For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ತಲೆ ತಗ್ಗಿಸಿದ ಕೊಹ್ಲಿ, ಸೋಲಿಗೆ ನೀಡಿದ ಕಾರಣವಿದು!

Looking at the Pitch, We Didnt Think About the Spin Option: Kohli

ಪರ್ತ್, ಡಿಸೆಂಬರ್ 18: ದುರ್ಬಲ ತಂಡವೆಂದು ಕರೆಸಿಕೊಂಡಿದ್ದ ಆಸ್ಟ್ರೇಲಿಯಾ ವಿರುದ್ಧ ಭಾರತ, ಪರ್ತ್ ನಲ್ಲಿ ಮಂಗಳವಾರ (ಡಿಸೆಂಬರ್ 18) ಮುಕ್ತಾಯಗೊಂಡ ದ್ವಿತೀಯ ಟೆಸ್ಟ್ ನಲ್ಲಿ 146 ರನ್ ಗಳ ಹೀನಾಯ ಸೋಲನುಭವಿಸಿತು. ಪಂದ್ಯದ ಬಳಿಕ ತಂಡದ ಹಿನ್ನಡೆಗೆ ಕಾರಣವನ್ನು ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಐಪಿಎಲ್‌ 2019: ಆಟಗಾರರ ಹರಾಜು Live ಅಪ್‌ಡೇಟ್‌ಗಾಗಿ ಭೇಟಿಕೊಡಿ

ಪರ್ತ್ ಪಿಚ್ ಭಾರತೀಯ ಆಟಗಾರರಿಗಿಂತ ಹೆಚ್ಚು ಆಸೀಸ್ ಆಟಗಾರರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಆಸೀಸ್ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಾಕತಾಳೀಯವೆಂಬಂತೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಮುಖಭಂಗವಾಗಿದೆ.

ಪಂದ್ಯದ ಸೋಲನ್ನು ತುಂಬಾ ಸರಳವಾಗಿ ವಿಮರ್ಶಿಸುವುದಾದರೆ, ಆರಂಭಿಕ ಆಟಗಾರರ ವೈಫಲ್ಯ ಮತ್ತು ಸ್ಪಿನ್ ಬೌಲರ್‌ಗಳನ್ನು ಕಡೆಗಣಿಸಿದ್ದರಿಂದ ಟೀಮ್ ಇಂಡಿಯಾ ಎರಡನೇ ಟೆಸ್ಟ್‌ನಲ್ಲಿ ಸೋಲಿನ ಬೆಲೆ ತೆರಬೇಕಾಗಿದೆ. ಇನ್ನೂ ಒಂದು ಅಂಶವೆಂದರೆ, ಅನುಭವಿ ಆಟಗಾರರೂ ಕೊಂಚ ದೌರ್ಬಲ್ಯ ತೋರಿಕೊಂಡಿದ್ದು!

ಸ್ಪಿನ್ನರ್‌ಗಳನ್ನು ನಿರ್ಲಕ್ಷಿಸಿದೆವು

ಸ್ಪಿನ್ನರ್‌ಗಳನ್ನು ನಿರ್ಲಕ್ಷಿಸಿದೆವು

'ಪರ್ತ್ ಪಿಚ್‌ ಗಮನಿಸಿ ನಾವು ಸ್ಪಿನ್‌ ಆಯ್ಕೆ ಬಗ್ಗೆ ಯೋಚಿಸಿರಲಿಲ್ಲ. ಇದು ಸೋಲಿಗೆ ಕಾರಣವಾಯ್ತು' ಎಂದು ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಅಭಿಪ್ರಾಯ ಹಂಚಿಕೊಂಡರು. ದ್ವಿತೀಯ ಟೆಸ್ಟ್ ವೇಳೆ ಭಾರತ ತಂಡದಲ್ಲಿ ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಹೀಗೆ ನಾಲ್ಕೂ ಜನ ವೇಗಿಗಳೇ ಇದ್ದರು. ಸ್ಪಿನ್‌ ಬೌಲಿಂಗ್‌ ವಿಭಾಗವನ್ನು ಕಡೆಗಣಿಸಲಾಗಿತ್ತು. ದುರದೃಷ್ಟಕರ ಸಂಗತಿಯೆಂದರೆ ಅಪಾಯಕಾರಿ ಸ್ಪಿನ್ನರ್ ಆರ್ ಅಶ್ವಿನ್ ಕೂಡ ಗಾಯಾಳಾಗಿ ತಂಡದಿಂದ ಹೊರಗುಳಿದಿದ್ದರು.

ಕಾಡಿದ ನಾಥನ್ ಲಿಯಾನ್

ಕಾಡಿದ ನಾಥನ್ ಲಿಯಾನ್

ಭಾರತದ ಮಾರಕ ಸ್ಪಿನ್ನರ್ ಆರ್‌ಅಶ್ವಿನ್ ತಂಡದಿಂದ ಅನಿವಾರ್ಯವಾಗಿ ಹೊರಗುಳಿದಿದ್ದರೆ, ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಏಕಾಂಗಿಯಾಗಿ ಭಾರತವನ್ನು ಕಾಡಿದರು. ದ್ವಿತೀಯ ಟೆಸ್ಟ್‌ನಲ್ಲಿ 5+3 ವಿಕೆಟ್ ಉರುಳಿಸಿ ಭಾರತವನ್ನು ಸೋಲಿನಂಚಿಗೆ ತಳ್ಳಿದ್ದರು ಲಿಯಾನ್! ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಅರಿಯುವಲ್ಲಿ ಎಡವಿದೆವು

ಅರಿಯುವಲ್ಲಿ ಎಡವಿದೆವು

'ನಾವೊಂದು ತಂಡವಾಗಿ ಈ ಪಿಚ್‌ಗೆ ಸ್ಪಿನ್ನರ್‌ಗಳ ಅವಶ್ಯಕತೆಯಿದೆ ಎಂದು ಅರಿಯುವಲ್ಲಿ ಎಡವಿದೆವು' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕೊಹ್ಲಿ ಹೇಳಿದರು. ವೇಗಿಗಳಲ್ಲಿ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಕೊಂಚ ಮಿಂಚಿದರು. ಆದರೆ ಉಮೇಶ್ ಯಾದವ್ ಎರಡೂ ಇನ್ನಿಂಗ್ಸ್‌ ಸೇರಿ ಕೇವಲ 2 ವಿಕೆಟ್ ಪಡೆದಿದ್ದರು.

ಸರಣಿ ಗೆಲ್ಲಲು ಅವಕಾಶವಿದೆ

ಸರಣಿ ಗೆಲ್ಲಲು ಅವಕಾಶವಿದೆ

ಅಡಿಲೇಡ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ 31 ರನ್ ಸೋಲನುಭವಿಸಿದ್ದ ಆತಿಥೇಯ ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್‌ನಲ್ಲಿ 326+243 ರನ್ ಕಲೆ ಹಾಕಿದ್ದರೆ ಪಂದ್ಯ ಗೆದ್ದರೆ, ಭಾರತ 283+140 ರನ್ ಕಲೆ ಹಾಕಲಷ್ಟೇ ಶಕ್ತವಾಯ್ತು, ಮುಖಭಂಗ ಅನುಭವಿಸಿತು. ಇದರೊಂದಿಗೆ 4 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಇನ್ನೆರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ ಅಥವಾ ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯ ಡ್ರಾಗೊಂಡರಷ್ಟೇ ಐಸಿಹಾಸಿಕ ಸರಣಿ ಭಾರತದ ವಶವಾಗಲಿದೆ.

Story first published: Tuesday, December 18, 2018, 15:50 [IST]
Other articles published on Dec 18, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+