ಭಾನುವಾರ, ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯದಲ್ಲಿ ಆರಂಭವಾಗಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದ್ದು, ಮುಖ್ಯ ಪಂದ್ಯಾವಳಿ ಆರಂಭಕ್ಕೂ ಮುನ್ನ ಈಗಾಗಲೇ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ.
2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಒಂಬತ್ತನೇ ಆವೃತ್ತಿಯು ಭಾನುವಾರದಂದು ಡಲ್ಲಾಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಯುಎಸ್ಎ ಮತ್ತು ಕೆನಡಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಬಾರಿಯ ಪ್ರತಿಷ್ಠಿತ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ವಿಶ್ವದ ಒಟ್ಟು 20 ತಂಡಗಳು ಕಾದಾಡಲಿವೆ.

ಟಿ20 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿತು.
ಆದರೆ, ಪಾಕಿಸ್ತಾನದ ಲೆಜೆಂಡ್ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರಿಗೆ ಟಿ20 ವಿಶ್ವಕಪ್ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ನೀಡಲಾಯಿತು. 2007ರಿಂದ 2022ರವರೆಗೆ ಟಿ20 ವಿಶ್ವಕಪ್‌ನ ಪ್ರತಿ ಆವೃತ್ತಿಯ ಪಂದ್ಯಾವಳಿ ಶ್ರೇಷ್ಠ ಆಟಗಾರರ ಸಂಪೂರ್ಣ ಪಟ್ಟಿ ಈ ವರದಿಯಲ್ಲಿದೆ.
ಇನ್ನು ಟಿ20 ವಿಶ್ವಕಪ್‌ನ ಎರಡನೇ ಆವೃತ್ತಿಯನ್ನು ಪಾಕಿಸ್ತಾನ ತಂಡ ಗೆದ್ದುಕೊಂಡಿತು. ಆದರೆ ಶ್ರೀಲಂಕಾದ ಬ್ಯಾಟರ್ ತಿಲಕರತ್ನೆ ದಿಲ್ಶಾನ್ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
2010ರಲ್ಲಿ ಇಂಗ್ಲೆಂಡ್ ಬ್ಯಾಟರ್ ಕೆವಿನ್ ಪೀಟರ್ಸನ್ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರಿಂದ ಪ್ರಶಸ್ತಿಯು ವಿಜೇತ ತಂಡಕ್ಕೆ ಮೊದಲ ಬಾರಿಗೆ ಹೋಯಿತು.
ಕುತೂಹಲಕಾರಿಯಾಗಿ, ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2014 ಮತ್ತು 2016ರಲ್ಲಿ ಸತತವಾಗಿ ಎರಡು ಬಾರಿ "ಪಂದ್ಯಾವಳಿ ಶ್ರೇಷ್ಠ ಆಟಗಾರ' ಪ್ರಶಸ್ತಿಯನ್ನು ಗೆದ್ದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
ಟಿ20 ವಿಶ್ವಕಪ್ 2022ರ ಹಿಂದಿನ ಆವೃತ್ತಿಯಲ್ಲಿ ಚಾಂಪಿಯನ್ ತಂಡ ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರ್ರಾನ್ "ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಗೆದ್ದರು.
2007 - ಶಾಹೀದ್ ಅಫ್ರಿದಿ (ಪಾಕಿಸ್ತಾನ) - 12 ವಿಕೆಟ್
2009 - ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ) - 317 ರನ್‌ಗಳು
2010 - ಕೆವಿನ್ ಪೀಟರ್ಸನ್ (ಇಂಗ್ಲೆಂಡ್) - 248 ರನ್‌ಗಳು
2012 - ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) - 249 ರನ್‌ಗಳು, 11 ವಿಕೆಟ್
2014 - ವಿರಾಟ್ ಕೊಹ್ಲಿ (ಭಾರತ) - 319 ರನ್‌ಗಳು
2016 - ವಿರಾಟ್ ಕೊಹ್ಲಿ (ಭಾರತ) - 273 ರನ್‌ಗಳು
2021 - ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 289 ರನ್‌ಗಳು
2022 - ಸ್ಯಾಮ್ ಕರ್ರಾನ್ (ಇಂಗ್ಲೆಂಡ್) - 13 ವಿಕೆಟ್‌ಗಳು