ಪವರ್‌ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡಿದ್ದು ಸೋಲಿಗೆ ಕಾರಣ: ಜೋಸ್ ಬಟ್ಲರ್

ಮುಂಬೈ ಇಂಡಿಯನ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸುಲಭವಾಗಿ ಶರಣಾಯಿತು. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಸರ್ವಾಂಘೀನ ಪ್ರದರ್ಶನ ನಿಡಿದ ಮುಂಬೈ ತಂಡ ಅರ್ಹ ಗೆಲುವನ್ನು ಸಂಪಾದಿಸಿಕೊಂಡಿತು. ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಏಕಾಂಗಿ ಹೋರಾಟವನ್ನು ನಡೆಸಿದ ಜೋಸ್ ಬಟ್ಲರ್ ಪಂದ್ಯದ ಬಳಿಕ ಸೋಲಿಗೆ ಕಾರಣವನ್ನು ಹೇಳಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ತಂಡ ತನ್ನ ಆರಂಭಿಕ ಮೂರು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡಿತ್ತು. ಮುಂಬೈ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆಯಲ್ಲಿ ಆರ್‌ಆರ್ ತಂಡ 12 ರನ್‌ಗಳಿಗೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರ ಜೋಸ್ ಬಟ್ಲರ್ 70 ರನ್‌ಗಳ ಕಾಣಿಕೆಯನ್ನು ನೀಡಿದರಾದರು ಆರ್‌ಆರ್ ತಂಡ 57 ರನ್‌ಗಳ ಅಂತರದ ಸೋಲನ್ನು ಕಂಡಿತು.
ಕಳೆದ ಮೂರು ಪಂದ್ಯಗಳಲ್ಲಿ ನಾವು ಅಗ್ರ ಕ್ರಮಾಂಕದಲ್ಲಿ ಒಗ್ಗಟ್ಟಿನ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪವರ್‌ಪ್ಲೇನಲ್ಲಿ ಕಳೆದ ಮೂರು ಪಂದ್ಯಗಳಲ್ಲೂ ಮೂರು ವಿಕೆಟ್‌ಗಳನ್ನು ಕಳೆದುಕೊಂಡೆವು. ಇಂತಾ ಪರಿಸ್ಥಿತಿಯಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಜೋಸ್ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ.
ಖಂಡಿತವಾಗಿಯೂ ಪವರ್ ಪ್ಲೇ ಅಂದರೆ ಬ್ಯಾಟ್ಸ್‌ಮನ್‌ಗಳಿಗೆ ಫೀಲ್ಡಿಂಗ್ ನಿರ್ಬಂಧಗಳನ್ನು ಬಳಸಿಕೊಂಡು ರನ್ ಗಳಿಸಲು ಉತ್ತಮ ಅವಕಾಶ. ಆದರೆ ಬ್ಯಾಟ್ಸ್‌ಮನ್‌ಗಳಾಗಿ ನಾವು ಉತ್ತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ಇದೆಲ್ಲ ನಡೆಯುತ್ತದೆ ಎಂದು ಎನ್‌ಐ ಜೊತೆಗೆ ಮಾತನಾಡಿದ ಬಟ್ಲರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ತನ್ನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ಬಟ್ಲರ್ "ನನ್ನ ಅತ್ಯುತ್ತಮ ಆಟ ಈವರೆಗೆ ಬಂದಿಲ್ಲ. ಆದರೆ ನಾನು ನನ್ನ ಫಾರ್ಮ್‌ಅನ್ನು ಕಂಡುಕೊಳ್ಳುತ್ತಿದ್ದೇನೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಉತ್ತಮ ಸಂಗತಿ ಎಂದು ಹೇಳಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications