Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ನ್ಯೂಜಿಲೆಂಟ್ ತಂಡಕ್ಕೆ ಮತ್ತೊಂದು ಹೊಡೆತ; ಲಾಕಿ ಫರ್ಗುಸನ್ ಹೊರಗೆ

ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೂ ಮುನ್ನ ಆಟಗಾರರನ್ನು ಗಾಯದ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಹಲವು ಸ್ಟಾರ್ ಆಟಗಾರರು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಆದರೂ, ಚಾಂಪಿಯನ್ಸ್ ಟ್ರೋಫಿಯಿಂದ ಸ್ಟಾರ್ ಆಟಗಾರರನ್ನು ಹೊರಗಿಡುವ ಕ್ರಮ ಮುಂದುವರೆದಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯಕ್ಕೆ ಒಂದು ದಿನ ಮೊದಲು ಕಿವೀಸ್ ಪಡೆ ಹಿನ್ನಡೆಯನ್ನು ಅನುಭವಿಸಿದೆ. ನ್ಯೂಜಿಲೆಂಡ್ ವೇಗದ ಬೌಲರ್ ಲಾಕಿ ಫರ್ಗುಸನ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.

ಲಾಕಿ ಫರ್ಗುಸನ್ ಕಾಲಿನ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತಿಲ್ಲ. ಚಾಂಪಿಯನ್ಸ್ ಟ್ರೋಫಿ ಬುಧವಾರ (ಫೆಬ್ರವರಿ 19) ಕರಾಚಿಯಲ್ಲಿ ಆರಂಭವಾಗಲಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ, ಎ ಗುಂಪಿನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ತಂಡಗಳೂ ಇವೆ.

Lockie Ferguson out of ICC Champions Trophy 2025

ಭಾನುವಾರ ಕರಾಚಿಯಲ್ಲಿ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಅನಧಿಕೃತ ಅಭ್ಯಾಸ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ ನಂತರ ಲಾಕಿ ಫರ್ಗುಸನ್ ಅವರ ಬಲಗಾಲಿನಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತು. ವೈದ್ಯಕೀಯ ತಪಾಸಣೆಯ ನಂತರ ಅವರು ಇಡೀ ಟೂರ್ನಿಯಲ್ಲಿ ಭಾಗವಹಿಸುವಷ್ಟು ಫಿಟ್ ಆಗಿರಲಿಲ್ಲ. ಹೀಗಾಗಿ ಫರ್ಗುಸನ್ ಮನೆಗೆ ಕಳುಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ. ಫರ್ಗುಸನ್ ಬದಲಿಗೆ ಕ್ಯಾಂಟರ್ಬರಿ ಕಿಂಗ್ಸ್ ತಂಡದ ವೇಗಿ ಕೈಲ್ ಜೇಮಿಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಡಿಸೆಂಬರ್‌ನಲ್ಲಿ ನಡೆದ ಸೂಪರ್ ಸ್ಮ್ಯಾಶ್‌ನಲ್ಲಿ ಜೇಮೀಸನ್ ಕ್ಯಾಂಟರ್ಬರಿ ಕಿಂಗ್ಸ್ ಪರ ದೇಶೀಯ ಕ್ರಿಕೆಟ್‌ಗೆ ಮರಳಿದರು. ಸತತ 10 ತಿಂಗಳ ಕಾಲ ಬೆನ್ನಿ ನೋವಿನಿಂದ ಚೇತರಿಸಿಕೊಂಡ ನಂತರ ಜೇಮೀಸನ್ ತಂಡ ಹಿಂತಿರುಗಿದ್ದಾರೆ. ಅವರು ಫೈನಲ್‌ನಲ್ಲಿ ಕಿಂಗ್ಸ್ ಪರ ಪ್ರಮುಖ ಪಾತ್ರ ವಹಿಸಿದರು. ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್‌ ಪ್ರದರ್ಶನ ಮಾಡಿದ ಅವರು ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಅವರು 14 ವಿಕೆಟ್‌ಗಳನ್ನು ಕಬಳಿಸಿದರು.

ನ್ಯೂಜಿಲೆಂಡ್ ಕೋಚ್ ಹೇಳಿದ್ದೇನು?

ಫರ್ಗುಸನ್ ಮತ್ತು ತಂಡಕ್ಕೆ ಇದು ಕಹಿ ಸುದ್ದಿ ಎಂದು ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಹೇಳಿದ್ದಾರೆ. 'ಫರ್ಗುಸನ್ ಆಡದಿರುವ ಬಗ್ಗೆ ನಮಗೆ ನಿಜಕ್ಕೂ ನಿರಾಶೆಯಾಗಿದೆ. ಅವರು ಬೌಲಿಂಗ್ ವಿಭಾಗದ ಪ್ರಮುಖ ಬೌಲರ್. ಅವರು ಮತ್ತೊಂದು ಪ್ರಮುಖ ಟೂರ್ನಿಯಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನಿಧಿಸಲು ಎದುರು ನೋಡುತ್ತಿದ್ದರು. ಅವರು ಶೀಘ್ರವಾಗಿ ಚೇತರಿಸಿಕೊಂಡು ಮರಳಲಿ ಎಂದು ನಾವು ಆಶಿಸುತ್ತೇನೆ' ಎಂದು ಸ್ಟೀಡ್ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ತಂಡ

ಮಿಚೆಲ್ ಸ್ಯಾಂಟ್ನರ್ (ನಾಯಕ), ಕೇನ್ ವಿಲಿಯಮ್ಸನ್, ಟಾಮ್ ಲ್ಯಾಥಮ್, ರಾಚಿನ್ ರವೀಂದ್ರ, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ನಾಥನ್ ಸ್ಮಿತ್, ಜಾಕೋಬ್ ಡಫಿ, ಮ್ಯಾಟ್ ಹೆನ್ರಿ, ವಿಲ್ ಒ'ರೂಕ್, ಕೈಲ್ ಜೇಮಿಸನ್.

Story first published: Tuesday, February 18, 2025, 13:42 [IST]
Other articles published on Feb 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+