Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಟಿ20 ವಿಶ್ವಕಪ್: ಫೈನಲ್‌ಗೆ ಫ್ರೀ ಪಾಸ್‌ಗಿಂತ ಸೋಲು ಉತ್ತಮ ಎಂದ ದ. ಆಫ್ರಿಕಾ ನಾಯಕಿ

Losing Semi-Final Better Than Free Pass To Final, Says Dane van Niekerk

ಮಹಿಳಾ ಟಿ20 ವಿಶ್ವಕಪ್ ಅಂತಿಮ ಘಟ್ಟಕ್ಕೆ ತಲುಪಿದೆ. ಮೊದಲ ಸೆಮಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಬೇಕಾಗಿತ್ತು. ಆದರೆ ಮಳೆ ಪಂದ್ಯವನ್ನು ಆಹುತಿ ಪಡೆದ ಕಾರಣ ಟೀಮ್ಇಂಡಿಯಾ ನೇರವಾಗಿ ಫೈನಲ್‌ಗೆ ಟಿಕೆಟ್ ಪಡೆದಿದೆ. ಮತ್ತೊಂದು ಸೆಮಿ ಫೈನಲ್‌ನಲ್ಲಿ ದ.ಆಫ್ರಿಕಾ ಮಹಿಳೆಯರು ಆಸ್ಟ್ರೇಲಿಯಾ ವಿರುದ್ಧ ಸೋತು ಶರಣಾಗಿದ್ದಾರೆ.

ಆದರೆ ಈ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಆಡಿದ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದ ನಾಯಕಿ ಡೇನ್ ವಾನ್ ನಿಕೆರ್ಕ್ ಫ್ರೀ ಪಾಸ್ ಪಡೆದು ಫೈನಲ್‌ಗೆ ಪ್ರವೇಶ ಪಡೆಯುವುದಕ್ಕಿಂತ ಸೋಲುವುದು ಉತ್ತಮ ಎಂಬ ಮಾತನ್ನು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ನಾಯಕಿ ಡೇನ್ ವಾನ್ ನಿಕೆರ್ಕ್ ಈ ಮಾತನ್ನು ಹೇಳಿರುವುದು ಟೀಮ್ ಇಂಡಿಯಾವನ್ನು ಉದ್ಧೇಶವಾಗಿಟ್ಟುಕೊಂಡು ಎಂಬುದು ಸ್ಪಷ್ಟವಾಗುತ್ತದೆ. ದಕ್ಷಿಣ ಆಫ್ರಿಕಾ ತಂಡ ಸೋಲು ವಾತಾವರಣವೇ ಕಾರಣ ಎಂಬ ಮಾತನ್ನು ಆಫ್ರಿಕಾ ನಾಯಕಿ ಹೇಳಿಕೊಂಡಿದ್ದಾರೆ.

ವಾತಾವರಣದ ಕಾರಣಕ್ಕೆ ಸೋಲನ್ನು ಕಾಣುವುದು ಉತ್ತಮವಲ್ಲ. ಮುಂದಿನ ದಿನಗಳಲ್ಲಿ ಸೆಮಿ ಫೈನಲ್ ಅಥವಾ ಫೈನಲ್‌ಗೆ ಮೀಸಲು ದಿನವನ್ನು ನಿಗದಿಪಡಿಸುವುದು ಉತ್ತಮ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ಧಾಗಿತ್ತು. ಆದರೆ ಐಸಿಸಿ ನಿಯಮದ ಪ್ರಕಾರ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಒಂದು ಪಂದ್ಯವನ್ನೂ ಸೋಲದೆ 8 ಅಂಕಗಳನ್ನು ಗಳಿಸಿಕೊಂಡಿದ್ದ ಕಾರಣ ಭಾರತ ತಂಡ ನೇರವಾಗಿ ಟಿಕೆಟ್ ಪಡೆದಿತ್ತು.

Story first published: Friday, March 6, 2020, 15:54 [IST]
Other articles published on Mar 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+