For Quick Alerts
ALLOW NOTIFICATIONS  
For Daily Alerts
 

ಹಿಂದೆಯೂ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್‌ಗಳು ನಡೆದಿತ್ತು!

List of Two Super Overs on the same day in a competition

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಂತೂ 2020ರ ಅಕ್ಟೋಬರ್ 18ರ ದಿನ ವಿಶೇಷ ದಿನವಾಗಿ ಗುರುತಿಸಿಕೊಳ್ಳಲಿದೆ. ಯಾಕೆಂದರೆ ಐಪಿಎಲ್ ಇತಿಹಾಸದಲ್ಲಿ ಒಂದೇ ದಿನ ಮೂರು ಸೂಪರ್ ಓವರ್ ಪಂದ್ಯಗಳು ನಡೆದಿದ್ದು ಇದೇ ಮೊದಲು. ಅದರಲ್ಲೂ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್ ಪಂದ್ಯಗಳು ನಡೆದಿದ್ದೂ ಮೊದಲಸಾರಿ.

ಎರಡು ಪಂದ್ಯಗಳು ನಿಗದಿಯಾಗಿದ್ದ ಭಾನುವಾರ, ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು 163 ರನ್ ಬಾರಿಸಿ ಪಂದ್ಯ ಟೈ ಮಾಡಿಕೊಂಡವು. ಆ ಬಳಿಕ ಸೂಪರ್ ಓವರ್ ನಡೆದು ಅದರಲ್ಲಿ ಕೆಕೆಆರ್ ವಿಜಯಿಯಾಗಿತ್ತು.

ಆ ಬಳಿಕ ನಡೆದ ಎರಡನೇ ಪಂದ್ಯ ಇತಿಹಾಸ ಬರೆದಿತ್ತು. ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ XI ಪಂಜಾಬ್ ತಂಡಗಳ ಕದನವೂ 176 ರನ್‌ಗಳಿಂದ ಸಮಬಲಗೊಂಡಿತ್ತು. ಮತ್ತೆ ನಡೆದ ಸೂಪರ್ ಓವರ್‌ನಲ್ಲೂ ಎರಡೂ ತಂಡಗಳು 5 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡವು. ಹೀಗಾಗಿ ಎರಡನೇ ಸೂಪರ್ ಓವರ್ ನಡೆಯಿತು. ಅದರಲ್ಲಿ ಕೆXIಪಿ ಗೆಲುವನ್ನಾಚರಿಸಿತು.

ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್ ಪಂದ್ಯಗಳು ನಡೆದಿದ್ದು ಇದೇ ಮೊದಲು ಅನ್ನೋದು ನಿಜ. ಆದರೆ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡು ಸೂಪರ್ ಓವರ್‌ಗಳು ನಡೆದಿದ್ದಿದೆ. ಆ ರೋಚಕ ಪಂದ್ಯಗಳ ಪಟ್ಟಿ ಕೆಳಗಿದೆ ನೋಡಿ.

ಕ್ರಿಕೆಟ್ ಇತಿಹಾಸದಲ್ಲಿ ಎರಡು ಸೂಪರ್ ಓವರ್‌ಗಳು ನಡೆದಿದ್ದು
* 18 ಫೆಬ್ರವರಿ 2009, ದಕ್ಷಿಣ ಆಫ್ರಿಕಾ ದೇಸಿ ಟಿ20
* 27 ಆಗಸ್ಟ್ 2011, ಟಿ20 ಬ್ಲಾಸ್ಟ್
* 27 ಫೆಬ್ರವರಿ 2018, ಶ್ರೀಲಂಕಾ ದೇಸಿ ಟಿ20
* 15 ಸೆಪ್ಟೆಂಬರ್ 2019, ದಕ್ಷಿಣ ಆಫ್ರಿಕಾ ಪ್ರೊವಿನ್ಶನಲ್ ಟಿ20
* 18 ಅಕ್ಟೋಬರ್ 2020, ಐಪಿಎಲ್ 2020

Story first published: Monday, October 19, 2020, 12:31 [IST]
Other articles published on Oct 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+