For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ 20 ಓವರ್‌ ಆಡಿಯೂ ದಾಖಲಾಗಿರುವ ಕಡಿಮೆ ಟೋಟಲ್‌ಗಳು

Lowest totals batting all 20 overs in IPL history

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 21) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಒಂದಿಷ್ಟು ಸಕಾರಾತ್ಮಕ ದಾಖಲೆಗಳಿಗೆ ಕಾರಣವಾಗಿದ್ದರೆ, ಇನ್ನೊಂದಿಷ್ಟು ಬೇಡದ ದಾಖಲೆಗೂ ಗುರುತಿಸಿಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಆಡಿದ್ದ ಈ ಪಂದ್ಯದಲ್ಲಿ ಕೆಕೆಆರ್ ಹೀನಾಯ ಸೋಲು ಕಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್, ಇಯಾನ್ ಮಾರ್ಗನ್ 30, ಲಾಕಿ ಫಾರ್ಗುಸನ್ 19 ರನ್‌ನೊಂಧಿಗೆ 20 ಓವರ್‌ಗೆ 8 ವಿಕೆಟ್ ಕಳೆದು 84 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ, ದೇವದತ್ ಪಡಿಕ್ಕಲ್ 25, ಆ್ಯರನ್ ಫಿಂಚ್ 16, ಗುರುಕೀರತ್ ಸಿಂಗ್ 21, ಕೊಹ್ಲಿ 18 ರನ್‌ನೊಂದಿಗೆ 13.3 ಓವರ್‌ಗೆ 2 ವಿಕೆಟ್ ಕಳೆದು 85 ರನ್ ಗಳಿಸಿತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ್ದಷ್ಟೇ ಅಲ್ಲ, 20 ಓವರ್ ಆಡಿಯೂ ಐಪಿಎಲ್ ತಂಡವೊಂದು ಬಾರಿಸಿದ ಅತೀ ಕಡಿಮೆ ಟೋಟಲ್ ಆಗಿ ಕೆಕೆಆರ್ ಬಾರಿಸಿದ 84 ರನ್ ಗುರುತಿಸಿಕೊಂಡಿದೆ. ಈ ಕೆಟ್ಟ ದಾಖಲೆಯಲ್ಲೀಗ ಕೆಕೆಆರ್ ಮೊದಲ ಸ್ಥಾನದಲ್ಲಿದೆ.

20 ಓವರ್‌ ಆಡಿಯೂ ಐಪಿಎಲ್‌ನಲ್ಲಿ ದಾಖಲಾಗಿರುವ ಅತೀ ಕಡಿಮೆ ಟೋಟಲ್‌ಗಳು
* 84/8 ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಬುಧಾಬಿ, 2020
* 92/8 ಕಿಂಗ್ಸ್ XI ಪಂಜಾಬ್ vs ಚೆನ್ನೈ ಸೂಪರ್ ಕಿಂಗ್ಸ್, ಡರ್ಬನ್, 2009
* 94/8 ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಜೈಪುರ್, 2011
* 95/9 ಕಿಂಗ್ಸ್ XI ಪಂಜಾಬ್ vs ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈ, 2015

Story first published: Thursday, October 22, 2020, 10:12 [IST]
Other articles published on Oct 22, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+