Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC 2023-25 Final: ದ.ಆಫ್ರಿಕಾ-ಆಸ್ಟ್ರೇಲಯಾ ಫೈಟ್: ಇಲ್ಲಿದೆ ಕಂಪ್ಲೀಟ್ ಮಾಹಿತಿ

ಬುಧವಾರದಿಂದ ಲಾರ್ಡ್ಸ್‌ ಅಂಗಳದಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಆಸೀಸ್‌ ಎರಡನೇ ಬಾರಿಗೆ ಟ್ರೋಫಿ ಎತ್ತುವ ಕನಸು ಕಾಣುತ್ತಿದ್ದರೆ, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಐಸಿಸಿ ಟೆಸ್ಟ್‌ ಚಾಂಪಿಯನ್ ಆಗುವ ಕನಸು ಕಂಡಿದೆ. ಹೀಗಾಗಿ ಈ ಪಂದ್ಯ ರೋಚಕತೆ ಹುಟ್ಟಿಸಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನವನ್ನು ಪಡೆದಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ರೋಚಕತೆ ಹೆಚ್ಚಿಸಿದೆ. ಉಭಯ ತಂಡದಲ್ಲೂ ಸ್ಟಾರ್ ವೇಗದ ಬೌಲರ್‌ಗಳು ಇದ್ದು ಭರವಸೆ ಮೂಡಿಸಿದ್ದಾರೆ. ವೇಗಿಗಳ ಕಾದಾಟದಲ್ಲಿ ಗೆಲ್ಲೋರು ಯಾರು ಎಂಬ ಪ್ರಶ್ನೆ ದೊಡ್ಡದಾಗಿದೆ.

Lord s Set for Thrilling WTC Final as South Africa and Australia Battle for Glory

ಆಸ್ಟ್ರೇಲಿಯಾ ತಂಡದಲ್ಲಿ ಸ್ಟಾರ್‌ ಬ್ಯಾಟರ್‌ಗಳ ದಂಡೇ ಇದೆ. ಅನುಭವಿ ಉಸ್ಮಾನ್ ಖವಾಜಾ, ಯುವ ಆಟಗಾರ ಸ್ಯಾಮ್ ಕಾನ್‌ಸ್ಟಾಜಾ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲಂಬುಶೇನ್‌, ಸ್ಟೀವ್ ಸ್ಮಿತ್‌ , ಟ್ರಾವಿಸ್‌ ಹೆಡ್‌ ಕಾಣಿಸಿಕೊಳ್ಳಲಿದ್ದಾರೆ. ಈ ಆಟಗಾರರು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಬಲ್ಲರು. ಆಸೀಸ್‌ ತಂಡದ ಸ್ಟಾರ್ ವೇಗದ ಬೌಲರ್‌ ಮಿಚೆಲ್ ಸ್ಟಾರ್ಕ್‌, ಜೋಶ್ ಹ್ಯಾಜಲ್‌ವುಡ್‌, ಪ್ಯಾಟ್‌ ಕಮಿನ್ಸ್ ಚೆಂಡಿನೊಂದಿಗೆ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ನಾಥನ್‌ ಲಿಯಾನ್‌ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ.

ಭರವಸೆಯ ಆಟಗಾರರೇ ಬಲ

ದಕ್ಷಿಣ ಆಫ್ರಿಕಾ ತಂಡಕ್ಕೆ ಭರವಸೆಯ ಆಟಗಾರರೇ ಬಲ ತುಂಬಿದ್ದಾರೆ. ಈ ಆಟಗಾರರು ಈಗಾಗಲೇ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಆರಂಭಿಕರಾಗಿ ರಯನ್‌ ರಿಕಲ್ಟನ್‌, ಐಡೆನ್ ಮಾರ್ಕ್ರಾಮ್‌ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇನ್ನು ತೆಂಬು ಬವುಮಾ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್, ವಿಯಾನ್ ಮುಲ್ಡರ್, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರರು. ವೇಗದ ಬೌಲರ್‌ಗಳಾದ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಕಾರ್ಬಿನ್‌ ಬಾಷ್ ವೇಗದ ಬೌಲಿಂಗ್‌ನಿಂದ ಎದುರಾಳಿಗಳಿಗೆ ಚಳ್ಳೆ ಹಣ್ಣು ತಿನ್ನಿಸಬಹುದು.

Lord s Set for Thrilling WTC Final as South Africa and Australia Battle for Glory

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್ ಫೈನಲ್‌ ನಡೆಯುವುದು ಎಲ್ಲಿ? ಯಾವಾಗ?

ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳ ನಡುವಣ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯ ಜೂನ್‌ 11 ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಫೈನಲ್‌ ಪಂದ್ಯ ನಡೆಯುವುದು ಯಾವಾಗ?

ಡಬಬ್ಲ್ಯುಟಿಸಿ ಫೈನಲ್‌ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗುತ್ತದೆ.

ಎಲ್ಲಿ ಈ ಪಂದ್ಯದ ನೇರ ಪ್ರಸಾರ?

ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಈ ಪಂದ್ಯದ ನೇರ ಪ್ರಸಾರ ಆಗಲಿದೆ. ಅಲ್ಲದೆ ಜಿಯೋ ಹಾಟ್‌ಸ್ಟಾರ್‌ನಲ್ಲೂ ಈ ಪಂದ್ಯದ ನೇರ ಪ್ರಸಾರ ಲಭ್ಯ.

Story first published: Tuesday, June 10, 2025, 12:51 [IST]
Other articles published on Jun 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+