For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ತಂಡ ಅತೀ ಕಡಿಮೆ ಟೋಟಲ್ ಬಾರಿಸಿರುವ ಕೆಟ್ಟ ದಾಖಲೆಗಳಿವು

List of Lowest T20I totals for New Zealand

ಧಾಕಾ: ಬಾಂಗ್ಲಾದೇಶ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ಕೆಟ್ಟ ದಾಖಲೆಗೆ ಕಾರಣವಾಗಿದೆ. ಟಿ20ಐ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ತಂಡ ಅತೀ ಕಡಿಮೆ ಟೋಟಲ್ ರನ್ ಬಾರಿಸಿ ಪಂದ್ಯ ಸೋತಿರುವ ಬೇಡದ ದಾಖಲೆ ನಿರ್ಮಿಸಿದೆ.

ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್‌ 1) ನಡೆದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲನೇ ಟಿ20ಐ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ 7 ವಿಕೆಟ್‌ಗಳ ಹೀನಾಯ ಸೋಲನುಭವಿಸಿದೆ. ಇದರ ಬೆನ್ನಲ್ಲೇ ಕಿವೀಸ್ ಹೆಸರಿಗೆ ಕೆಟ್ಟ ದಾಖಲೆ ಸೇರ್ಪಡೆಯಾಗಿದೆ.

60 ರನ್‌ಗೆ ಆಲ್ ಔಟ್ ಆದ ನ್ಯೂಜಿಲೆಂಡ್
ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲೆಂಡ್ ಕೆಟ್ಟ ಬ್ಯಾಟಿಂಗ್‌ ಪ್ರದರ್ಶಿಸಿತು. ರಾಚಿನ್ ರವೀಂದ್ರ 0, ಟಾಮ್ ಬ್ಲಂಡೆಲ್ 2, ವಿಲ್ ಯಂಗ್ 5, ಕಾಲಿನ್ ಡಿ ಗ್ರಾಂಡ್‌ಹೋಮ್ 1, ಟಾಮ್ ಲಾಥಮ್ 18, ಹೆನ್ರಿ ನಿಕೋಲ್ಸ್ 18, ಕೋಲ್ ಮೆಕ್ಕಾಂಚಿ 0, ಡೌಗ್ ಬ್ರೇಸ್‌ವೆಲ್ 5, ಅಜಾಜ್ ಪಟೇಲ್ 3, ಬ್ಲೇರ್ ಟಿಕ್ನರ್ 3, ಜೇಕಬ್ ಡಫಿ 3 ರನ್‌ನೊಂದಿಗೆ 16.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 60 ರನ್ ಗಳಿಸಿತ್ತು. ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಮೆಹಿದಿ ಹಸನ್ 1, ನಸುಮ್ ಅಹ್ಮದ್ 2, ಶಕೀಬ್ ಅಲ್ ಹಸನ್ 2, ಮುಸ್ತಪಿಝುರ್ ರಹ್ಮನ್ 3, ಮೊಹಮ್ಮದ್ ಸೈಫುದ್ದೀನ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಸುಲಭವಾಗಿ ಪಂದ್ಯ ಗೆದ್ದಿತು. ಮೊಹಮ್ಮದ್ ನೈಮ್ 1, ಲಿಟನ್ ದಾಸ್ 1, ಶಕೀಬ್ ಅಲ್ ಹಸನ್ 25, ಮುಶ್ಫಿಕರ್ ರಹೀಮ್ 16, ಮಹ್ಮದುಲ್ಲಾ 14 ರನ್‌ನೊಂದಿಗೆ 15 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 62 ರನ್ ಬಾರಿಸಿ ಗೆಲುವನ್ನಾಚರಿಸಿತು. ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಅಝಾಝ್ ಪಟೇಲ್ 1, ಕೋಲ್ ಮೆಕಾಂಚಿ 1 ಮತ್ತು ರಚಿನ್ ರವೀಂದ್ರ 1 ವಿಕೆಟ್‌ ಪಡೆದರು.

ನ್ಯೂಜಿಲೆಂಡ್ ಕಡಿಮೆ ಟೋಟಲ್ ಬಾರಿಸಿರುವ ಟಿ20ಐ ದಾಖಲೆಗಳು
* 60 vs ಬಾಂಗ್ಲಾದೇಶ ವಿರುದ್ಧ, ಮೀರ್ಪುರ್, 2021*
* 60 vs ಶ್ರೀಲಂಕಾ ವಿರುದ್ಧ, ಚತ್ತೊಗ್ರಾಮ್ 2014
* 80 vs ಪಾಕಿಸ್ತಾನ ವಿರುದ್ಧ, ಕ್ರೈಸ್ಟ್‌ಚರ್ಚ್ 2010
* 81 vs ಶ್ರೀಲಂಕಾ ವಿರುದ್ಧ, ಲೌಡರ್‌ಹಿಲ್ 2010

ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ XI: ರಚಿನ್ ರವೀಂದ್ರ, ಟಾಮ್ ಬ್ಲಂಡೆಲ್, ವಿಲ್ ಯಂಗ್, ಕಾಲಿನ್ ಡಿ ಗ್ರಾಂಡ್‌ಹೋಮ್, ಟಾಮ್ ಲಾಥಮ್ (ನಾಯಕ ಮತ್ತು ವಿಕೆಟ್ ಕೀಪರ್), ಹೆನ್ರಿ ನಿಕೋಲ್ಸ್, ಕೋಲ್ ಮೆಕ್ಕಾಂಚಿ, ಡೌಗ್ ಬ್ರೇಸ್‌ವೆಲ್, ಅಜಾಜ್ ಪಟೇಲ್, ಬ್ಲೇರ್ ಟಿಕ್ನರ್, ಜೇಕಬ್ ಡಫಿ.

ಬಾಂಗ್ಲಾದೇಶ ತಂಡದ ಪ್ಲೇಯಿಂಗ್ XI: ಮೊಹಮ್ಮದ್ ನೈಮ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ (ನಾಯಕ), ಅಫೀಫ್ ಹೊಸೇನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಮುಸ್ತಫಿಜುರ್ ರಹಮಾನ್, ನಸುಮ್ ಅಹ್ಮದ್

Story first published: Thursday, September 2, 2021, 9:49 [IST]
Other articles published on Sep 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+