ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಬಚಾವಾದ ಕ್ರಿಸ್ ಕೇರ್ನ್ಸ್
ಲಂಡನ್, ಡಿ.1: ನ್ಯೂಜಿಲೆಂಡ್ ನ ಮಾಜಿ ಆಲ್ ರೌಂಡರ್ ಕ್ರಿಸ್ ಕ್ರಿಸ್ ಕೇರ್ನ್ಸ್ ಅವರು ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಮುಕ್ತರಾಗಿದ್ದಾರೆ. ಟೆಸ್ಟ್ ಕ್ರಿಕೆಟ್, ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪವನ್ನು ಕ್ರಿಸ್ ಕೇರ್ನ್ಸ್ ಹೊತ್ತುಕೊಂಡಿದ್ದರು.
ಸುಮಾರು 9 ವಾರಗಳ ಕಾಲ ವಿಚಾರಣೆ ನಡೆಸಿದ ನಂತರ ಸೌಥ್‌ವಾರ್ಕ್ ಕ್ರೌನ್ ಕೋರ್ಟ್ ಕ್ಲೀನ್‌ಚಿಟ್ ನೀಡಲಾಗಿದೆ. 2010ರ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ (ಐಸಿಎಲ್) ಕ್ರಿಸ್ ಕೇರ್ನ್ಸ್ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂದು ಐಪಿಎಲ್‌ನ ಮಾಜಿ ಆಯುಕ್ತ ಲಲಿತ್ ಮೋದಿ ಟ್ವಿಟರ್‌ನಲ್ಲಿ ಆರೋಪ ಹೊರಿಸಿದ್ದರು. ಕ್ರಿಸ್ ಕೇರ್ನ್ಸ್ 2012ರಲ್ಲಿ ಮೋದಿ ವಿರುದ್ದ ಮಾನನಷ್ಠ ಮೊಕದ್ದಮೆ ಹೂಡಿದ್ದರು. [ಕ್ರಿಕೆಟ್ : ಲೂ ವಿನ್ಸೆಂಟ್ ಗೆ ಆಜೀವ ನಿಷೇಧ]

ಕ್ರಿಕೆಟಿಗರಾದ ಡೇನಿಯಲ್ ವೆಟೋರಿ, ರಿಕಿ ಪಾಂಟಿಂಗ್, ಬ್ರೆಂಡನ್ ಮೆಕಲಮ್, ಶೇನ್ ಬಾಂಡ್, ಕ್ರಿಸ್ ಹ್ಯಾರಿಸ್, ಕೈಲ್ ಮಿಲ್ಸ್ ಹಾಗೂ ಆಂಡ್ರೆ ಆಡಮ್ಸ್ ವಿಚಾರಣೆ ನಡೆಸಿದ ಏಳು ಸದಸ್ಯರನ್ನು ಒಳಗೊಂಡ ತೀರ್ಪುಗಾರರ ಸಮಿತಿ ಒಮ್ಮತದ ತೀರ್ಮಾನಕ್ಕೆ ಬರಲು ವಿಫಲವಾಯಿತು.[ಮ್ಯಾಚ್ ಫಿಕ್ಸರ್ಸ್ ಗ್ಯಾಂಗಿನಲ್ಲಿ ದಿನೇಶ್ ಮೊಂಗಿಯಾ]
ಭಾರತದ ಎಡಗೈ ಬ್ಯಾಟ್ಸ್ ಮನ್ ದಿನೇಶ್ ಮೊಂಗಿಯಾ ಜೊತೆಗೆ ಕಿವೀಸ್ ಮಾಜಿ ವೇಗಿ ಡ್ಯಾರಿಲ್ ಟಫಿ ಹೆಸರನ್ನು ವಿನ್ಸೆಂಟ್ ಬಹಿರಂಗ ಪಡಿಸಿದ್ದರು. ಅದರೆ, ದಿನೇಶ್ ಮೊಂಗಿಯಾ ಈ ಆರೋಪವನ್ನು ಅಲ್ಲಗಳೆದಿದ್ದು, 'ವಿನ್ಸೆಂಟ್ರ ಆರೋಪ ಆಧಾರರಹಿತ. ನಾನು ಯಾವುದೇ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿಲ್ಲ. ಚಂಡೀಗಢ ಲಯನ್ಸ್ ಪರ ಆಡುವಾಗ ಕಿವೀಸ್ ಕ್ರಿಕೆಟರ್ಸ್ (ಕ್ರಿಸ್ ಕೇರ್ನ್ಸ್, ವಿನ್ಸೆಂಟ್, ಟಫಿ) ಏನು ಮಾಡುತ್ತಿದ್ದರು ನನಗೆ ಗೊತ್ತಿಲ್ಲ ಎಂದಿದ್ದರು.
ಕ್ರಿಸ್ ಕೇರ್ನ್ಸ್ ಅವರು ನ್ಯೂಜಿಲೆಂಡ್ ಪರ62 ಟೆಸ್ಟ್ ಪಂದ್ಯ, 215 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 1989 ರಿಂದ 2006ರ ತನಕ ನ್ಯೂಜಿಲೆಂಡ್ ನ ಶ್ರೇಷ್ಠ ಆಲ್ ರೌಂಡರ್ ಎನಿಸಿಕೊಂಡಿದ್ದರು. (ಐಎಎನ್ ಎಸ್)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Cairns acquitted of perjury charges
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications