 2014 2016ರಲ್ಲಿ ಟಿ20 ವಿಶ್ವಕಪ್ ಆವೃತ್ತಿಗಳನ್ನು ಆಡಿದ್ದಾರೆ.
ಇನ್ನು ಟಿ20 ಕ್ರಿಕೆಟ್‌ನಲ್ಲಿ ಹೊಸ ಅಲೆ ಎಬ್ಬಿಸಿದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೂಡ ಮೊದಲ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಮಿಂಚಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಹೊಡೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಬಳಿಕ 2009, 2010, 2012, 2014 2016ರಲ್ಲಿ ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ 2012 ರಿಂದ ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. ಪ್ರಸ್ತುತ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ ತಂಡದಲ್ಲೂ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈವರೆಗೆ ಕೊಹ್ಲಿ ಯಾವುದೇ ಟಿ20 ವಿಶ್ವಕಪ್ ಗೆದಿಲ್ಲ.2014, 2016, 2021, 2022 ಹಾಗು ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಲು ಕೊಹ್ಲಿ ಸಿದ್ದಾರಾಗಿದ್ದಾರೆ.
ವಿಶ್ವದ ನಂಬರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ 2009, 2010, 2014, 2016, 2021, 2024ರ ಟಿ20 ವಿಶ್ವಕಪ್‌ನ ಭಾರತ ತಂಡದ ಭಾಗವಾಗಿದ್ದಾರೆ. 2012ರಲ್ಲಿ ತಂಡಕ್ಕೆ ಆಯ್ಕೆಯಾಗದ ಕಾರಣ ಜಡೇಜಾ ಟೂರ್ನಿಯಿಂದ ದೂರ ಉಳಿದಿದ್ದರು. ಇದೀಗಾ 2024ರ ಟಿ20 ವಿಶ್ವಕಪ್‌ನ ಟೀಮ್ ಇಂಡಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ಪ್ರಮುಖ ಆಧಾರ ಸ್ತಂಭವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications