Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡ ಪ್ರಕಟ: ಲೋರ್ಕನ್ ಟಕರ್‌ಗೆ ಪಟ್ಟ

ಭಾರತ ಇನ್ನೇನು ಕೆಲವೇ ದಿನಗಳಲ್ಲಿ ಐರ್ಲೆಂಡ್‌ ಪ್ರವಾಸವನ್ನು ಕೈಗೊಳ್ಳಲಿದೆ. ಈ ನಿರೀಕ್ಷಿತ ಟಿ20 ಸರಣಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈಗ ಈ ಸರಣಿಗೆ ಆತಿಥೇಯ ಐರ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಐರ್ಲೆಂಡ್ ಟಿ20 ತಂಡಕ್ಕೆ ಹೊಸ ನಾಯಕನನ್ನು ಸಹ ನೇಮಿಸಿದೆ. 29 ವರ್ಷದ ಲೋರ್ಕನ್ ಟಕರ್ ಈ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ತಂಡವನ್ನು ಮುನ್ನಡೆಸಲಿದ್ದಾರೆ. ಪಾಲ್ ಸ್ಟಿರ್ಲಿಂಗ್ ಈ ಹಿಂದೆ ಐರ್ಲೆಂಡ್ ಅನ್ನು ದೀರ್ಘಕಾಲ ಮುನ್ನಡೆಸಿದ್ದರು.

ಜೂನ್‌ 26 ರಿಂದ ಎರಡು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯನ್ನು ಭಾರತದಲ್ಲಿ ಸೋನಿ ಲೀವ್ ಆಪ್‌ ಹಾಗೂ ಸೋನಿ ನೆಟ್‌ವರ್ಕ್‌ನಲ್ಲಿ ನೋಡಬಹುದಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ 15 ವರ್ಷದ ವೈಭವ್ ಸೂರ್ಯವಂಶಿ ಆಡುವ ಅವಕಾಶವನ್ನು ಪಡೆದಿದ್ದು, ಎಲ್ಲರ ಚಿತ್ತ ಕದ್ದಿದ್ದಾರೆ.

Lorcan Tucker

ಭಾರತದ ವಿರುದ್ಧದ ಪಂದ್ಯಕ್ಕೆ ಐರ್ಲೆಂಡ್‌ನ ಹೊಸ ನಾಯಕ ಲೋರ್ಕನ್ ಟಕರ್ ನೇಮಕರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಲೋರ್ಕನ್ ಟಕರ್, ಭಾರತ ತಂಡ ಬಲಿಷ್ಠವಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಶಕ್ತಿಶಾಲಿ ತಂಡಗಳಲ್ಲಿ ಒಂದಾಗಿದೆ. ನಾವು ನಮ್ಮ ಹೊಸ ಪ್ರಯಾಣವನ್ನು ಬಲಿಷ್ಠ ತಂಡದ ವಿರುದ್ಧ ಆರಂಭಿಸಲುದ್ದೇವೆ. ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಲು ಇದು ಉತ್ತಮ ಅವಕಾಶ. ನಮ್ಮ ತಂಡಕ್ಕೆ ಭಾರತಕ್ಕಿಂತ ದೊಡ್ಡ ಸವಾಲು ಇನ್ನೊಂದಿಲ್ಲ. ನಾವು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ವಿಶ್ವಾಸ ನಮ್ಮ ತಂಡದ ಆಟಗಾರರಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಐರ್ಲೆಂಡ್ ತಂಡಕ್ಕೆ ಕಾಡುತ್ತಿದೆ ಗಾಯದ ಸಮಸ್ಯೆ

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20ಐ ಸರಣಿಯಿಂದ ಆರು ಐರಿಶ್ ಆಟಗಾರರು ಗಾಯದಿಂದಾಗಿ ಹೊರಗುಳಿದಿದ್ದಾರೆ. ತಂಡದ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್ ಪಾಲ್ ಸ್ಟಿರ್ಲಿಂಗ್ ಸ್ನಾಯು ಸೆಳೆತದಿಂದ ಹೊರಗುಳಿದಿದ್ದಾರೆ, ಆದರೆ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದ ಬೌಲರ್ ಜೋಶ್ ಲಿಟಲ್ ಸಹ ತಂಡದಿಂದ ಹೊರ ನಡೆದಿದ್ದಾರೆ. ಮಾರ್ಕ್ ಅಡೈರ್, ಕರ್ಟಿಸ್ ಕ್ಯಾಂಪರ್, ಬ್ಯಾರಿ ಮೆಕಾರ್ಥಿ, ಮತ್ತು ಜೋರ್ಡಾನ್ ನೀಲ್ ಸಹ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ.

ಭಾರತ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕ್ಯಾಲಿಟ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೀಸ್, ಗೇವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.

ಐರ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.

Story first published: Tuesday, June 23, 2026, 10:44 [IST]
Other articles published on Jun 23, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+