For Quick Alerts
ALLOW NOTIFICATIONS  
For Daily Alerts
 

ಎಸ್‌ಆರ್‌ಎಚ್ ಕಡಿಮೆ ಟೋಟಲ್‌ ಚೇಸ್ ಮಾಡದೆ ಸೋತ ದಾಖಲೆಗಳಿವು

Lowest target failed to be chased down by SRH in IPL history

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 24) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 43ನೇ ಪಂದ್ಯದಲ್ಲಿ ಕಿಂಗ್ಸ್ 11 ಪಂಜಾಬ್ ವಿರುದ್ಧ ಸನ್ ರೈಡರ್ಸ್ ಹೈದರಾಬಾದ್ ರೋಚಕ 12 ರನ್‌ಗಳ ಸೋಲನುಭವಿಸಿದೆ. ಇದರೊಂದಿಗೆ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಪಡೆ ಕೆಟ್ಟ ದಾಖಲೆ ನಿರ್ಮಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ 11 ಪಂಜಾಬ್ ತಂಡ, ಕೆಎಲ್ ರಾಹುಲ್ 27, ಮನ್‌ದೀಪ್‌ ಸಿಂಗ್ 17, ಕ್ರಿಸ್ ಗೇಲ್ 20, ನಿಕೋಲಸ್ ಪೂರನ್ 32, ಗ್ಲೆನ್ ಮ್ಯಾಕ್ಸ್‌ವೆಲ್ 12 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 126 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಡೇವಿಡ್ ವಾರ್ನರ್ 35, ಜಾನಿ ಬೇರ್ಸ್ಟೋವ್ 19, ಮಿನೀಶ್ ಪಾಂಡೆ 15, ವಿಜಯ್ ಶಂಕರ್ 26 ರನ್‌ನೊಂದಿಗೆ 19.5 ಓವರ್‌ಗೆ ಎಲ್ಲ ವಿಕೆಟ್ ಕಳೆದು 114 ರನ್ ಬಾರಿಸಿ ಶರಣಾಗಿದೆ. ಇದು ಹೈದರಾಬಾದ್ ಐಪಿಎಲ್‌ನಲ್ಲಿ ಅತೀ ಕಡಿಮೆ ರನ್‌ ಟೋಟಲ್ ಚೇಸಿಂಗ್ ಮಾಡದ ಕೆಟ್ಟ ದಾಖಲೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

ಎಸ್‌ಆರ್‌ಎಚ್ ತಂಡ ಅತೀ ಕಡಿಮೆ ರನ್‌ ಟೋಟಲ್‌ ಕೂಡ ಚೇಸ್ ಮಾಡದ ಕೆಟ್ಟ ದಾಖಲೆಗಳು
* 127 vs ಕಿಂಗ್ಸ್ 11 ಪಂಜಾಬ್, ದುಬೈ, 2020
* 137 vs ಮುಂಬೈ ಇಂಡಿಯನ್ಸ್, ಹೈದರಾಬಾದ್, 2019
* 149 vs ರೈಸಿಂಗ್ ಪೂಣೆ ಸೂಪರ್‌ಜೈಂಟ್ಸ್, ಹೈದರಾಬಾದ್, 2017

Story first published: Sunday, October 25, 2020, 0:39 [IST]
Other articles published on Oct 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+