Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್‌ಪಿಎಲ್: ಅಹ್ಮದ್ ಆಲ್ ರೌಂಡರ್ ಆಟ, ಕೊಲಂಬೋ ಕಿಂಗ್ಸ್‌ಗೆ ಜಯ

LPL 2020: Colombo Kings beat Dambulla Viiking by 6 Wickets

ಕೊಲಂಬೋ: ಹಂಬಂಟೋಟದ ಮಹಿಂದ ರಾಜಪಕ್ಸೆ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಲಂಕಾ ಪ್ರೀಮಿಯರ್ ಲೀಗ್‌ (ಎಲ್‌ಪಿಎಲ್) 20ನೇ ಪಂದ್ಯದಲ್ಲಿ ದಂಬುಲ್ಲ ವೈಕಿಂಗ್ ವಿರುದ್ಧ ಕೊಲಂಬೋ ಕಿಂಗ್ಸ್‌ 6 ವಿಕೆಟ್ ಸುಲಭ ಜಯ ಗಳಿಸಿದೆ. ಖೈಸ್ ಅಹ್ಮದ್ ಅವರ ಆಲ್ ರೌಂಡರ್ ಆಟದ ನೆರವಿನಿಂದ ಕೊಲಂಬೋ 6ನೇ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಂಬುಲ್ಲ ವೈಕಿಂಗ್, ಸಮಿತ್ ಪಟೇಲ್ 26, ನಿರೋಶನ್ ಡಿಕ್ವೆಲ್ಲಾ 65, ಏಂಜೆಲೋ ಪೆರೆರಾ 74, ದಸುನ್ ಶನಕಾ 28 ರನ್‌ನೊಂದಿಗೆ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದು 203 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಕೊಲಂಬೋ ಕಿಂಗ್ಸ್‌, ಲಾರಿ ಇವಾನ್ಸ್ 53, ಡೇನಿಯಲ್ ಬೆಲ್-ಡ್ರಮ್ಮಂಡ್ 14, ಆಶನ್ ಪ್ರಿಯಾಂಜನ್ 47, ತಿಕ್ಶಿಲ ಡೆ ಸಿಲ್ವಾ 31, ಖೈಸಿ ಅಹ್ಮದ್ 50 (22 ಎಸೆತ) ರನ್‌ನೊಂದಿಗೆ 18.5 ಓವರ್‌ಗೆ 4 ವಿಕೆಟ್ ಕಳೆದು 205 ರನ್ ಗಳಿಸಿತು.

ದಂಬುಲ್ಲ ಇನ್ನಿಂಗ್ಸ್‌ನಲ್ಲಿ ಏಂಜಲೋ ಮ್ಯಾಥ್ಯೂಸ್ 1, ಖೈಸ್ ಅಹ್ಮದ್ 23 ರನ್‌ಗೆ 2 ವಿಕೆಟ್ ಪಡೆದರೆ, ಕೊಲಂಬೋ ಇನ್ನಿಂಗ್ಸ್‌ನಲ್ಲಿ ಸಮಿತ್ ಪಟೇಲ್ 1, ಮಲಿಂದ ಪುಸ್ಪಕುಮಾರ 1, ಅನ್ವರ್ ಅಲಿ 1, ದಸುನ್ ಶನಕಾ 1 ವಿಕೆಟ್‌ ಪಡೆದರು. ಖೈಸ್ ಅಹ್ಮದ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Saturday, December 12, 2020, 14:24 [IST]
Other articles published on Dec 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+