ಅಶ್ಲೀಲ ಪದ ಬಳಿಸಿ ಟೀಕೆಗೆ ಗುರಿಯಾದ ರಿಷಭ್ ಪಂತ್
ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಈ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಎಲ್‌ಎಸ್‌ಜಿ ಟೂರ್ನಿಯಿಂದ ಹೊರ ನಡೆದಿದೆ. ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಎಲ್‌ಎಸ್‌ಜಿ ಮತ್ತೊಂದು ಸೋಲು ಕಂಡಿದೆ. ಈ ಸೋಲು ತಂಡದ ನಾಯಕ ರಿಷಭ್ ಪಂತ್ ಅವರನ್ನು ಹತಾಶರನ್ನಾಗಿಸಿದೆ. ಪರಿಣಾಮ ಪಂದ್ಯದ ಬಳಿಕ ನೇರಪ್ರಸಾರದಲ್ಲಿ ಮಾತನಾಡಿದ ಅವರು ಅಸಭ್ಯ ಪದವನ್ನು ಬಳಸಿದ್ದರಿಂದ ಈಗ ಟೀಕೆಗೆ ಗುರಿಯಾಗಿದ್ದಾರೆ. ರಿಷಭ್ ಅವರ ಹೇಳಿಕೆ ಈಗ ಸಖತ್ ವೈರಲ್ ಆಗುತ್ತಿದೆ.
ಎಲ್‌ಎಸ್‌ಜಿ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 220 ರನ್ ಸೇರಿಸಿತು. ತಂಡದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ 57 ಎಸೆತಗಳಲ್ಲಿ 96 ರನ್ ಬಾರಿಸಿದರೆ, ಜೋಶ್ ಇಂಗ್ಲಿಸ್ 60 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಸೇರಿಸಿ ಜಯ ಸಾಧಿಸಿತು. ಈ ಮೂಲಕ ರಾಯಲ್ಸ್ ತನ್ನ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ರಿಷಭ್ ಪಂತ್, ಮಧ್ಯಮ ಮತ್ತು ಅಂತಿಮ ಓವರ್‌ಗಳಲ್ಲಿ ಜೋಫ್ರಾ ಆರ್ಚರ್ ಅವರ ಬೌಲಿಂಗ್ ನಿಜವಾಗಿಯೂ ಉತ್ತಮವಾಗಿತ್ತು. ತಂಡವು ಇನ್ನೂ ಐದರಿಂದ ಹತ್ತು ರನ್ ಗಳಿಸಬಹುದಿತ್ತು ಎಂದು ಪಂತ್ ಒಪ್ಪಿಕೊಂಡರು. ತಂಡದ ಆರಂಭ ಭರ್ಜರಿಯಾಗಿತ್ತು. ಆದರೆ ಕೊನೆಯ ಓವರ್‌ಗಳಲ್ಲಿ ನಾವು ಅಂದುಕೊಂಡ ರನ್‌ಗಳು ಬರಲಿಲ್ಲ ಎಂದು ರಿಷಭ್ ತಿಳಿಸಿದರು.
ಅಶ್ಲೀಲ ಪದ ಬಳಕೆ
ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಅನುಭವವು ತಂಡಕ್ಕೆ ಸಹಾಯಕ ಇದನ್ನು ಒಪ್ಪಿಕೊಳ್ಳುವ ವಿಷಯ. ಅನುಭವವನ್ನು ರಾತ್ರೋರಾತ್ರಿ ಪಡೆಯಲು ಸಾಧ್ಯವಿಲ್ಲ. ಆಟಗಾರರು ಆ ಮಟ್ಟವನ್ನು ತಲುಪಲು ವರ್ಷಗಳೇ ಬೇಕಾಗುತ್ತದೆ. ನಾವು ನಿರೀಕ್ಷಿಸಿದಂತೆ ಪಂದ್ಯಗಳು ನಡೆದಿಲ್ಲ. ಆ ಕಾರಣಕ್ಕಾಗಿ ನಾವು ಒಳ್ಳೆಯ ತಂಡ ಅಲ್ಲ ಎಂದು ಏನು ಅಲ್ಲ. ನಮ್ಮದು ಒಳ್ಳೆಯ ಫ.... (ಅಶ್ಲೀಲ ಪದ ಬಳಕೆ) ತಂಡ ಎಂದು ಹೇಳಿದರು. ನೇರ ಪ್ರಸಾರದಲ್ಲಿ ಇಂತಹ ಅಶ್ಲೀಲ ಪದ ಬಳಕೆ ಮಾಡಿದ ಬಳಿಕ ಪಂತ್ ಕ್ಷಮೆಯನ್ನು ಯಾಚಿಸಲಿಲ್ಲ. ಈ ಪದವನ್ನು ಕೇಳುತ್ತಿದ್ದಂತೆ ನಿರೂಪಕ ಇಯಾನ್ ಬಿಷಪ್ ಸಂದರ್ಶನವನ್ನು ಕೊನೆಗೊಳಿಸಿದರು. ಪಂತ್ ಈ ರೀತಿ ಹೇಳಿಕೆ ನೀಡಿದ್ದು ಏಕೆ ಎಂಬ ಪ್ರಶ್ನೆ ಈಗ ಮೂಡುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications