Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್‌ಪಿಎಲ್: ಚಾರ್ಲ್ಸ್ ಸ್ಫೋಟಕ ಅರ್ಧಶತಕ, ಫೈನಲ್‌ಗೆ ಜಾಫ್ನಾ ಸ್ಟಾಲಿಯನ್ಸ್

LPL 2020: Jaffna Stallions beat Dambulla Viiking by 37 runs

ಹಂಬಂಟೋಟ: ಹಂಬಂಟೋಟದ ಮಹಿಂದ ರಾಜಪಕ್ಸ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಸೋಮವಾರ (ಡಿಸೆಂಬರ್ 14) ನಡೆದ ಲಂಕಾ ಪ್ರೀಮಿಯರ್ ಲೀಗ್ ಸೆಮಿಫೈನಲ್ 2 ಪಂದ್ಯದಲ್ಲಿ ದಂಬುಲ್ಲ ವೈಕಿಂಗ್ಸ್ ವಿರುದ್ಧ ಜಾಫ್ನಾ ಸ್ಟಾಲಿಯನ್ಸ್‌ 37 ರನ್ ಜಯ ಗಳಿಸಿದೆ. ಜಾನ್ಸನ್ ಚಾರ್ಲ್ಸ್ ಸ್ಫೋಟಕ ಅರ್ಧ ಶತಕದ ನೆರವಿನಿಂದ ಸ್ಟಾಲಿಯನ್ ಫೈನಲ್‌ಗೆ ಪ್ರವೇಶಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಜಾಫ್ನಾ ಸ್ಟಾಲಿಯನ್ಸ್, ಅವಿಷ್ಕಾ ಫೆರ್ನಾಂಡೋ 39, ಜನ್ಸನ್ ಚಾರ್ಲ್ಸ್ 76 (56 ಎಸೆತ), ಅಸಲಂಕ 10, ನಾಯಕ ತಿಸರ ಪೆರೆರಾ 7, ವನಿಂದು ಹಸರಂಗ 14, ಚತುರಂಗ ಡೆ ಸಿಲ್ವಾ 6 ರನ್‌ನೊಂದಿಗೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 165 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ದಂಬುಲ್ಲ ವೈಕಿಂಗ್, ಸಮಿತ್ ಪಟೇಲ್ 10, ನಿರೋಷನ್ ಡಿಕ್ವೆಲ್ಲಾ 29, ಉಪುಲ್ ತರಂಗ 33, ರಮೇಶ್ ಮೆಂಡಿಸ್ 26, ಏಂಜೆಲೋ ಪೆರೆರಾ 5, ದಸುನ್ ಶನಕಾ 5, ಅನ್ವರ್ ಅಲಿ 5 ರನ್‌ನೊಂದಿಗೆ 19.1ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 128 ರನ್ ಬಾರಿಸಿ ಶರಣಾಯಿತು.

ಜಾಫ್ನಾ ಸ್ಟಾಲಿಯನ್ಸ್ ಇನ್ನಿಂಗ್ಸ್‌ನಲ್ಲಿ ವೈಕಿಂಗ್‌ನ ಮಲಿಂದ ಪುಷ್ಪಕುಮಾರ 2, ಲಹಿರು ಕುಮಾರ, ಅನ್ವರ್ ಅಲಿ ಮತ್ತು ರಮೇಶ್ ಮೆಂಡಿಸ್ ತಲಾ 1 ವಿಕೆಟ್ ಪಡೆದರೆ, ದಂಬುಲ್ಲ ಇನ್ನಿಂಗ್ಸ್‌ನಲ್ಲಿ ವನಿಂದು ಹಸರಂಗ 3, ಧನಂಜಯ ಡೆ ಸಿಲ್ವಾ, ಚರಿತ್ ಅಸಲಂಕಾ, ಡುವಾನ್ನೆ ಆಲಿವಿಯರ್ ಮತ್ತು ಚತುರಂಗ ಡೆ ಸಿಲ್ವಾ ತಲಾ 1 ವಿಕೆಟ್ ಪಡೆದರು. ಡಿಸೆಂಬರ್ 16ರಂದು ಫೈನಲ್‌ನಲ್ಲಿ ಜಾಫ್ನಾ ಮತ್ತು ಗ್ಯಾಲೆ ಗ್ಲಾಡಿಯೇಟರ್ಸ್ ಕಾದಾಡಲಿವೆ.

Story first published: Monday, December 14, 2020, 23:40 [IST]
Other articles published on Dec 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+