ICC Women's World Cup Semi Final: ಭಾರತಕ್ಕೆ ಸವಾಲಿನ ಮೊತ್ತದ ಗುರಿ ನೀಡಿದ ಆಸ್ಟ್ರೇಲಿಯಾ
ಭರವಸೆಯ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಬಾರಿಸಿದ ಶತಕ ಹಾಗೂ ಎಲ್ಲಿಸಾ ಪೆರ್ರಿ ಅವರು ಸಿಡಿಸಿದ ಅರ್ಧಶತಕದ ನೆರವಿನಿಂದ ಮಹಿಳಾ ಏಕದಿನ ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲಿನ ಮೊತ್ತದ ಗುರಿಯನ್ನು ಟೀಮ್ ಇಂಡಿಯಾಕ್ಕೆ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸೀಸ್ ತಂಡದ ಆರಂಭ ಕಳಪೆ ಆಗಿತ್ತು. ನಾಯಕಿ ಅಲೆಸ್ಸಾ ಹಿಲಿ (5) ಕ್ರಾಂತಿ ಗೌಡ ತೋಡಿದ ಖೆಡ್ಡಾಗೆ ಬಲಿಯಾದರು. ಎರಡನೇ ವಿಕೆಟ್‌ಗೆ ಫೋಬೆ ಲಿಚ್‌ಫೀಲ್ಡ್ ಹಾಗೂ ಅನುಭವಿ ಬ್ಯಾಟರ್ ಎಲ್ಲಿಸ್ ಪೆರ್ರಿ ಜೊತೆಗೂಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಭಾರತದ ಬೌಲರ್‌ಗಳು ವಿಫಲರಾದರು. ಈ ಜೋಡಿ ಎರಡನೇ ವಿಕೆಟ್‌ಗೆ 132 ಎಸೆತಗಳಲ್ಲಿ 155 ರನ್ ಜೊತೆಯಾಟದ ಕಾಣಿಕೆ ನೀಡಿತು. ಇವರ ಅಮೋಘ ಜೊತೆಯಾಟದ ನೆರವಿನಿಂದ ಆಸೀಸ್ ಪವರ್ ಪ್ಲೇನಲ್ಲಿ 1 ವಿಕೆಟ್‌ಗೆ 72 ರನ್ ಕಲೆ ಹಾಕಿತು.

ಫೋಬೆ ಶತಕ
22 ವರ್ಷದ ಫೋಬೆ ಲಿಚ್‌ಫೀಲ್ಡ್ ತಮ್ಮ ಏಕದಿನ ವೃತ್ತಿ ಜೀವನದ ಮೂರನೇ ಶತಕವನ್ನು ಬಾರಿಸಿದರು. ಇವರು 93 ಎಸೆತಗಳಲ್ಲಿ 119 ರನ್ ಬಾರಿಸಿದರು. ಈ ವೇಳೆ 13 ಬೌಂಡರಿ, 3 ಸಿಕ್ಸರ್ ಸಿಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬೆತ್ ಮೂನಿ 3 ಬೌಂಡರಿ ನೆರವಿನಿಂದ 24 ರನ್ ಬಾರಿಸಿದರು. ಅನ್ನಾಬೆಲ್ ಸದರ್ಲ್ಯಾಂಡ್ (3) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಭರವಸೆಯ ಆಟಗಾರ್ತಿ ಎಲ್ಲಿಸಾ ಪೆರ್ರಿ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿದರು. ಇವರು 88 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 77 ರನ್ ಬಾರಿಸಿ ಔಟ್ ಆದರು. ತಹ್ಲಿಯಾ ಮೆಕ್‌ಗ್ರಾತ್ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದರು.
7ನೇ ವಿಕೆಟ್‌ಗೆ ಕಿಮ್ ಗಾರ್ತ್ ಮತ್ತು ಆಶ್ಲೀ ಗಾರ್ಡ್ನರ್ ಜೋಡಿ ಸಹ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಗಾರ್ಡ್ನರ್ 45 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿ ಔಟ್ ಆದರು. ಅಂತಿಮವಾಗಿ ಆಸೀಸ್ 338 ರನ್‌ಗಳಿಗೆ ಆಲೌಟ್ ಆಯಿತು.
ಚರಣಿ ಮಿಂಚು
ಭಾರತದ ಪರ ಭರವಸೆಯ ಸ್ಪಿನ್ ಬೌಲರ್ ಶ್ರೀ ಚರಣಿ 49 ರನ್ ನೀಡಿ 2 ವಿಕೆಟ್ ಪಡೆದರು. ಭಾರತದ ಭರವಸೆಯ ಬೌಲರ್ ಕ್ರಾಂತಿ ಗೌಡ (9.66), ರಾಧಾ ಯಾದವ್ ಅವರು ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾದರು. ರೇಣುಕಾ ಸಿಂಗ್ ಕೊಂಚ ರನ್‌ಗಳನ್ನು ಕಡಿಮೆ ನೀಡಿದರೂ ಸಹ ವಿಕೆಟ್ ಪಡೆಯಲಿಲ್ಲ. ಸ್ಪಿನ್ ಬೌಲರ್ ದೀಪ್ತಿ ಶರ್ಮಾ ಸಹ ರನ್‌ಗಳನ್ನು ಬಿಟ್ಟುಕೊಟ್ಟರು. ಪರಿಣಾಮ ಆಸ್ಟ್ರೇಲಿಯಾ ದೊಡ್ಡ ಮೊತ್ತವನ್ನು ಕಲೆ ಹಾಕಿತು. ದೀಪ್ತಿ ಶರ್ಮಾ ಕೊನೆಯಲ್ಲಿ ಬಿಗುವಿನ ದಾಳಿ ನಡೆಸಿ ಆಸೀಸ್ ತಂಡಕ್ಕೆ ಕಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications