
ಲಕ್ನೋ: ಲಕ್ನೋದಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಭಾರತದ ಮಹಿಳೆಯರು ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ನಡುವಿನ ತೃತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರು ರೋಚಕ 6 ರನ್ (ಡಿಎಲ್‌ಎಸ್ ವಿಧಾನ) ಜಯ ಗಳಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ವನಿತಾ ತಂಡ, ಸ್ಮೃತಿ ಮಂಧಾನ 25, ಪೂನಂ ರಾವತ್ 77, ನಾಯಕಿ ಮಿಥಾಲಿ ರಾಜ್ 36, ಹರ್ಮನ್ ಪ್ರೀತ್ ಕೌರ್ 36, ದೀಪ್ತಿ ಶರ್ಮಾ 36, ಸುಷ್ಮ ವರ್ಮಾ 14 ರನ್ ಸೇರ್ಪಡೆಯೊಂದಿಗೆ 50 ಓವರ್‌ಗೆ 5 ವಿಕೆಟ್ ಕಳೆದು 248 ರನ್ ಗಳಿಸಿತು.
ದಕ್ಷಿಣ ಆಫ್ರಿಕಾಕ್ಕೆ ಡಕ್ವರ್ಥ್ ನಿಯಮದ ಆಧಾರದಲ್ಲಿ 46.3 ಓವರ್‌ಗೆ 218 ಗುರಿ ನೀಡಲಾಗಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ವನಿತೆಯರು ಲಿಜೆಲ್ ಲೀ ಅಜೇಯ 132, ಲಾರಾ ವೊಲ್ವಾರ್ಡ್ 12, ಲಾರಾ ಗುಡಾಲ್ 16, ಮಿಗ್‌ನಾನ್ ಡು ಪ್ರೀಝ್ 37 ಆ್ಯನ್ನಿ ಬೋಸ್ಕ್ 16 ರನ್‌ನೊಂದಿಗೆ 46.3 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 223 ರನ್ ಗಳಿಸಿತು.
ಭಾರತದ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 2, ಮರಿಝನ್ನೆ ಕ್ಯಾಪ್ 1, ತುಮಿ ಸೆಖುಖುನೆ 1, ಆ್ಯನ್ನಿ ಬೋಸ್ಕ್ 1 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತ ಜೂಲನ್ ಜೋಸ್ವಾಮಿ 2, ರಾಜೇಶ್ವರಿ ಗಾಯಕ್ವಾಡ್ 1, ದೀಪ್ತಿ ಶರ್ಮಾ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಲಿಜೆಲ್ ಲೀ ಪಂದ್ಯಶ್ರೇಷ್ಠೆ ಎನಿಸಿದರು.