For Quick Alerts
ALLOW NOTIFICATIONS  
For Daily Alerts
 

IPL 2024: ಲೋಕಸಭಾ ಚುನಾವಣೆ: ಐಪಿಎಲ್‌ ಉಳಿದ ಪಂದ್ಯಗಳು ಯುಎಇಗೆ ಸ್ಥಳಾಂತರ?

ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ ಕ್ರೀಡಾ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಇನ್ನೋಂದು ಬದಿ ಲೋಕಸಭಾ ಚುನಾವಣೆಗಳು ನಡೆಯಲಿವೆ. ಹೀಗಾಗಿ ದೇಶದಲ್ಲಿ ಐಪಿಎಲ್‌ ಹಾಗೂ ಎಲೆಕ್ಷನ್‌ ಕಾವು ಜೋರಾಗಿದೆ.

IPL 2024 ರ ಆರಂಭಿಕ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಸೀಸನ್‌ನ ಎರಡನೇ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ವರದಿಯ ಪ್ರಕಾರ, ಐಪಿಎಲ್ 2024 ರ ಎರಡನೇ ಹಂತದ ಪಂದ್ಯಗಳು ಯುಎಇಯಲ್ಲಿ ನಡೆಯಬಹುದು.

Lok Sabha Elections IPL Remaining Match Moved To UAE

ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಬೇಕಿದೆ. ಈ ಕಾರಣಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 2024ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಶನಿವಾರ ಪ್ರಕಟವಾಗು ಸಾಧ್ಯತೆ ಇದೆ.

'ಟೈಮ್ಸ್ ಆಫ್ ಇಂಡಿಯಾ' ಸುದ್ದಿ ಪ್ರಕಾರ, ಐಪಿಎಲ್ 2024 ರ ಎರಡನೇ ಹಂತದ ಪಂದ್ಯಗಳು ಯುಎಇಯಲ್ಲಿ ಆಡಬಹುದು. ಪಂದ್ಯದ ವೇಳಾಪಟ್ಟಿ ಮತ್ತು ಚುನಾವಣಾ ದಿನಾಂಕ ಬಹುತೇಕ ಏಕಕಾಲದಲ್ಲಿ ಇದ್ದಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ, ಐಪಿಎಲ್ ಎರಡನೇ ವೇಳಾಪಟ್ಟಿ ಇನ್ನೂ ಹೊರ ಬಂದಿಲ್ಲ. ಆದರೆ ಲೋಕಸಭೆ ಚುನಾವಣೆಯ ದಿನಾಂಕವನ್ನು ಶನಿವಾರ ಪ್ರಕಟಿಸಬಹುದು. ಇದಾದ ಬಳಿಕವಷ್ಟೇ ಐಪಿಎಲ್ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಬಿಸಿಸಿಐ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಬಹುದು ಎಂದು ತಿಳಿದು ಬಂದಿದೆ.

Lok Sabha Elections IPL Remaining Match Moved To UAE

2020ರಲ್ಲೂ ಯುಎಇ ಆತಿಥ್ಯ

ಇದಕ್ಕೂ ಮೊದಲು ಯುಎಇಯಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಐಪಿಎಲ್ 2020 ಪಂದ್ಯಗಳು ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆದಿದ್ದವು. ಕೊರೊನಾ ವೈರಸ್‌ನಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಆದರೆ 2014 ರಲ್ಲಿ, ಚುನಾವಣೆಯ ಕಾರಣ, ಐಪಿಎಲ್ ಪಂದ್ಯಗಳನ್ನು ಯುಎಇಯಲ್ಲಿ ಆಡಿಸಲಾಗಿತ್ತು. 2014ರ ಮೊದಲ ಪಂದ್ಯ ಅಬುಧಾಬಿಯಲ್ಲಿ ನಡೆದಿತ್ತು. ಇದಾದ ನಂತರ ಶಾರ್ಜಾ ಮತ್ತು ದುಬೈನಲ್ಲಿ ಪಂದ್ಯಗಳು ನಡೆದವು. 2014 ರ ಋತುವಿನ 20 ಪಂದ್ಯಗಳು ಯುಎಇಯಲ್ಲಿ ನಡೆದವು. ಇದಾದ ನಂತರ ಎಲ್ಲಾ ಪಂದ್ಯಗಳು ಭಾರತದಲ್ಲಿ ನಡೆದವು.

2 ಪಂದ್ಯಗಳ ವೇಳಾ ಪಟ್ಟಿ ಬಿಡುಗಡೆ

ಐಪಿಎಲ್ 2024 ರ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಬಿಸಿಸಿಐ ಋತುವಿನ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಇದರಲ್ಲಿ ಚೆನ್ನೈ 4 ಪಂದ್ಯಗಳನ್ನು ಹೊಂದಿದೆ. ಚೆನ್ನೈನ ಎರಡನೇ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಮಾರ್ಚ್ 26 ರಂದು ನಡೆಯಲಿದೆ. ಸದ್ಯದ ವೇಳಾಪಟ್ಟಿಯ ಪ್ರಕಾರ 21ನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ನಡುವೆ ನಡೆಯಲಿದೆ. ಈ ಪಂದ್ಯ ಏಪ್ರಿಲ್ 7 ರಂದು ನಡೆಯಲಿದೆ.

Story first published: Saturday, March 16, 2024, 11:57 [IST]
Other articles published on Mar 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+