ಆರ್‌ಸಿಬಿಯ ಮ್ಯಾಕ್ಸ್‌ವೆಲ್, ಎಬಿಡಿ ಹೋಲುವಂತೆ ಬ್ಯಾಟ್ ಮಾಡುವ ಪುಟ್ಟ ಪೋರ: ವಿಡಿಯೋ ವೈರಲ್
ಆಟಗಾರರು ಚಿಕ್ಕವರಿದ್ದಾಗ ಆಡಿದ್ದನ್ನು ನೋಡಿದವರು ಕೆಲವೇ ಕೆಲವು ಅಭಿಮಾನಿಗಳು ಇರುತ್ತಾರೆ. ರಾಷ್ಟ್ರೀಯ ತಂಡ ಅಥವಾ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಿ ಮಿಂಚಿದ ಮೇಲೆ ಅಪಾರ ಅಭಿಮಾನಿಗಳನ್ನು ಆಟಗಾರ ಗಳಿಸುತ್ತಾನೆ. ಹೀಗಾಗಿ ಅಭಿಮಾನಿಗಳಿಗೆ ಆಟಗಾರ ಚಿಕ್ಕವನಿದ್ದಾಗ ಹೇಗೆ ಆಡುತ್ತಿದ್ದ ಎಂದು ಊಹಿಸಿಕೊಳ್ಳುವುದನ್ನು ಬಿಟ್ಟು ಬೇರೆ ಗತಿ ಇರುವುದಿಲ್ಲ.
ಹಲವು ಸ್ಟಾರ್ ಆಟಗಾರರ ಹೋಲಿಕೆ ಆಗುವ ಸಾಕಷ್ಟು ಪುಟ್ಟ ಹುಡುಗರು ಕಾಣಿಸಿಕೊಳ್ಳುತ್ತಾರೆ. ಆದರೆ, ಇತ್ತೀಚಿಗೆ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ಒಂದು ವಿಡಿಯೋ ಆರ್‌ಸಿಬಿ ಪ್ಲೇಯರ್‌ನ ನೆನಪು ತರಿಸದೆ ಇರದು.

ಥೇಟ್ ಆರ್‌ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ರೀತಿ ಬ್ಯಾಟ್ ಮಾಡುವ ಪೋರನ ವಿಡಿಯೋ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿವಿಧ ಕ್ರಿಕೆಟ್ ವೀಡಿಯೊಗಳು ಸಾಮಾಜಿಕ ತಾಣದಲ್ಲಿ ಅಭಿಮಾನಿಗಳ ಮನವನ್ನು ಗೆಲ್ಲುತ್ತಲೇ ಇರುತ್ತವೆ. ಇದರಲ್ಲಿ ಪುಟಾಣಿಗಳು ತಮಗಿಷ್ಟದ ಆಟಗಾರರನ್ನು ಅನುಕರಣೆ ಮಾಡಿ ವೈರಲ್ ಆಗುತ್ತಾರೆ.
ಯಾರು ಆ ಪೋರ?
ಈಗ ಆಸೀಸ್‌ನ ಪೋರನ ಬ್ಯಾಟಿಂಗ್ ಸಖತ್ ವೈರಲ್ ಆಗುತ್ತಿದೆ. 3 ವರ್ಷದ ಆಸ್ಟ್ರೇಲಿಯಾದ ಮಗು ಬ್ಯಾಟಿಂಗ್ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಅವರು ಒಂದರ ಹಿಂದೆ ಒಂದರಂತೆ ದೊಡ್ಡ ಬಿಗ್ ಶಾಟ್ ಗಳನ್ನು ಹೊಡೆಯುವುದನ್ನು ಕಾಣಬಹುದು. ಮಗುವಿನ ಸ್ಫೋಟಕ ಬ್ಯಾಟಿಂಗ್ ಮತ್ತು ತಂತ್ರವು ದೊಡ್ಡ ಬ್ಯಾಟ್ಸ್‌ಮನ್‌ಗಳನ್ನು ಸಹ ಆಶ್ಚರ್ಯಗೊಳಿಸಿದೆ.

ಹೇಗಿದೆ ಆತನ ಬ್ಯಾಟಿಂಗ್ ಶಕ್ತಿ
3 ವರ್ಷದ ಈ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ, ಮೊದಲು ಅವರು ಪ್ರಬುದ್ಧ ಬ್ಯಾಟ್ಸ್‌ಮನ್‌ನಂತೆ ಗಾರ್ಡ್ ತೆಗೆದುಕೊಳ್ಳುವುದನ್ನು ಕಾಣಬಹುದು. ಗಾರ್ಡ್ ತೆಗೆದುಕೊಂಡ ನಂತರ, ಅವನು ಬೌಲರ್ ಅನ್ನು ಸಂಪೂರ್ಣವಾಗಿ ಗಮನಿಸುತ್ತಾನೆ. ಮತ್ತು ಮೈದಾನದಲ್ಲಿ ಅನೇಕ ಬಿಗ್ ಶಾಟ್‌ಗಳನ್ನು ಬಾರಿಸುತ್ತಾನೆ.
ಬಿಗ್ ಶಾಟ್ ಗಳ ಜತೆಗೆ ರನ್ ಗಳನ್ನು ತೆಗೆಯುವಲ್ಲಿಯೂ ಅವರ ತಂತ್ರ ಎದ್ದು ಕಾಣುತ್ತಿದೆ. ಅಲ್ಲಿ ಅವರು ರನ್ ಔಟ್ ಆಗುವುದನ್ನು ತಪ್ಪಿಸಲು ಫುಲ್ ಲೆಂಗ್ತ್ ಡೈವ್ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಮಗು ಅರ್ಧಶತಕ ಪೂರೈಸಿದ್ದು, ಬಳಿಕ ಬ್ಯಾಟ್ ಮೇಲೆತ್ತಿ ಅಭಿನಂದಿಸುತ್ತಿರುವುದನ್ನು ಕಾಣಬಹುದು. ಈ ಅದ್ಭುತ ಬ್ಯಾಟಿಂಗ್ ವಿಡಿಯೋ ಜನರ ಮನ ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications