ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಲಾರ್ಡ್ಸ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾಸ 22 ರನ್ ಸೋಲು ಕಂಡಿತು. ಆದರೆ ಟೀಮ್ ಇಂಡಿಯಾ ಆಟಗಾರರು ಆಡಿದ ಆಟ ಎಲ್ಲರ ಗಮನ ಸೆಳೆಯಿತು. ಕೊನೆಯ ವಿಕೆಟ್‌ಗೆ ಮೊಹಮ್ಮದ್ ಸಿರಾಜ್ ತೋರಿದ ಹೋರಾಟ ಮನೋಭಾವ ಎಲ್ಲರ ಹುಬ್ಬು ಏರುವಂತೆ ಮಾಡಿತು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಇಂಗ್ಲೆಂಡ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಆಡಿದ ಧಾಟಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ ಮೊಹಮ್ಮದ್ ಸಿರಾಜ್, ಬಶೀರ್ ಅವರ ಎಸೆತವನ್ನು ಡಿಫೆಂನ್ಸ್ ಮಾಡಲು ಹೋದಾಗ, ಚೆಂಡು ಉರುಳುತ್ತಾ ಹೋಗಿ ಬೇಲ್ಸ್ ಎಗರಿಸಿತು. ಈ ದೃಶ್ಯ ಕೋಟ್ಯಾಂತರ ಕ್ರೀಡಾಭಿಮಾನಿಗಳಿಗೆ ನೋವು ತಂದಿದೆ. ಪಂದ್ಯದ ಬಳಿಕ ಸುನಿಲ್ ಗವಾಸ್ಕರ್ ಖಾಸಗಿ ವಾಹಿನಿಯ ಜೊತೆ ಮಾತನಾಡುತ್ತಾ, ಭಾರತದಲ್ಲಿ ಹೀಗೆ ಆಗಿದ್ದರೆ, ಮೊಹಮ್ಮದ್ ಸಿರಜ್ ಔಟ್ ಆಗ್ತಾ ಇರಲಿಲ್ಲ ಎಂದು ತಿಳಿಸಿದ್ದಾರೆ.

ಸುನಿಲ್ ಗವಾಸ್ಕರ್ ಹೀಗೆ ಹೇಳಲು ಕಾರಣ ಸ್ಪಷ್ಟವಾಗಿದೆ. ಅಲ್ಲದೆ ಇದೇ ವಾಹಿನಿಯಲ್ಲಿ ಮಾತನಾಡುತ್ತಾ ಗವಾಸ್ಕರ್ ತಾವು ಏಕೆ ಹೀಗೆ ಹೇಳಿದ್ದು ಎಂಬುದನ್ನು ತಿಳಿಸಿದ್ದಾರೆ. ಅಂದಹಾಗೆ ಇಂಗ್ಲೆಂಡ್‌ನಲ್ಲಿ ಬಳಲಾಗಿರುವ ಬೇಲ್ಸ್ ಕಡಿಮೆ ತೂಕದ್ದಾಗಿರುತ್ತವೆ. ಹೀಗಾಗಿ ಬೌಲ್ ಉರುಳುತ್ತಾ ಹೋಗಿ ಸ್ಟಂಪ್‌ಗೆ ತಾಕುತ್ತಿದ್ದಂತೆ ಬೇಲ್ಸ್ ಬಿದ್ದಿತು. ಆದರೆ ಭಾರತದಲ್ಲಿ ಆಗಿದ್ರೆ ಹೀಗೆ ಆಗ್ತಾ ಇರಲಿಲ್ಲ. ಭಾರತದಲ್ಲಿ ಬೇಲ್ಸ್ ತೂಕ ಕೊಂಚ ಹೆಚ್ಚಿರುತ್ತದೆ ಎಂದು ಗವಾಸ್ಕರ್ ತಿಳಿಸಿದರು.
ಆಗಿದ್ದೇನು?
ನಿಜಕ್ಕೂ ಮೊಹಮ್ಮದ್ ಸಿರಾಜ್ ಒಬ್ಬ ಸೇನಾನಿಯ ರೀತಿ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು 30 ಎಸೆತಗಳನ್ನು ಎದುರಿಸಿ ತಮ್ಮಲ್ಲಿರುವ ಬ್ಯಾಟಿಂಗ್ ಕಲೆಯ ಅನಾವರಣ ಮಾಡಿದ್ದರು. ಶೋಯಿಬ್ ಬಸೀರ್ ಎಸೆದ ಎಸೆತವನ್ನು ಕ್ಲಾಸ್ ಆಗಿ ಡಿಫೆನ್ಸ್ ಮಾಡಿದ್ದ ಸಿರಾಜ್, ಬ್ಯಾಟ್ ತಾಗಿದ ಚೆಂಡು ಬ್ಯಾಟ್ ಕೆಳಗೆ ಬಿದ್ದಿತು. ಬಳಿಕ ಉರುಳುತ್ತಾ ಸ್ಟಂಪ್‌ನತ್ತ ಸಾಗಿ ಬೇಲ್ಸ್ ಎಗರಿಸಿತು.
ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ಜೋ ರೂಟ್ ಶತಕ ಬಾರಿಸಿ ತಂಡಕ್ಕೆ ಅಧಾರವಾದರು. ಇಂಗ್ಲೆಂಡ್ 387 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಭಾರತದ ಪರ ಕೆಎಲ್ ರಾಹುಲ್ ಶತಕ ಬಾರಿಸಿ ಅಬ್ಬರಿಸಿದರು. ಪರಿಣಾಮ ಭಾರತ, ಇಂಗ್ಲೆಂಡ್ ಕಲೆ ಹಾಕಿದಷ್ಟೇ ರನ್ ಕಲೆ ಹಾಕಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 192 ರನ್‌ಗೆ ಆಲೌಟ್ ಆಯಿತು. ಇನ್ನು ಗುರಿಯನ್ನು ಬೆನ್ನಟಿದ ಟೀಮ್ ಇಂಡಿಯಾ 170 ರನ್‌ಗಳಿಗೆ ಆಲೌಟ್ ಆಗಿ ನಿರಾಸೆ ಅನುಭವಿಸಿತು. ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಇನ್ನು ಸರಣಿಯ ನಾಲ್ಕನೇ ಪಂದ್ಯ ಜುಲೈ 23ರಂದು ನಡೆಯಲಿದೆ.