ಸ್ಮಿತ್ ಆಟಗಾರರನ್ನು ಬೆಳೆಯಲು ಬಿಡುವುದಿಲ್ಲ ಎಂದ ತ್ಸೊತ್ಸೊಬೆ ; ಎಬಿಡಿ ಹೆಸರು ಕೂಡ ಉಲ್ಲೇಖ

ಲೊನ್ವಾಬೊ ತ್ಸೊತ್ಸೊಬೆ, ಈ ಆಟಗಾರನ ಹೆಸರು ಕ್ರೀಡಾಭಿಮಾನಿಗಳಿಗೆ ತಿಳಿದೇ ಇರುತ್ತದೆ. 2015ರವರೆಗೂ ದಕ್ಷಿಣ ಆಫ್ರಿಕಾ ತಂಡದ ಪರ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚಿದ್ದ ಲೊನ್ವಾಬೊ ತ್ಸೊತ್ಸೊಬೆ 2015ರ ಸ್ಪಾಟ್ ಫಿಕ್ಸಿಂಗ್ ಹಗರಣವೊಂದರಲ್ಲಿ ಸಿಲುಕಿಕೊಂಡು ತಮ್ಮ ಕ್ರಿಕೆಟ್ ಜೀವನವನ್ನು ಹಾಳು ಮಾಡಿಕೊಂಡರು. ದಕ್ಷಿಣ ಆಫ್ರಿಕಾ ಪರ 61 ಏಕದಿನ ಹಾಗೂ 23 ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದ ತ್ಸೊತ್ಸೊಬೆ ಕ್ರಮವಾಗಿ 94 ಮತ್ತು 18 ವಿಕೆಟ್‍ಗಳನ್ನು ಪಡೆದಿದ್ದಾರೆ.
2015ರ ಡಿಸೆಂಬರ್‌ನಲ್ಲಿ ನಡೆದ ರಾಮ್ ಸ್ಲಾನ್ ಟಿ20 ಲೀಗ್ ವೇಳೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡ ತ್ಸೊತ್ಸೊಬೆಗೆ 8 ವರ್ಷಗಳ ನಿಷೇಧವನ್ನು ಹೇರಲಾಯಿತು. ಹೀಗೆ ನಿಷೇಧಕ್ಕೊಳಗಾಗಿದ್ದ ತ್ಸೊತ್ಸೊಬೆ ಇದೀಗ ಗ್ರೇಮ್ ಸ್ಮಿತ್ ವಿರುದ್ಧ ವರ್ಣ ಭೇದದ ಗಂಭೀರ ಆರೋಪವನ್ನು ಮಾಡಿದ್ದಾರೆ. ಗ್ರೇಮ್ ಸ್ಮಿತ್ ವರ್ಣ ಭೇದ ಮಾಡುತ್ತಾರೆ ಎಂಬುದಕ್ಕೆ ತ್ಸೊತ್ಸೊಬೆ ಉದಾಹರಣೆಯೊಂದನ್ನು ಸಹ ನೀಡಿ ವಿವರಿಸಿದ್ದಾರೆ.
2012ರ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಸಮಯದಲ್ಲಿ ವಿಕೆಟ್ ಕೀಪರ್ ಮಾರ್ಕ್ ಬೌಚರ್ ಗಾಯಕ್ಕೊಳಗಾಗಿ ತಂಡದಿಂದ ಹೊರಗುಳಿಯುವ ಪರಿಸ್ಥಿತಿ ಬಂದಾಗ ಥಮಿ ತ್ಸೊಲೆಕೈಲ್ ಎಂಬ ಆಟಗಾರನಿಗೆ ಅವಕಾಶ ನೀಡಬೇಕಿತ್ತು. ಆದರೆ ಗ್ರೇಮ್ ಸ್ಮಿತ್ ಥಮಿ ತ್ಸೊಲೆಕೈಲ್ ಬದಲು ಎಬಿ ಡಿವಿಲಿಯರ್ಸ್ ಅವರಿಗೆ ವಿಕೆಟ್ ಕೀಪಿಂಗ್ ಮಾಡುವ ಅವಕಾಶವನ್ನು ನೀಡಿದರು. ಈ ಮೂಲಕ ಥಮಿ ತ್ಸೊಲೆಕೈಲ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವುದನ್ನು ಗ್ರೇಮ್ ಸ್ಮಿತ್ ತಡೆಗಟ್ಟಿದರು ಎಂದು ತ್ಸೊತ್ಸೊಬೆ ಆರೋಪಿಸಿದ್ದಾರೆ.
ಥಮಿ ತ್ಸೊಲೆಕೈಲ್ ಕಪ್ಪು ವರ್ಣದ ಆಟಗಾರನಾಗಿದ್ದ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ನೀಡಲು ಗ್ರೇಮ್ ಸ್ಮಿತ್ ನಿರಾಕರಿಸಿದರು ಹಾಗೂ ಆತನಿಗೆ ಆಡಲು ಅವಕಾಶ ನೀಡಿದರೆ ಆ ಕ್ಷಣವೇ ನಿವೃತ್ತಿ ಘೋಷಿಸುವುದಾಗಿ ಸ್ಮಿತ್ ಬೆದರಿಸಿದರು ಎಂಬ ಗಂಭೀರ ಆರೋಪವನ್ನು ಇದೀಗ ತ್ಸೊತ್ಸೊಬೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications