IPL 2023 : ಈ ಐಪಿಎಲ್‌ನ ವೇಗದ ಎಸೆತ ಬೌಲ್ ಮಾಡಿದ ಲಾಕಿ ಫರ್ಗುಸನ್!
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ತಮ್ಮ ಮೊದಲನೇ ಪಂದ್ಯದಲ್ಲೇ ಲಾಕಿ ಫರ್ಗುಸನ್ ದಾಖಲೆ ನಿರ್ಮಿಸಿದ್ದಾರೆ. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 154.1 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಹೊಸ ದಾಖಲೆ ಬರೆದರು. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಫಿಟ್ ಆಗಿದ್ದು, ಕೆಕೆಆರ್ ನ ಮೂರನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡರು.
ವೃದ್ಧಿಮಾನ್ ಸಹಾ ವಿರುದ್ಧ ಬೌಲಿಂಗ್ ಮಾಡುವಾಗ ಅವರು ಗಂಟೆಗೆ 154.1 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದರು. ಈ ಮೂಲಕ ಉಮ್ರಾನ್ ಮಲಿಕ್ ಮತ್ತು ಮಾರ್ಕ್ ವುಡ್ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದರು. ಸನ್‌ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್ ಐಪಿಎಲ್ 2023 ರಲ್ಲಿ 150 ಕಿಲೋಮೀಟರ್ ಗಡಿ ದಾಟಿದ ಅತ್ಯಂತ ವೇಗದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್ ಗಂಟೆಗೆ 152.1 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ಮಾರ್ಕ್‌ವುಡ್ ಗಂಟೆಗೆ 151.1 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಮೂರನೇ ಸ್ಥಾನದಲ್ಲಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡದ ವೇಗಿ ಅನ್ರಿಚ್ ನೊಕಿಯಾ ಗಂಟೆಗೆ 148.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಆಡುವ ಭಾರತದ ಮತ್ತೊಬ್ಬ ಯುವ ವೇಗದ ಬೌಲರ್ ಕೂಡ ಗಂಟೆಗೆ 148.5 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಇರುವುದು ಉತ್ತಮ ಸುದ್ದಿಯಾಗಿದೆ. ಕಳೆದ ಬಾರಿ ಐಪಿಎಲ್‌ನಲ್ಲಿ ಕಾಶ್ಮೀರದ ಯುವ ಬೌಲರ್ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್‌ನಿಂದ ಭಾರಿ ಸುದ್ದಿ ಮಾಡಿದ್ದರು.
ದುಬಾರಿಯಾದ ಲಾಕಿ ಫರ್ಗುಸನ್
ಅತ್ಯಂತ ವೇಗದ ಎಸೆತ ಎಸೆದರೂ ಲಾಕಿ ಫರ್ಗುಸನ್ ತಮ್ಮ ಮೊದಲನೇ ಪಂದ್ಯದಲ್ಲೇ ದುಬಾರಿ ಬೌಲರ್ ಆದರು. 4 ಓವರ್ ಬೌಲಿಂಗ್ ಮಾಡಿದ ಅವರು 40 ರನ್ ನೀಡಿದರೂ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅದರಲ್ಲೂ 19ನೇ ಓವರ್ ನಲ್ಲಿ 25 ರನ್ ನೀಡುವ ದುಬಾರಿಯಾದರು. ಕೊನೆಯ ಎರಡು ಓವರ್ ನಲ್ಲಿ 45 ರನ್ ಕಲೆಹಾಕಿದ ಗುಜರಾತ್ ಟೈಟನ್ಸ್ 204 ರನ್ ಕಲೆ ಹಾಕಿತು.

ರೋಚಕ ಗೆಲುವು ಸಾಧಿಸಿದ ಕೆಕೆಆರ್
205 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚೇಸಿಂಗ್ ಮಾಡುವ ಸಂದರ್ಭದಲ್ಲಿ ಕೊನೆಯ ಓವರ್ ನಲ್ಲಿ 31 ರನ್ ಗಳಿಸುವ ಮೂಲಕ ದಾಖಲೆ ಬರೆದರು. ರಿಂಕು ಸಿಂಗ್ ಯಶ್ ದಯಾಳ್ ಬೌಲಿಂಗ್‌ನಲ್ಲಿ ಸತತವಾಗಿ 5 ಸಿಕ್ಸ್ ಸಿಡಿಸುವ ಮೂಲಕ ಅಮೋಘ ಗೆಲುವು ತಂದುಕೊಟ್ಟರು. ಗುಜರಾತ್ ಟೈಟನ್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್ ಹ್ಯಾಟ್ರಿಕ್ ಪಡೆದು ಮಿಂಚಿದರೂ, ಯಶ್ ದಯಾಳ್ ಕಳಪೆ ಬೌಲಿಂಗ್ ಕಾರಣ ಸೋಲನುಭವಿಸಬೇಕಾಯಿತು. ಸತತ ಎರಡು ಜಯ ಸಾಧಿಸಿದ್ದ ಹಾಲಿ ಚಾಂಪಿಯನ್ ತಂಡಕ್ಕೆ ಮೊದಲ ಸೋಲು ಎದುರಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications