ಐಪಿಎಲ್‌ನಲ್ಲಿ ಒಬ್ಬನೇ ಬೌಲರ್‌ಗೆ ಹೆಚ್ಚು ಬಾರಿ ಔಟಾದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಚೆನ್ನೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೆಟ್ಟ ದಾಖಲೆ ಪಟ್ಟಿ ಸೇರಿದ್ದಾರೆ. ಒಬ್ಬನೇ ಬೌಲರ್‌ಗೆ ಅತೀ ಹೆಚ್ಚು ಬಾರಿ ಔಟಾದ ಬೇಡದ ದಾಖಲೆಗೆ ಶರ್ಮಾ ಕಾರಣರಾಗಿದ್ದಾರೆ. ಬುಧವಾರದ ಪಂದ್ಯದಲ್ಲಿ ಹಿಟ್‌ಮ್ಯಾನ್ ರೋಹಿತ್ ಅವರು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಶರ್ಮಾ ಹೆಸರಿಗೆ ದಾಖಲೆ ಸೇರಿಕೊಂಡಿದೆ.

ಐಪಿಎಲ್‌ನಲ್ಲಿ 2019ರ ವಿಶ್ವಕಪ್‌ ಘಟನೆ ನೆನಪಿಸಿದ ಎಂಎಸ್ ಧೋನಿ

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಿದ್ದವು. ಈ ವೇಳೆ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 44 ರನ್ ಬಾರಿಸಿ ಅಮಿತ್ ಮಿಶ್ರಾ ಓವರ್‌ನಲ್ಲಿ ಸ್ಟೀವ್ ಸ್ಮಿತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಇದರೊಂದಿಗೆ ಐಪಿಎಲ್‌ನಲ್ಲಿ ಒಬ್ಬನೇ ಒಬ್ಬ ಬೌಲರ್‌ಗೆ ಒಬ್ಬ ಬ್ಯಾಟ್ಸ್‌ಮನ್‌ ಅತೀ ಹೆಚ್ಚು ಸಾರಿ ವಿಕೆಟ್ ಒಪ್ಪಿಸಿದ ದಾಖಲೆ ಪಟ್ಟಿಗೆ ಶರ್ಮಾ ಸೇರ್ಪಡೆಗೊಂಡಿದ್ದಾರೆ. ಇದೇ ಕೆಟ್ಟ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂಎಸ್ ಧೋನಿ ಹೆಸರಿನಲ್ಲೂ ಇದೆ.

ವಿಚಿತ್ರ ಸಂಭ್ರಮಾಚರಣೆಯಿಂದ ನೆಟ್ಟಿಗರಿಗೆ ಆಹಾರವಾದ ಜಡ್ಡು: ವಿಡಿಯೋ

ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಬ್ಯಾಟ್ಸ್‌ಮನ್‌ ಒಬ್ಬನೇ ಬೌಲರ್‌ಗೆ ಔಟಾದ ದಾಖಲೆಗಳು
* ವಿರಾಟ್ ಕೊಹ್ಲಿ, ಸಂದೀಪ್ ಶರ್ಮಾಗೆ 7 ಬಾರಿ ಔಟ್
* ಎಂಎಸ್ ಧೋನಿ, ಝಹೀರ್ ಖಾನ್‌ಗೆ 7 ಬಾರಿ ಔಟ್
* ರೋಹಿತ್ ಶರ್ಮಾ, ಅಮಿತ್ 7 ಬಾರಿ ಔಟ್

For Quick Alerts
ALLOW NOTIFICATIONS
For Daily Alerts
Story first published: Tuesday, April 20, 2021, 21:55 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X