ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

Lowest Powerplay scores for KKR in IPL history

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೆಟ್ಟ ದಾಖಲೆ ನಿರ್ಮಿಸಿದೆ. ಪವರ್ ಪ್ಲೇನಲ್ಲಿ ಅತೀ ಕಡಿಮೆ ರನ್ ಗಳಿಸಿದ ತಂಡವಾಗಿ ಇಯಾನ್ ಮಾರ್ಗನ್ ನಾಯಕತ್ವದ ಕೆಕೆಆರ್ ಗಮನ ಸೆಳೆದಿದೆ. ಬುಧವಾರ (ಅಕ್ಟೋಬರ್ 21) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ಈ ಕೆಟ್ಟ ದಾಖಲೆ ನಿರ್ಮಿಸಿದೆ.

ಸತತ ಎರಡು ಮೇಡನ್, 3 ವಿಕೆಟ್ ಸಿರಾಜ್ ಜಿಂದಾಬಾದ್!ಸತತ ಎರಡು ಮೇಡನ್, 3 ವಿಕೆಟ್ ಸಿರಾಜ್ ಜಿಂದಾಬಾದ್!

ಅಬುಧಾಬಿಯಲ್ಲಿ ನಡೆದಿದ್ದ ಐಪಿಎಲ್ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಕಾದಾಡಿದ್ದವು. ಈ ವೇಳೆ ಪವರ್ ಪ್ಲೇನಲ್ಲಿ (ಆರಂಭಿಕ 6 ಓವರ್‌ಗಳಲ್ಲಿ) ಕೋಲ್ಕತ್ತಾ ಪ್ರಮುಖ 4 ವಿಕೆಟ್‌ಗಳನ್ನು ಕಳೆದು ಕೇವಲ 17 ರನ್ ಗಳಿಸಿತು.

1.3ನೇ ಓವರ್‌ನಲ್ಲಿ ಶುಬ್ಮನ್ ಗಿಲ್ 1, 1.4ನೇ ಓವರ್‌ನಲ್ಲಿ ನಿತೀಶ್ ರಾಣಾ 1, 3.3ನೇ ಓವರ್‌ನಲ್ಲಿ ಟಾಮ್ ಬ್ಯಾಂಟನ್ 10 ರನ್‌ಗೆ ವಿಕೆಟ್ ಒಪ್ಪಿಸಿದ್ದರಿಂದ ಪವರ್ ಪ್ಲೇನಲ್ಲಿ ಕೆಕೆಆರ್‌ ಹೆಚ್ಚು ರನ್ ಗಳಿಸಲೇಯಿಲ್ಲ. 17 ರನ್ ಬಾರಿಸಿ ಕೋಲ್ಕತ್ತಾ ಪವರ್ ಪ್ಲೇ ಮುಗಿಸಿ ಕೆಟ್ಟ ದಾಖಲೆ ನಿರ್ಮಿಸಿದೆ.

'ಆತ ಎಬಿ ಡಿವಿಲಿಯರ್ಸ್ ಅಥವಾ ಪೋಲಾರ್ಡ್‌ಗಿಂತ ಕಡಿಮೆಯಿಲ್ಲ': ಸಹ ಆಟಗಾರನನ್ನು ಹೊಗಳಿದ ಸ್ಮಿತ್'ಆತ ಎಬಿ ಡಿವಿಲಿಯರ್ಸ್ ಅಥವಾ ಪೋಲಾರ್ಡ್‌ಗಿಂತ ಕಡಿಮೆಯಿಲ್ಲ': ಸಹ ಆಟಗಾರನನ್ನು ಹೊಗಳಿದ ಸ್ಮಿತ್

ಐಪಿಎಲ್ ಪವರ್‌ ಪ್ಲೇನಲ್ಲಿ ಕೆಕೆಆರ್ ಗಳಿಸಿರುವ ಅತೀ ಕಡಿಮೆ ರನ್ ದಾಖಲೆಗಳು
* 17/4 vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಬುಧಾಬಿ, 2020
* 21/3 vs ಡೆಕ್ಕನ್ ಚಾರ್ಜರ್ಸ್, ಕೇಪ್‌ಟೌನ್, 2009
* 22/4 vs ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈ, 2010
* 24/3 vs ಕಿಂಗ್ಸ್ XI ಪಂಜಾಬ್, ಅಬುಧಾಬಿ, 2014

Story first published: Thursday, October 22, 2020, 10:16 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X