ಲಾಕ್‌ಡೌನ್ 4.0 ಮಾರ್ಗಸೂಚಿ ಬಿಡುಗಡೆ: ಕ್ರೀಡಾಲೋಕಕ್ಕೆ ಸ್ವಲ್ಪ ಸಿಹಿ

ಕೊರೊನಾ ವೈರಸ್ ಕಾರಣದಿಂದಾಗಿ ಭಾರತದಲ್ಲಿ ಕ್ರೀಡೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಕಳೆದ ಮೂರು ಲಾಕ್‌ಡೌನ್‌ಗಳು ಕ್ರೀಡಾ ಲೋಕದ ಪಾಲಿಗೆ ಕಠಿಣವಾಗಿಯೇ ಇತ್ತು. ಆದರೆ ನಾಲ್ಕನೇ ಹಂತದ ಲಾಕ್‌ಡೌನ್‌ನ ಮಾರ್ಗಸೂಚಿ ಭಾನುವಾರ ಬಿಡುಗಡೆಯಾಗಿದ್ದು ಕ್ರೀಡಾಪಟುಗಳ ಪಾಲಿಗೆ ನಿರಾಳತೆ ನೀಡುವ ಬೆಳವಣಿಗೆಯಾಗಿದೆ.
ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಕ್ರೀಡಾ ಕ್ಷೇತ್ರದಲ್ಲೂ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಮನೆಯಲ್ಲೇ ಉಳಿದುಕೊಂಡಿದ್ದ ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸಲು ಅವಕಾಶ ಸಿಕ್ಕಂತಾಗಿದೆ. ಅಭ್ಯಾಸ ನಡೆಸಲು ಸಾಧ್ಯವಾಗದ ಕ್ರೀಡಾಪಟುಗಳಿಗೆ ಫಿಟ್‌ನೆಸ್ ಕಾಪಾಡಿಕೊಳ್ಳು ಮತ್ತು ಮತ್ತೆ ತರಬೇತಿ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.
ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳನ್ನು ತೆರೆಯಲು ಕೇಂದ್ರ ಸರ್ಕಾರ ನಾಲ್ಕನೇ ಹಂತದ ಮಾರ್ಗಸೂಚಿಯಲ್ಲಿ ಅನುಮತಿಯನ್ನು ನೀಡಿದೆ. ಅದರೆ ಇದನ್ನು ಕೇವಲ ಕ್ರೀಡಾ ಸಂಬಂಧಿತ ಚಟುವಟಿಕೆಯನ್ನು ನಡೆಸಲು ಮಾತ್ರ ಬಳಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ವೀಕ್ಷಕರನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದೂ ಸೂಚನೆಯಲ್ಲಿದೆ.
"ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಸೇರಿದಂತೆ ಬೃಹತ್ ಸಭೆಗಳು" ಇನ್ನೂ ನಿಷೇಧಿಸಲಾಗಿದೆ ಎಂದು ಈ ಮಾರ್ಗಸೂಚಿಯಲ್ಲಿದೆ. ಹೀಗಾಗಿ ಸ್ಪರ್ಧಾತ್ಮಕ ಕ್ರೀಡಾಕೂಟಗಳಿಗೆ ಅನುಮತಿ ಸಿಗುವುದು ಇನ್ನೂ ಅನುಮಾನವಾಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications