For Quick Alerts
ALLOW NOTIFICATIONS  
For Daily Alerts
 

WPL 2026: ಡೆಲ್ಲಿ ಮೊದಲ ಗೆಲುವಿನ ನಗೆ: ಯುಪಿಗೆ ಹ್ಯಾಟ್ರಿಕ್‌ ಸೋಲಿನ ಕಹಿ

ನವಿ ಮುಂಬೈ: ಆರಂಭಿಕ ಆಟಗಾರ್ತಿ ಲಿಜೆಲ್ಲೆ ಲೀ ಅವರು ಬಾರಿಸಿದ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ 4ನೇ ಆವೃತ್ತಿಯ ಮಹಿಳಾ ಕ್ರಿಕೆಟ್‌ ಲೀಗ್‌ನಲ್ಲಿ 7 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಲೀಗ್‌ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಇನ್ನು ಯುಪಿ ತಂಡ ಲೀಗ್‌ನಲ್ಲಿ ಹ್ಯಾಟ್ರಿಕ್‌ ಸೋಲಿನ ಆಘಾತ ಅನುಭವಿಸಿದೆ.

ಯುಪಿ ನೀಡಿದ 155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಶಫಾಲಿ ವರ್ಮಾ ಹಾಗೂ ಲಿಜೆಲ್ಲೆ ಲೀ ಅವರು ಮೊದಲ ವಿಕೆಟ್‌ಗೆ 11.3 ಓವರ್‌ಗಳಲ್ಲಿ 94 ರನ್‌ ಸಿಡಿಸಿತು. ಈ ಅವಧಿಯಲ್ಲಿ ಶಫಾಲಿ ವರ್ಮಾ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಕಳೆದ ಕೆಲವು ಪಂದ್ಯಗಳಲ್ಲಿ ರನ್‌ ಗಳನ್ನು ಕಲೆ ಹಾಕುವಲ್ಲಿ ವಿಫಲರಾದ, ಶಫಾಲಿ ವರ್ಮಾ ಮೂರನೇ ಪಂದ್ಯದಲ್ಲಿ 6 ಬೌಂಡರಿ ನೆರವಿನಿಂದ 36 ರನ್‌ ಸಿಡಿಸಿದರು.

Lizelle Lee s Fiery 67 Powers Delhi Capitals to First Win UP Warriorz Suffer Third Straight Loss

ಆರಂಭಿಕ ಆಟಗಾರ್ತಿ ಲಿಜೆಲ್ಲೆ ಲೀ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮುಂದೂವರಿಸಿದರು. ಇವರು ಈ ಪಂದ್ಯದಲ್ಲಿ 152ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದರು. ಇವರು 44 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 67 ರನ್‌ ಸಿಡಿಸಿ ಔಟ್ ಆದರು. ಲಾರಾ ವೋಲ್ವಾರ್ಡ್ ಅಜೇಯ 25 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ನಾಯಕಿ ಜೆಮಿಮಾ ರೊಡ್ರಿಗಸ್‌ 14 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 21 ರನ್‌ ಸಿಡಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 158 ರನ್ ಸೇರಿಸಿತು.

ಮೆಗ್ ಲ್ಯಾನಿಂಗ್ ಸಾಧನೆ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡದ ಆರಂಭ ಕಳಪೆಯಾಗಿತ್ತು. ಕಿರಣ್ ನವಗಿರೆ (0) ರನ್‌ ಕಲೆ ಹಾಕುವಲ್ಲಿ ಎಡವಿದರು. ಎರಡನೇ ವಿಕೆಟ್‌ಗೆ ನಾಯಕಿ ಮೆಗ್‌ ಲ್ಯಾನಿಂಗ್ ಹಾಗೂ ಫೋಬೆ ಲಿಚ್ಫೀಲ್ಡ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 47 ರನ್‌ಗಳಿಗೆ ಕಾಣಿಕೆ ನೀಡಿತು. ಫೋಬೆ ಲಿಚ್ಫೀಲ್ಡ್ 27 ರನ್‌ ಸಿಡಿಸಿ ಔಟ್ ಆದರು. ಮೂರನೇ ವಿಕೆಟ್‌ಗೆ ಮೆಗ್‌ ಲ್ಯಾನಿಂಗ್‌ ಹಾಗೂ ಹರ್ಲಿನ್ ಡಿಯೋಲ್‌ ಜೋಡಿ ಅಬ್ಬರಿಸಿತು. ಈ ಜೋಡಿ ಮೂರನೇ ವಿಕೆಟ್‌ಗೆ 85 ರನ್‌ ಜೊತೆಯಾಟದ ಕಾಣಿಕೆ ನೀಡಿದರು. ಹರ್ಲಿನ್ ಡಿಯೋಲ್ 7 ಬೌಂಡರಿ ಸಹಾಯದಿಂದ 47 ರನ್‌ ಸಿಡಿಸಿದರು.

Lizelle Lee s Fiery 67 Powers Delhi Capitals to First Win UP Warriorz Suffer Third Straight Loss

ನಾಯಕಿ ಮೆಗ್‌ ಲ್ಯಾನಿಂಗ್‌ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ನೈಜ ಆಟವನ್ನು ಆಡಿ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 54 ರನ್‌ ಸಿಡಿಸಿದರು. ಇವರು ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ 1000 ರನ್‌ ಪೂರೈಸಿದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು ಉತ್ತಮ ಆಟದ ನೆರವಿನಿಂದ ಯುಪಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್‌ ಸೇರಿಸಿತು. ಡೆಲ್ಲಿ ಪರ ಮರಿಜಾನ್ ಕಾಪ್‌, ಶಫಾಲಿ ವರ್ಮಾ ತಲಾ ಎರಡು ವಿಕೆಟ್‌ ಕಬಳಿಸಿದರು.

Story first published: Wednesday, January 14, 2026, 23:05 [IST]
Other articles published on Jan 14, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+