Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್‌ಪಿಎಲ್ 2020: ಲಂಕನ್ ಪ್ರೀಮಿಯರ್ ಲೀಗ್ ನವೆಂಬರ್‌ಗೆ ಮುಂದೂಡಿಕೆ

LPL 2020: Lankan Premier League Postponed to Last Week of November

ಕೊಲಂಬೋ, ಆಗಸ್ಟ್ 11: ನಿರೀಕ್ಷೆಯಂತೆಯೇ ಲಂಕಾ ಪ್ರೀಮಿಯರ್ ಲೀಗ್ ಮುಂಡೂಡಲ್ಪಟ್ಟಿದೆ. ಆಗಸ್ಟ್ 28ರಂದು ಎಲ್‌ಪಿಎಲ್ ನಡೆಸಲು ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಟೂರ್ನಿ ನವೆಂಬರ್ ತಿಂಗಳ ಕೊನೇ ವಾರಕ್ಕೆ ಮುಂದೂಡಲ್ಪಟ್ಟಿರುವುದನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಖಾತರಿಪಡಿಸಿದೆ.

'ನಾವು ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ ಮತ್ತು ದೇಶಕ್ಕೆ ಪ್ರವೇಶಿಸುವ ಯಾರಿಗಾದರೂ 14 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಆಗಸ್ಟ್ ಕೊನೆಯಲ್ಲಿ ಪಂದ್ಯಾವಳಿಯನ್ನು ಆಡುವುದು ಕಷ್ಟ,' ಎಂದು ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಹೇಳಿದ್ದಾರೆ.

'ಐಪಿಎಲ್ ಮುಕ್ತಾಯದ ಬಳಿಕ ಅಂದರೆ ನವೆಂಬರ್ ಮಧ್ಯದಲ್ಲಿ ನಾವು ಎಲ್‌ಪಿಎಲ್ ನಡೆಸುತ್ತೇವೆ,' ಎಂದು ಶಮ್ಮಿ ಹೇಳಿದ್ದಾರೆ. ಕೊಲಂಬೋ, ಕ್ಯಾಂಡಿ, ಗ್ಯಾಲೆ, ದಂಬುಲ್ಲ ಮತ್ತು ಜಾಫ್ನಾ ಹೆಸರಿನ ಐದು ತಂಡಗಳು ಸ್ಪರ್ಧಿಸುವ ಲಂಕನ್ ಪ್ರೀಮಿಯರ್ ಲೀಗ್‌ ಅನ್ನು ಆಗಸ್ಟ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು.

ಆಗಸ್ಟ್‌ನಲ್ಲಿ ಎನ್‌ಪಿಎಲ್‌ ಅನ್ನು ನಡೆಸಲು ಶ್ರೀಲಂಕಾ ಕ್ರಿಕೆಟ್ ನಿರ್ಧರಿಸಿತ್ತಾದರೂ ಅಲ್ಲಿ ಸೂಕ್ತ ತಯಾರಿಯ ಕೊರತೆಯಿತ್ತು. ಟೂರ್ನಿಯ ಬಗ್ಗೆ ಲಂಕಾಕ್ಕೆ ಸ್ಪಷ್ಟತೆಯಿರಲಿಲ್ಲ. ಜೊತೆಗೆ ಕೊಲಂಬೋ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸದ ಕಾರಣ ಅಂತಿಮವಾಗಿ ಟೂರ್ನಿ ಮುಂದೂಡುವ ನಿರ್ಧಾರ ತಾಳಲಾಗಿದೆ.

Story first published: Wednesday, August 12, 2020, 10:13 [IST]
Other articles published on Aug 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+