Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ENG vs AUS: ಲಿವಿಂಗ್‌ಸ್ಟೋನ್‌ ಅಬ್ಬರಕ್ಕೆ ಬೆಚ್ಚಿದ ಆಸೀಸ್‌, ಸಮಬಲ ಸಾಧಿಸಿದ ಇಂಗ್ಲೆಂಡ್‌

ಕಾರ್ಡಿಫ್: ಸ್ಟಾರ್ ಭರವಸೆಯ ಆಟಗಾರ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರ ಭರ್ಜರಿ ಆಟದ ನೆರವಿನಿಂದ ಇಂಗ್ಲೆಂಡ್‌ ಎರಡನೇ ಟಿ20 ಪಂದ್ಯದಲ್ಲಿ 3 ವಿಕೆಟ್‌ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 193 ರನ್‌ ಗಳನ್ನು ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್‌ 19 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 194 ರನ್ ಕಲೆ ಹಾಕಿ ಅಬ್ಬರಿಸಿತು.

Livingstone s Heroics Power England to 3-Wicket Win Over Australia Series Tied 1-1

ಭರ್ಜರಿ ಜೊತೆಯಾಟ

ಆಸೀಸ್‌ ಪರ ಆರಂಭಿಕರು ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಮ್ಯಾಥ್ಯೂ ಶಾರ್ಟ್‌ (28) ಹಾಗೂ ನಾಯಕ ಟ್ರಾವಿಸ್ ಹೆಡ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಪವರ್‌ ಪ್ಲೇನಲ್ಲಿ ಸೊಗಸಾದ ಆಟವನ್ನು ಆಡಿದ ಜೋಡಿ 4.2 ಓವರ್‌ಗಳಲ್ಲಿ 1 ವಿಕೆಟ್‌ಗೆ 52 ರನ್‌ ಸೇರಸಿತು. ನಾಯಕ ಟ್ರಾವಿಸ್ ಹೆಡ್‌ ಕೇವಲ 14 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 31 ರನ್‌ ಸಿಡಿಸಿ ಅಬ್ಬರಿಸಿದರು.

ಮ್ಯಾಕ್‌ಗುರ್ಕ್ ಅರ್ಧಶತಕ

ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಸೊಗಸಾದ ಆಟವನ್ನು ಆಡಿತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅಬ್ಬರಿಸಿದ್ದ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಅರ್ಧಶತಕ ಬಾರಿಸಿದರು. ಇವರು 31 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 50 ರನ್‌ ಸಿಡಿಸಿದರು.

ಜೋಶ್‌ ಇಂಗ್ಲಿಸ್‌ 26 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 42 ರನ್ ಬಾಚಿದರು.

ಇಂಗ್ಲೆಂಡ್‌ ಪರ ಬ್ರೈಡನ್ ಕಾರ್ಸ್ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ತಲಾ ಎರಡು ವಿಕೆಟ್‌ ಪಡೆದರು.

Livingstone s Heroics Power England to 3-Wicket Win Over Australia Series Tied 1-1

ಲಿಯಾಮ್‌ ಅಬ್ಬರದ ಆಟ

ಇಂಗ್ಲೆಂಡ್‌ ಪರ ಫಿಲ್ ಸಾಲ್ಟ್‌ (39) ಹಾಗೂ ವಿಲ್‌ ಜಾಕ್ಸ್‌ (12) ಮೊದಲ ವಿಕೆಟ್‌ಗೆ 35 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಮೂರನೇ ವಿಕೆಟ್‌ಗೆ ಲಿಯಾಮ್‌ ಲಿವಿಂಗ್‌ಸ್ಟೋನ್‌ ಹಾಗೂ ಜಾಕೋಬ್ ಬೆಥೆಲ್ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡದ ಗೆಲುವಿನಲ್ಲಿ ಆಧಾರವಾದರು. ಲಿಯಾಮ್‌ 47 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ 87 ರನ್‌ ಸಿಡಿಸಿದರು. ಜಾಕೋಬ್ ಬೆಥೆಲ್ 44 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು.

ಮ್ಯಾಥ್ಯೂ ಶಾರ್ಟ್‌ ಐದು ವಿಕೆಟ್‌ ಪಡೆದು ಮಿಂಚಿದರು.

Story first published: Saturday, September 14, 2024, 13:34 [IST]
Other articles published on Sep 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+