ಎಲ್‌ಪಿಎಲ್: ವಿಮಾನ ತಪ್ಪಿಸಿಕೊಂಡ ಅಫ್ರಿದಿ, ಗಾಲೆಯ ಆರಂಭಿಕ ಪಂದ್ಯಕ್ಕೆ ಅನುಮಾನ

ಲಂಕಾ ಪ್ರಿಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಆದರೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪ್ರಯಾಣಿಸಬೇಕಿದ್ದ ವಿಮಾನವನ್ನು ತಪ್ಪಿಸಿಕೊಂಡಿದ್ದಾರೆ. ಸೋಮವಾರ ಈ ಬಗ್ಗೆ ಶಾಹಿದ್ ಅಫ್ರಿದಿ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
"ಇಂದು ಬೆಳಗ್ಗೆ ಕೊಲಂಬೋಗೆ ತೆರಳಬೇಕಿದ್ದ ವಿಮಾನವನ್ನು ನಾನು ತಪ್ಪಿಸಿಕೊಂಡಿದ್ದೇನೆ. ಆತಂಕಗೊಳ್ಳುವ ಸಂಗತಿಯೇನಿಲ್ಲ. ಅದಷ್ಟು ಬೇಗನೆ ನಾನು ತಲುಪಲಿದ್ದೇನೆ ಹಾಗೂ ಗಾಲೆ ಗ್ಲಾಡಿಯೇಟರ್ಸ್ ಪರವಾಗಿ ಕಣಕ್ಕಿಳಿಯಲಿದ್ದೇನೆ. ನನ್ನ ತಂಡದ ಇತರ ಸದಸ್ಯರನ್ನು ಸೇರಿಕೊಳ್ಳಲು ಎದುರುನೋಡುತ್ತಿದ್ದೇನೆ" ಎಂದು ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ.
ಶಾಹಿದ್ ಅಫ್ರಿದಿ ತಮ್ಮ ನಿಗದಿತ ವಿಮಾನವನ್ನು ತಪ್ಪಿಸಿಕೊಂಡ ಕಾರಣ ತಂಡವನ್ನು ಶೀಘ್ರವಾಗಿ ಸೇರಿಕೊಳ್ಳಲು ಸಾಧ್ಯವಾಗದಿದ್ದರೆ ಅಫ್ರಿದಿ ಆರಂಭಿಕ ಪಂದ್ಯದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ಶಾಹದ್ ಅಫ್ರಿದಿ ಎಲ್‌ಪಿಎಲ್‌ನಲ್ಲಿ ಗಾಲೆ ಗ್ಲಾಡಿಯೇಟರ್ಸ್‌ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.
ಶ್ರೀಲಂಕಾಗೆ ತೆರಳುತ್ತಿದ್ದಂತೆಯೇ ನಿಯಮದ ಪ್ರಕಾರ ಪ್ರತಿ ಆಟಗಾರನೂ ಕೂಡ ಕ್ವಾರಂಟೈನ್ ಅವಧಿಯನ್ನು ಪೂರೈಸಬೇಕಿದೆ. ಇದರ ಪರಿಣಾಮವಾಗಿ ಶಾಹಿದ್ ಅಫ್ರಿದಿ ಗಾಲೆ ಗ್ಲಾಡಿಯೇಟರ್ಸ್ ತಂಡದ ಆರಂಭಿಕ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಗಾಲೆ ಗ್ಲಾಡಿಯೇಟರ್ಸ್ ತಂಡವನ್ನು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಶಾಹಿದ್ ಅಫ್ರಿದಿ ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ಭನುಕಾ ರಾಜಪಕ್ಸ ತಂಡದಲ್ಲಿದ್ದಾರೆ. ಎಲ್‌ಪಿಎಲ್‌ನಲ್ಲಿ ಗಾಲೆ ಗ್ಲಾಡಿಯೇಟರ್ಸ್ ನವೆಂಬರ್ 27ರಂದು ತನ್ನ ಮೊದಲ ಪಂದ್ಯವನ್ನು ಜಾಫ್ನಾ ಸ್ಟಾಲಿಯನ್ಸ್ ತಂಡದ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications