Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಂಕಾ ಪ್ರೀಮಿಯರ್ ಲೀಗ್: ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಬಾಬರ್ ಅಜಂ

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಶತಕ ಸಿಡಿಸಿರುವ ಬಾಬರ ಅಜಂ ಟಿ20 ಮಾದರಿಯಲ್ಲಿ ಕನಿಷ್ಠ 10 ಶತಕಗಳನ್ನು ಸಿಡಿಸಿದ ಕೇವಲ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಗಾಲೆ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊಲಂಬೋ ಸ್ಟ್ರೈಕರ್ಸ್ ಪರವಾಗಿ ಮ್ಯಾಚ್ ವಿನ್ನಿಂಗ್ ಶತಕ ಬಾರಿಸುವ ಮೂಲಕ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಅವರೊಂದಿಗೆ ಎಲೈಟ್ ಪಟ್ಟಿಯನ್ನು ಸೇರಿಕೊಂಡಿದ್ದಾರೆ.

ಲಂಕಾ ಪ್ರೀಮಿಯರ್ ಲೀಗ್‌ನ ಗಾಲೆ ಟೈಟನ್ಸ್ ಹಾಗೂ ಕೊಲಂಬೋ ಸ್ಟ್ರೈಕರ್ಸ್ ತಂಡಗಳು ಇಂದು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಗಾಲೆ ಟೈಟನ್ಸ್ ತಂಡ ಭರ್ಜರಿ 189 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು. ಈ ಬೃಜತ್ ಮೊತ್ತವನ್ನು ಕೊಲಂಬೋ ಸ್ಟ್ರೈಕರ್ಸ್ ಬೆನ್ನಟ್ಟಿದ್ದು ಈ ಸಂದರ್ಭದಲ್ಲಿ ಬಾಬರ್ ಅಜಂ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ.

LPL 2023: Babar Azam Joins Elite Club: Second Man to Achieve 10 T20 Centuries After Chris Gayle

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಬಾಬರ್ ಸಾಧಾರಣ ಆರಂಭವನ್ನು ಪಡೆದುಕೊಂಡಿದ್ದರು. ಮೊದಲ ಪಂದ್ಯದಲ್ಲಿ ಕೇವಲ 7 ರನ್‌ಗೆ ಔಟಾಗಿದ್ದ ಬಾಬರ್ ಅದಾದ ಬಳಿಕ ತಮ್ಮ ಲಯವನ್ನು ಕಂಡುಕೊಂಡಿದ್ದರು. ಎರಡನೇ ಪಂದ್ಯದಲ್ಲಿ 59 ರನ್‌ ಸಿಡಿಸಿದ್ದ ಅವರು ನಂತರದ ಪಂದ್ಯದಲ್ಲಿ 41 ರನ್ ಬಾರಿಸಿದ್ದಾರೆ. ಇದೀಗ ನಾಲ್ಕನೇ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಶತಕ ಸಿಡಿಸಿ ಗಮನಸೆಳೆದಿದ್ದಾರೆ.

ಟಿ20 ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಇದ್ದು ಬರೊಬ್ಬರಿ 22 ಶತಕ ಸಿಡಿಸಿದ್ದಾರೆ. ಬಾಬರ್ ಅಜಂ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು 10 ಶತಕ ಸಿಡಿಸಿದಂತಾಗಿದೆ. ಇನ್ನು ಭಾರತದ ದಿಗ್ಗಜ ವಿರಾಟ್ ಕೊಹ್ಲಿ ಏಷ್ಯಾ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು 8 ಶತಕಗಳನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ ಕೊಹ್ಲಿ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಕ್ರಿಸ್ ಗೇಲ್ - 463 ಪಂದ್ಯಗಳಲ್ಲಿ 22 ಶತಕ
ಬಾಬರ್ ಆಮ್ - 264 ಪಂದ್ಯಗಳಲ್ಲಿ 10 ಶತಕ
ಮೈಕೆಲ್ ಕ್ಲಿಂಗರ್ - 206 ಪಂದ್ಯಗಳಲ್ಲಿ 8 ಶತಕ
ಡೇವಿಡ್ ವಾರ್ನರ್ - 356 ಪಂದ್ಯಗಳಲ್ಲಿ 8 ಶತಕ
ವಿರಾಟ್ ಕೊಹ್ಲಿ - 374 ಪಂದ್ಯಗಳಲ್ಲಿ 8 ಶತಕ

ಪಾಕಿಸ್ತಾನದ ಆಟಗಾರ ಬಾಬರ್ ಅಜಂ ಟಿ20 ಮಾದರಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿಯೂ ಬಾಬರ್ಅಜಂ ಉತ್ತಮ ದಾಖಲೆ ಹೊಂದಿದ್ದು ಚುಟುಕು ಮಾದರಿಯಲ್ಲಿ ಒಟ್ಟು ಮೂರು ಶತಕಗಳನ್ನು ಬಾರಿಸಿ ಗಮನಸೆಳೆದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಇನ್ನು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಬಾಬರ್ ಅಜಂ ಆಡುತ್ತಿರುವ ಕೊಲಂಬೋ ಸ್ಟ್ರೈಕರ್ಸ್ ತಂಡದ ನಾಯಕತ್ವದ ಜವಾಬ್ಧಾರಿಯನ್ನು ನಿರೋಶನ್ ಡಿಕ್ವೆಲ್ಲಾ ವಹಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಕೊಲಂಬೋ ಸ್ಟ್ರೈಕರ್ಸ್ ತಮಡ ಈವರೆಗೆ 4 ಪಂದ್ಯಗಳನ್ನು ಆಡಿದ್ದು ಎರಡು ಗೆಲುವು ಎರಡು ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Story first published: Monday, August 7, 2023, 20:17 [IST]
Other articles published on Aug 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+