ಇಂಗ್ಲೆಂಡ್ vs ಭಾರತ 3ನೇ ಏಕದಿನ-Live: ಸರಣಿ ಸೋಲಿನತ್ತ ವಾಲಿದ ಭಾರತ!

ಲೀಡ್ಸ್, ಜುಲೈ 17: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಇಂದು (ಜು. 17) ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್ ಗೆ ಇಳಿದಿರುವ ಇಂಗ್ಲೆಂಡ್ ಗೆಲ್ಲುವ ನೆಲೆಯಲ್ಲಿ ಲೆಕ್ಕಾಚಾರದ ಆಟವಾಡುತ್ತಿದೆ. 30 ಓವರ್ ಗಳ ಮುಕ್ತಾಯಕ್ಕೆ ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದು 181 ರನ್ ಪೇರಿಸಿದ್ದು, ಭಾರತ ಏಕದಿನ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದೆ.
ಚೇಸಿಂಗ್ ಗೆ ಇಳಿದ ಇಂಗ್ಲೆಂಡ್ 10 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದು 78 ರನ್ ಪೇರಿಸಿದೆ. ಜೇಮ್ಸ್ ವಿನ್ಸ್ (27/27), ಜಾನಿ ಬೇರ್ಸ್ಟೋವ್ (30/13) ನಿರ್ಗಮಿಸಿದ್ದರು.
ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ 50 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 256 ರನ್ ಪೇರಿಸಿ ಇಂಗ್ಲೆಂಡ್ ಗೆ 257 ರನ್ ಗುರಿ ನೀಡಿದೆ. ಶಾರ್ದೂಲ್ ಠಾಕೂರ್ 22 (13), ಭುವನೇಶ್ವರ್ ಕುಮಾರ್ 21 (35) ರನ್ ಅಂತಿಮ ಓವರ್ ಗಳಲ್ಲಿ ತಂಡಕ್ಕೆ ರನ್ ಬಲ ತುಂಬಿತು.
32 ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟ್ ಕಳೆದು 162 ರನ್ ಪೇರಿಸಿತ್ತು. ನಾಯಕ ವಿರಾಟ್ ಕೊಹ್ಲಿ 71 (72) ರನ್ ಸಿಡಿಸಿದ್ದು ಬಿಟ್ಟರೆ ಉಳಿದ ಹೆಚ್ಚಿನ ಬ್ಯಾಟ್ಸ್ಮನ್ ಗಳ ರನ್ ಕದಿಯುವಿಕೆಗೆ ಹಿನ್ನೆಡೆಯಾಗಿದೆ. ಭಾರತಕ್ಕೆ ಸರಣಿ ಸೋಲಿನ ಭೀತಿ ಶುರುವಾಗಿತ್ತು.
ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತ 11 ಓವರ್ ಮುಕ್ತಾಯಕ್ಕೆ 1 ವಿಕೆಟ್ ಕಳೆದು 38 ರನ್ ಪೇರಿಸಿತ್ತು. ರೋಹಿತ್ ಶರ್ಮಾ (2/18) ಔಟಾಗಿದ್ದರು.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಮೊದಲ ಪಂದ್ಯವನ್ನು 8 ವಿಕೆಟ್ ನಿಂದ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ 86 ರನ್ ಹೀನಾಯ ಸೋಲು ಕಂಡಿತ್ತು. ಎರಡೂ ತಂಡಗಳು 1-1 ಪಂದ್ಯ ಗೆದ್ದಿರುವುದರಿಂದ ಇಂದಿನ ಪಂದ್ಯ ನಿರ್ಣಾಯವಾಗಲಿದೆ. ಭಾರತ ಇಂದಿನ ಪಂದ್ಯ ಗೆಲ್ಲವ ವಿಶ್ವಾಸದಲ್ಲಿದೆ.
ಇಂಗ್ಲೆಂಡ್ ತಂಡ: ಇಯಾನ್ ಮೋರ್ಗಾನ್ (ಸಿ), ಜಾಸನ್ ರಾಯ್, ಜಾನಿ ಬೈರ್ಸ್ಟೊ, ಜೋಸ್ ಬಟ್ಲರ್ (ವಿಕ್), ಮೊಯೆನ್ ಅಲಿ, ಜೋ ರೂಟ್, ಜೇಕ್ ಬಾಲ್, ಲಿಯಾಮ್ ಪ್ಲಂಕೆಟ್, ಬೆನ್ ಸ್ಟೋಕ್ಸ್, ಆದಿಲ್ ರಶೀದ್, ಡೇವಿಡ್ ವಿಲ್ಲೆ, ಮಾರ್ಕ್ ವುಡ್, ಜೇಮ್ಸ್ ವಿನ್ಸ್.
ಭಾರತ ತಂಡ: ವಿರಾಟ್ ಕೊಹ್ಲಿ (ಸಿ), ಶಿಖರ್ ಧವನ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಎಂಎಸ್ ಧೋನಿ (ವಿಕೆ), ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಯುಜ್ವೆಂದ್ರ ಚಾಹಲ್, ಶ್ರೀಯಾಸ್ ಅಯ್ಯರ್, ಸಿದ್ದಾರ್ಥ್ ಕೌಲ್, ಅಕ್ಸಾರ್ ಪಟೇಲ್, ಉಮೇಶ್ ಯಾದವ್, ಶರ್ಡುಲ್ ಠಾಕೂರ್, ಭುವನೇಶ್ವರ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications