Lord's Test: ಕ್ರಾಂತಿ ಗೌಂಡಗೆ ಐದು ವಿಕೆಟ್: ಜೂಲನ್ ಗೋಸ್ವಾಮಿ ದಾಖಲೆ ಬ್ರೇಕ್
ಭಾರತ ಮಹಿಳಾ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಹರ್ಮನ್‌ಪ್ರೀತ್ ಕೌರ್ ಪಡೆ ಹಾಗೂ ಆತಿಥೇಯ ತಂಡದ ವಿರುದ್ಧ ಟೆಸ್ಟ್ ಪಂದ್ಯ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ವೇಗದ ಬೌಲರ್ ಕ್ರಾಂತಿ ಗೌಡ ಬಿಗುವಿನ ದಾಳಿ ನಡೆಸ ಅಬ್ಬರಿಸಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ಗೆ 154 ರನ್ ಸೇರಿಸಿದೆ.
ಟೀಮ್ ಇಂಡಿಯಾದ ಯುವ ಬೌಲರ್ 22 ವರ್ಷದ ಕ್ರಾಂತಿ ಗೌಡ, ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದ್ದಾರೆ. ಇವರ ಬಿಗುವಿನ ದಾಳಿಯ ನೆರವಿನಿಂದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 170 ರನ್‌ಗಳಿಗೆ ಆಲೌಟ್ ಆಯಿತು. ಕ್ರಾಂತಿ ಗೌಡ 17 ಓವರ್ ಬೌಲಿಂಗ್ ನಡೆಸಿ ಓವರ್ ಮೇಡನ್ ಮಾಡಿ 37 ರನ್ ನೀಡಿ 5 ವಿಕೆಟ್ ಪಡೆದು ಅಬ್ಬರಿಸಿದರು. ಈ ಮೂಲಕ ಕ್ರಾಂತಿ ಗೌಡ ಹಾನರ್ಸ್ ಬೋರ್ಡ್‌ನಲ್ಲಿ ತಮ್ಮ ಸ್ಥಾನವನ್ನು ಪಡೆದಿದ್ದಾರೆ.

ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ 285 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಕ್ರಾಂತಿ ಗೌಡ ಶಾಕ್ ನೀಡಿದರು. ಎರಡನೇ ದಿನದಾಟದಲ್ಲಿ ಭಾರತದ ಪರ ಕ್ರಾಂತಿ ಗೌಡ 5 ವಿಕೆಟ್ ಪಡೆದು ಬೀಗಿದರು. ಈ ಮೂಲಕ ಇವರು ಟೀಮ್ ಇಂಡಿಯಾದ ದಿಗ್ಗಜ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ದಾಖಲೆಯ ಸಮಕ್ಕೆ ನಿಂತರು.
ಕ್ರಾಂತಿ ಗೌಡ 22 ವರ್ಷ ಹಾಗೂ 225 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದು ಬೀಗಿದ್ದಾರೆ. ಇನ್ನು ಜೂಲನ್ ಗೋಸ್ವಾಮಿ ಅವರು 2005ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ 28ನೇ ವರ್ಷದಲ್ಲಿ ಈ ಸಾಧನೆ ಮಾಡಿದ್ದರು. ಈಗ ಕ್ರಾಂತಿ ಗೌಡ ಕಿರಿಯ ವಯಸ್ಸಿನಲ್ಲಿ ಭಾರತದ ಪರ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಸ್ಮೃತಿ ಮಂಧಾನ ಅಬ್ಬರ
ಶನಿವಾರ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 154 ರನ್ ಸೇರಿಸಿತು. ಈ ಮೂಲಕ ಭಾರತ 269 ರನ್‌ಗಳ ಮುನ್ನಡೆ ಸಾಧಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಸ್ಮೃತಿ ಮಂಧಾನ ಅವರು ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಇವರು 124 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 69 ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೆ ಯಾಸ್ತಿಕಾ ಭಾಟಿಯಾ ಅವರೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications