
ಅಗ್ರ ಸ್ಥಾನದಲ್ಲಿದ್ದಾರೆ ಮಹೇಲಾ ಜಯವರ್ಧೆನಾ
ಶ್ರೀಲಂಕಾದ ಲೆಜೆಂಡರಿ ಕ್ರಿಕೆಟರ್ ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿದ್ದಾರೆ. 2007ರಿಂದ 2014ರ ವರೆಗೆ 5 ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ಮಹೇಲಾ ಜಯವರ್ಧನೆ ಒಟ್ಟು 31 ಪಂದ್ಯಗಳಿಂದ 1016 ರನ್ ಗಳಿಸುವ ಮೂಲಕ ಮೊದಲನೇ ಸ್ಥಾನದಲ್ಲಿದ್ದಾರೆ.
39.07 ಸರಾಸರಿಯಲ್ಲಿ ರನ್ ಗಳಿಸಿರುವ ಜಯವರ್ಧನೆ, ತಮ್ಮ ಇನ್ನಿಂಗ್ಸ್‌ನಲ್ಲಿ 6 ಅರ್ಧಶತಕ, ಒಂದು ಶತಕವನ್ನು ದಾಖಲಿಸಿದ್ದಾರೆ. 2014ರಲ್ಲಿ ಶ್ರೀಲಂಕಾ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಜಯವರ್ಧನೆ ಪಾತ್ರ ಮುಖ್ಯವಾಗಿದೆ.
ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!

ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಎರಡನೇ ಸ್ಥಾನದಲ್ಲಿ
ವೆಸ್ಟ್ ಇಂಡೀಸ್‌ನ ಜನಪ್ರಿಯ ಕ್ರಿಕೆಟ್ ತಾರೆ, ಕ್ರಿಸ್ ಗೇಲ್ ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2007 ರಿಂದ 2021ರ ವೆರೆಗಿನ ಈ ವರೆಗೆ ನಡೆದ ಎಲ್ಲಾ ಟಿ20 ವಿಶ್ವಕಪ್‌ಗಳಲ್ಲಿ ಗೇಲ್ ಆಡಿದ್ದಾರೆ. ಎರಡು ಬಾರಿ ವಿಶ್ವಕಪ್ ಗೆಲ್ಲಿಸುವಲ್ಲಿ ಗೇಲ್ ಪಾತ್ರ ದೊಡ್ದದು.
33 ಪಂದ್ಯಗಳಲ್ಲಿ 31 ಇನ್ನಿಂಗ್ಸ್ ಆಡಿರುವ ಕ್ರಿಸ್ ಗೇಲ್ 965 ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. 34.46 ಸರಾಸರಿಯಲ್ಲಿ ರನ್ ಗಳಿಸಿದ್ದು, ತಮ್ಮ ಇನ್ನಿಂಗ್ಸ್‌ನಲ್ಲಿ 7 ಅರ್ಧಶತಕ, ಎರಡು ಭರ್ಜರಿ ಶತಕ ಸಿಡಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 142.75 ಆಗಿದೆ.

ಮೂರನೇ ಸ್ಥಾನದಲ್ಲಿರುವ ದಿಲ್ಷಾನ್
ಶ್ರೀಲಂಕಾದ ಮತ್ತೊಬ್ಬ ಕ್ರಿಕೆಟರ್ ತಿಲಕರತ್ನೆ ದಿಲ್ಷಾನ್ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. 35 ಪಂದ್ಯಗಳಲ್ಲಿ 34 ಇನ್ನಿಂಗ್ಸ್ ಆಡಿರುವ ದಿಲ್ಷಾನ್ 30.93 ಸರಾಸರಿಯಲ್ಲಿ 897 ರನ್ ಗಳಿಸುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದ್ದಾರೆ. 2007ರಿಂದ 2016ರ ವರೆಗಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇವರು ಭಾಗವಹಿಸಿದ್ದಾರೆ.
ಒಟ್ಟು ಆರು ಅರ್ಧ ಶತಕಗಳನ್ನು ಗಳಿಸಿರುವ ದಿಲ್ಷಾನ್, ವಿಶ್ವಕಪ್‌ನಲ್ಲಿ ಗಳಿಸಿರುವ ಗರಿಷ್ಠ ರನ್ 96 ಆಗಿದೆ. 2014ರಲ್ಲಿ ಶ್ರೀಲಂಕಾ ವಿಶ್ವಕಪ್ ಗೆಲುವಿನಲ್ಲಿ ಆಲ್‌ರೌಂಡರ್ ದಿಲ್ಷಾನ್ ಮುಖ್ಯ ಪಾತ್ರ ವಹಿಸಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
2007ರಿಂದ 2021ರ ವರೆಗಿನ ಎಲ್ಲಾ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ರೋಹಿತ್ ಶರ್ಮಾ, 2022ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. 33ಪಂದ್ಯಗಳಲ್ಲಿ 30 ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ, 38.50 ಸರಾಸರಿಯಲ್ಲಿ 847 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧ ಶತಕಗಳು ಸೇರಿವೆ.
131.52 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿರುವ ರೋಹಿತ್ ಶರ್ಮಾ, 79 ರನ್ ಇವರು ಗಳಿಸಿರುವ ವೈಯಕ್ತಿಕ ಗರಿಷ್ಠ ರನ್ ಎನಿಸಿಕೊಂಡಿದೆ.

ಐದನೇ ಸ್ಥಾನದಲ್ಲಿದ್ದಾರೆ ವಿರಾಟ್ ಕೊಹ್ಲಿ
ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. 21 ಪಂದ್ಯಗಳಲ್ಲಿ 19 ಇನ್ನಿಂಗ್ಸ್ ಆಡಿರುವ ಕೊಹ್ಲಿ 76.81 ಸರಾಸರಿಯಲ್ಲಿ 845 ರನ್ ಗಳಿಸುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ. 2012ರಿಂದ 2021 ರವರೆಗೆ ಟಿ20 ವಿಶ್ವಕಪ್‌ನಲ್ಲಿ ಆಡಿದ್ದಾರೆ. 2022ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಒಂದು ಶತಕ ಗಳಿಸಿಲ್ಲ. ಅಜೇಯ 89 ರನ್ ಗಳಿಸಿರುವುದು ಅವರ ಗರಿಷ್ಠ ರನ್ ಆಗಿದೆ. ಇದುವರೆಗೆ 10 ಅರ್ಧ ಶತಕಗಳನ್ನು ಟಿ20 ವಿಶ್ವಕಪ್‌ನಲ್ಲಿ ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ 129.60 ಆಗಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಮತ್ತೊಂದು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು, ಇಬ್ಬರಿಗೂ ನಂಬರ್ 1 ಆಗುವ ಅವಕಾಶ ಇದೆ.


Click it and Unblock the Notifications











